The work of uniting Dalits 
ರಾಜ್ಯ

ದಲಿತರನ್ನು ಒಕ್ಕಲಿಬ್ಬಿಸುವ ಕೆಲಸ

ತುಮಕೂರು ಡೆಸ್ಕ್
ತುರುವೇಕೆರೆ: ದಲಿತರಿಗೆ ಮುಂಜೂರಾಗಿರುವ ಜಮೀನಿನಲ್ಲಿ ದಲಿತರು ಉಳುಮೆ ಮಾಡಲು ಬಿಡದೇ ತಾಲೂಕು ಆಡಳಿತ ಹಾಗೂ ದಂಡಿನಶಿವರ ಪೊಲೀಸರು ದಲಿತರನ್ನು ಒಕ್ಕಲಿಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಎಸ್‌ಎಸ್ ಸಂಘಟನೆಯಿಂದ ಹಂಪಲಾಪುರ ಸಮೀಪದ ಜಮೀನನಲ್ಲಿ ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದರು.
ಡಿಎಸ್‌ಎಸ್‌ನ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ, ಬಿಸಿ ಕಾವಲ್ ಸ.ನಂ.1 ರಲ್ಲಿ ಅನೇಕ ದಲಿತ ರೈತರು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮುಂಜೂರಾತಿ ಪತ್ರ ಪಡೆದಿದ್ದಾರೆ ಹಾಗೂ ಸುಬ್ಬಣ್ಣ ಬಿನ್ ಚೌಡಪ್ಪ ಸುಮಾರು 20 ಎಕರೆ ಜಮೀನು ಖರೀದಿಸಿದ್ದಾರೆ. ಆದರೆ ತಾಲೂಕು ಆಡಳಿತ ಮಂಜೂರಾದ ಜಮೀನುಗಳು ಅರಣ್ಯಕ್ಕೆ ಸೇರಿದೆ ಎಂದು ದಲಿತರನ್ನು ಒಕ್ಕಲ್ಲೆಬ್ಬಿಸುವ ಕೆಲಸ ಮಾಡುತ್ತಿದೆ. ದಲಿತರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರು ಜಮೀನಿನ ಕೆಲಸಕ್ಕೆ ಬಂದಿದ್ದ ಜೆಸಿಬಿ, ಟ್ರ್ಯಾಕ್ಟರ್‌ಗಳನ್ನು ಎದುರಿಸಿ ವಾಪಸ್ಸ್ ಕಳುಹಿಸಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಮುಖಂಡರಾದ ಕೆ.ಕುಮಾರ್, ಷಡಕ್ಷರಿಸ್ವಾಮಿ, ರವಿಕಿರಣ್, ಮಂಜುನಾಥ್, ಮಂಜು, ಸುಬ್ಬಣ್ಣ, ಲಕ್ಷ್ಮಯ್ಯ, ಕೃಷ್ಣಮೂರ್ತಿ, ಮೋಹನ್, ಶಿವಶೇಖರ್, ತಿಮ್ಮಯ್ಯ, ನರಸಿಂಹಯ್ಯ, ಕೃಷ್ಣಪ್ಪ, ಬ್ಯಾಟರಂಗಪ್ಪ ಇತರರಿದ್ದರು.