ಯಾದಗಿರಿಯ ದಾಸಬಾಳಧೀಶ್ವರ ಮಠದಲ್ಲಿ ಗುರುವಾರ ನಡೆದ ಧರ್ಮಸಭೆಯನ್ನು ರುಕ್ಮಾಪುರದ ಶ್ರೀಗಳು, ವೀರೇಶ್ವರ ಶ್ರೀಗಳು ಉದ್ಘಾಟಿಸಿದರು. ನಾಗರತ್ನ ಕುಪ್ಪಿ, ಮಂಜುಳಾ ಗೂಳಿ, ಡಾ.ಅಮೋ ಸಿದ್ದೇಶ್ವರ ಇತರರಿದ್ದರು.
- ರುಕ್ರಮಾಪುರದ ಗುರುಶಾಂತಮೂರ್ತಿ ಶ್ರೀ ಮೆಚ್ಚುಗೆ
- ದಾಸಬಾಳಧೀಶ್ವರ ಮಠದಲ್ಲಿ ಕಾರ್ಯಕ್ರಮ
ಯಾದಗಿರಿ : ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದ್ದು, ಈ ಮಠದಲ್ಲಿ ಪೂಜ್ಯರು, ಮಹಿಳೆಯರಿಗೆ ಅರಿಶಿಣ, ಕುಂಕುಮ ನೀಡಿ ಗೌರವಿಸುವ ಕಾರ್ಯ ಕೃತತೆಯಿಂದ ಕೂಡಿದೆ ಎಂದು ಸುರಪುರ ತಾಲೂಕಿನ ರುಕ್ಮಾಪುರನ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ದಾಸಬಾಳಧೀಶ್ವರ ಮಠದಲ್ಲಿ ದವನದ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಶ್ರೀಮಠವು ಪ್ರವರ್ಧಮಾನಕ್ಕೆ ಬರಲು ಶ್ರೀಗಳು ಸಾಕಷ್ಟು ಶ್ರಮಿಸಿದ್ದು, ಹೀಗಾಗಿ ಅವರ ಕಾರ್ಯ ಶ್ಲಾನೀಯ ಎಂದರು.
ಶಹಾಪುರದ ಚರಬಸವೇಶ್ವರ ಗದ್ದುಗೆಯ ಬಸವಾರ್ಯ ಶರಣರು ಮಾತನಾಡಿ, ಈ ಮಠದಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಶ್ರೀಗಳು ಭಕ್ತರಲ್ಲಿ ತಾಳ್ಮೆ, ಸಹನೆ ಮತ್ತು ಶಾಂತಿಯುತ ಬದುಕು ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಖಂಡೆ ನಾಗರತ್ನ ಕುಪ್ಪಿ ಮಾತನಾಡಿ, ಸರ್ವರನ್ನು ಸಮಾನತೆಯಿಂದ ಕಾಣುವ ಏಕೈಕ ಮಠ ಇದಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಾನಾಮೃತವನ್ನು ಧಾರೆ ಎರೆಯುತ್ತಿರುವ ವೀರೇಶ್ವರ ಶ್ರೀಗಳ ಕಾರ್ಯ ಅತ್ಯಂತ ಶ್ಲಾನೀಯ ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಡಾ.ಜ್ಯೋತಿಲತಾ ತಡಿಬಿಡಿಮಠ, ಭಾರತೀಯ ಸಂಸತಿ ನಶಿಸಿದರೆ ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ನಷ್ಟವಿದೆ. ಸಂಸತಿಗೆ ನಮ್ಮ ದೇಶದಲ್ಲಿ ಅದ್ಬುತವಾದ ಶಕ್ತಿಯಿದೆ.ಕಾರಣ, ಪರಕೀಯರು ಸಹ ನಮ್ಮ ದೇಶದ ಸಂಸತಿಯನ್ನು ಅನುಸರಿಸುತ್ತಾರೆ. ಕಾರಣ ನಮ್ಮ ಧಾರ್ಮಿಕತೆಗೆ ವೈಾನಿಕ ಸಂಭಂದವಿದೆ. ಅದನ್ನು ಸರಿಸುವುದರಿಂದ ಎಲ್ಲ ರೀತಿಯ ಲಾಭವೂ ಇದೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.ಸಮಾಜದಲ್ಲಿ ತಾಯಿಯ ಋಣ ಬಹಳ ದೊಡ್ಡದು. ಮಠದಲ್ಲಿ ಅಂತಹ ತಾಯಂದಿರಿಗೆ ಗೌರವಿಸುತ್ತಿರುವುದು ನೀಜಕ್ಕೂ ನಮ್ಮ ಪರಂಪರೆ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಸಾಯಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಒಡೆಯರಾದ ವೀರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಮಂಜುಳಾ ೂಳಿ, ಲ್ಮ ಮಾಲಿ ಪಾಟೀಲ್, ಸೋಮನಗೌಡ ಪೊಲೀಸ್ ಪಾಟೀಲ್, ಬೀರಪ್ಪಾ ಪೂಜಾರಿ, ರವಿ ಜಾಕಾ, ಡಾ.ಅಮೋ ಸಿದ್ದೇಶ್ವರ ಸೇರಿದಂತೆಯೇ ಇತರರಿದ್ದರು.ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಅವರು ಬೆಳಗ್ಗೆ ಮಠಕ್ಕೆ ಆಗಮಿಸಿ ಶ್ರೀಗಳಿಗೆ ದರ್ಶನ ಪಡೆದರು.
ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಮಲ್ಲಿಕಾರ್ಜುನ ಸ್ವಾಮಿ, ವೀರಯ್ಯ ಸ್ವಾಮಿ ಹಿರೇಮಠ, ಸಿದ್ದಯ್ಯ ಸ್ವಾಮಿ, ಮಲ್ಲಿಕಾರ್ಜುನ ಶಾಸಿಗಳು ನಡೆಸಿಕೊಟ್ಟರು. ಸಂಜೆ ಹೊನಲು ಬೆಳಕಿನಲ್ಲಿ ಪಂಚತನಾರತಿ, ಲ ದೀಪೋತ್ಸವ ಜರುಗಿದವು.ವೀರಭದ್ರ ದೇವರ ವೀರಗಾಸೆ, ಶಿವಕೀರ್ತನೆ, ಭಜನೆ ಶರಣರಿಂದ ಅನುಭಾವ, ವಚನ ಗಾಯನ ಮತ್ತು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ಜರುಗಿದವು.