ಬೈಲಹೊಂಗಲ ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಶ್ರೀಗಳಿಗೆ ಭಕ್ತರಿಂದ ಸುವರ್ಣ ಕಿರೀಟ ಧಾರಣೆ ನೆರವೇರಿತು. ಸದಾ ಶಿವಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಅಡಿವೇಶ್ವರ ದೇವರು, ಶಿವರಂಜನ ಬೋಳನ್ನವರ, ಸಿ.ಕೆ.ಮೆಕ್ಕೇದ, ಅಶೋಕ ಗಡ್ಡಿಗೌಡರ ಇತರರಿದ್ದರು. 
ರಾಜ್ಯ

ನಾಡಿನ ಶ್ರೇಯೋಭಿವೃದ್ಧಿಯೇ ಶ್ರೀಮಠದ ಧ್ಯೇಯ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಶಿಣ, ಆರೋಗ್ಯ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಬೈಲಹೊಂಗಲ ನಾಡು ಉದ್ಧರಿಸುವುದೇ ಮೂರು ಸಾವಿರಮಠದ ಮೂಲ ಧ್ಯೇಯವಾಗಿದೆ ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ನೀಲಕಂಠ ಮಹಾ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ಲಿಂ.ಗಂಗಾಧರ ಸ್ವಾಮೀಜಿ 73ನೇ ಜಯಂತ್ಯುತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕ್ತರಿಂದ ಭಕ್ತರಿಗಾಗಿ, ನಿಮ್ಮ ಮಕ್ಕಳ ಶಿಣ ಮತ್ತು ನಾಡಿನ ಅಭಿವೃದ್ಧಿಗಾಗಿ ನನ್ನ ಕಾಯಕ ಸಮರ್ಪಿತವಾಗಿದೆ. ಈ ಮಠ ಕೇವಲ ಧಾರ್ಮಿಕ ಕೇಂದ್ರವಲ್ಲ, ಸಮಾಜದ ನೈತಿಕ ಹಾಗೂ ಶೈಣಿಕ ಬೆಳವಣಿಗೆಯ ಆಧಾರವಾಗಿದೆ. ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ಒದಗಿಸುವುದು ಮೊದಲ ಆದ್ಯತೆಯಾಗಿದೆ. ಬೈಲಹೊಂಗಲ ನಾಡಿನ ಕೀರ್ತಿ ಮತ್ತಷ್ಟು ಉತ್ತುಂಗಕ್ಕೆ ಒಯ್ಯುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ, ತಾಲೂಕು ಕಾರ್ಯನಿರತ ಪತ್ರಕರ್ತ ಸಂದ ಅಧ್ಯ ಮಹಾಂತೇಶ ತುರಮರಿ, ಪತ್ರಕರ್ತ ಈಶ್ವರ ಹೋಟಿ, ಕಲಾವಿದ ಸಿ.ಕೆ.ಮೆಕ್ಕೇದ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿ, ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ಸಾಗಿರುವ ಶೈಣಿಕ ಕ್ರಾಂತಿ, ಸಾಮಾಜಿಕ ಕಾರ್ಯ ಪ್ರಶಂಸನೀಯ ಎಂದರು.
ಚಿಕ್ಕಲಪರ್ವಿ ಸದಾಶಿವಾನಂದ ಸ್ವಾಮೀಜಿ, ಸುಣಧೋಳಿ ಶಿವಾನಂದ ಸ್ವಾಮೀಜಿ ಹಾಗೂ ತಾರಿಹಾಳ ಅಡಿವೇಶ್ವರ ದೇವರು ಆಶೀರ್ವಚನ ನೀಡಿದರು. ಪ್ರಭುನೀಲಕಂಠ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್​ ತಂಡ ಸಂಗೀತ ಕಾರ್ಯಕ್ರಮ ನೀಡಿತು. ಸ್ಥಳಿಯ ಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ವಿಶ್ವನಾಥ ಹಿರೇಮಠ, ಶಿವಾನಂದ ಬೆಳಗಾವಿ, ರಾಜು ಜನ್ಮಟ್ಟಿ, ಮಹೇಶ ಕೋಟಗಿ, ನಾನಾಸಾಹೇಬ ಪಾಟೀಲ, ಸುಭಾಸ ತುರಮರಿ, ಬಸವರಾಜ ದೊಡ್ಡಮನಿ, ಮಲ್ಲಯ್ಯ ಶೀಲಯ್ಯನವರಮಠ, ಸದಾಶಿವ ಕೋರಿಮಠ ಇತರರಿದ್ದರು.