ಕರಡಕಲ್ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಕೋರಿಸಿದ್ದೇಶ್ವರ 26ನೇ ಜಾತ್ರಾ ಮಹೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.
- ಸಚಿವ ಶರಣಬಸಪ್ಪ ದರ್ಶನಾಪುರ ಬಣ್ಣನೆ
- ಕರಡಕಲ್ನಲ್ಲಿ ಸಾಮೂಹಿಕ ವಿವಾಹ
ಕೆಂಭಾವಿ: ಈ ಭಾಗದ ಮಠ ಮಾನ್ಯಗಳು ಧಾರ್ಮಿಕತೆ ಕಾರ್ಯದ ಜತೆಗೆ ಸಾಮಾಜಿಕ ಕಾರ್ಯಗಳು ಹಾಗೂ ಯುವಕರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಶ್ಲಾನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಬಣ್ಣಿಸಿದರು.
ಕರಡಕಲ್ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರಡಕಲ್ ಕೋರಿಸಿದ್ದೇಶ್ವರ 26ನೇ ಜಾತ್ರಾ ಮಹೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋರಿಸಿದ್ದೇಶ್ವರರ ಪುಣ್ಯ ೇತ್ರವಾದಲ್ಲಿ ನವ ಜೀವನಕ್ಕೆ ಕಾಲಿಟ್ಟ ದಂಪತಿಗಳ ಜೀವನ ಸುಖಮಯವಾಗಲೆಂದು ಶುಭ ಹಾರೈಸಿದರು.
ಬಡ ಜನರು ವಿವಾಹ ಹೆಸರಿನಲ್ಲಿ ಸಾಲ ಸೂಲ ಮಾಡಿ ಮದುವೆ ಮಾಡುವದನ್ನು ತಪ್ಪಿಸಲು ಸಾಮೂಹಿಕ ವಿವಾಹ ಉತ್ತಮ ನಡೆಯಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಿ, ಮಠಗಳ ಏಳ್ಗೆಗಾಗಿ ಮಠದ ಭಕ್ತರ ಜೊತೆಜೊತೆಗೆ ನಾವು ನಿಮ್ಮೊಂದಿಗಿದ್ದೇವೆ, ಈಗಾಗಲೇ ಸಮುದಾಯ ಭವನಕ್ಕೆ 50 ಲಕ್ಷ ರೂ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು.
ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಸ್ತಾವಿಕ ಮಾತನಾಡಿದರು. ಪೀಠಾಧಿಪತಿ ಶ್ರೀ ಶಾಂತರುದ್ರಮುನಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ, ಕೆಂಭಾವಿ ಕೋರಿ ಸಿದ್ದೇಶ್ವರ ಮಠದ ಬೀರಪ್ಪ ಶರಣರು, ಡಿಸಿಸಿ ಬ್ಯಾಂಕ್ ನಿರ್ದೆಶಕ ಬಸವರಾಜ ಪಾಟೀಲ ಚಿಂಚೋಳಿ, ಶಹಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿಮಾಹಂತ ಚಂದಾಪುರ, ಮಲ್ಲನಗೌಡ ಹಗರಟಗಿ, ಪಿಎಸ್ಐ ಅಮೋಜ ಕಾಂಬ್ಳೆ ಇದ್ದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಮಿ ಸ್ವಾಗತಿಸಿದರು, ಮಲ್ಲಿಕಾಜುನ ಹಿರೇಮಠ ನಿರೂಪಣೆ ಮಾಡಿದರು, ಶರಣಗೌಡ ಪಾಟೀಲ ವಂದಿಸಿದರು. ಶರಣಕುಮಾರ ಯಾಳಗಿ, ತೋಟೇಂದ್ರ ಕೂಮಾರ ಕರಡಕಲ್ ಇವರಿಂದ ಸಂಗೀತ ಸೇವೆ ನೆರವೇರಿತು. 12 ಜೋಡಿಗಳು ಹೊಸ ಜೀವನಕ್ಕೆ ಕಾಲಿರಿಸಿದರು.