ಚನ್ನರಾಯಪಟ್ಟಣ: ಪಟ್ಟಣದ ಮೇಗಲಕೇರಿ ಬಡಾವಣೆ ನಿವಾಸಿ ಅರುಣ್ ಕುಮಾರ ಬಿನ್ ಜಯರಾಮ (29) ಇತ್ತೀಚೆಗೆ ಕೆಲಸಕ್ಕೆಂದು ಹೋದವನು ಹಿಂತಿರುಗಿ ಬಂದಿಲ್ಲ. 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾನೆ. ಹಳದಿ ಬಣ್ಣದ ಟಿ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.