ಕಕ್ಕೇರಿ ಗ್ರಾಮದಲ್ಲಿ ರೈತ ದಿನ ಆಚರಿಸಲಾಯಿತು. ರಾಮಾನಂದ ಸ್ವಾಮೀಜಿ, ಕಿಶೋರ ಮಿಠಾರಿ, ರವಿರಾಜ ಕಂಬಳಿ, ಸುರೇಶ ತಿಗಡಿ, ಕೊಟ್ರೇಶ ಹಿರೇಮಠ ಇತರರಿದ್ದರು.
ಕಕ್ಕೇರಿ: ಕಷ್ಟಪಟ್ಟು ದುಡಿಯುವ ರೈತರು ಜಗತ್ತಿನ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ಧಾರೂಢ ಮಠದ ರಾಮಾನಂದ ಸ್ವಾಮೀಜಿ ಹೇಳಿದರು.
ಸ್ಥಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ರೈತ ಸಂ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಿಲ ಕರ್ನಾಟಕ ರೈತ ಸಂದ ಉಪಾಧ್ಯ ಕಿಶೋರ ಮಿಠಾರಿ, ರವಿರಾಜ ಕಂಬಳಿ ಮಾತನಾಡಿ, ರೈತ ಸಾಲಗಾರನಲ್ಲ. ಸರ್ಕಾರವೇ ಬಾಕಿದಾರ. ರೈತರ ಬೆಳೆಗಳಿಗೆ ಸರ್ಕಾರ ಸೂಕ್ತ ಬೆಲೆ ನಿಗದಿಗೊಳಿಸಿ ನೆರವಿಗೆ ಮುಂದಾಗಬೇಕು ಎಂದರು.
ಸಂದ ಜಿಲ್ಲಾ ಸಂಚಾಲಕ ದತ್ತಾ ಬಿಡಕರ, ತಾಲೂಕು ಉಪಾಧ್ಯಕ್ಷ ಅಂತೋನ ಸೋಜ, ಸುರೇಶ ತಿಗಡಿ, ಕೊಟ್ರೇಶ ಹಿರೇಮಠ, ಮಾರುತಿ ಅನಿಗೋಳ, ಕೀರಪ್ಪ ಮಡ್ಡಿಮನಿ, ಉದ್ದಪ್ಪ ಬನೋಸಿ, ಮೋಹನ ಪತ್ತಾರ, ಬಾಳಪ್ಪ ಗೋಲಿಹಳ್ಳಿ, ನಾಗಪ್ಪ ಗಿರಿಯಾಲ, ರಮೇಶ ವೀರಾಪುರ ಇತರರಿದ್ದರು.