The water will flow to the peacock area. 
ರಾಜ್ಯ

ನವಿಲೇ ಭಾಗಕ್ಕೂ ಹರಿಯಲಿದೆ ಹೇಮೆ ನೀರು

ಚಿಕ್ಕನಾಯಕನಹಳ್ಳಿ: -ಹೇಮಾವತಿಯ ತುಮಕೂರು ನಾಲೆಯಲ್ಲಿ ನೀರು ಹರಿಸುವ ವೇಳೆಗೆ ನವಿಲೇ ಭಾಗದ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರನ್ನು ಹರಿಸಲಾಗುವುದು. ಈ ಬಗ್ಗೆ ರೈತರು ಹಾಗೂ ಹೇಮಾವತಿ ಹೋರಾಟಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ತಾಲೂಕಿನ ಹೇಮಾವತಿ ನಾಲಾ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಬೇಡಿ ನೀಡಿ ಕಾಮಗಾರಿ ಪ್ರಗತಿ ಪರೀಶಿಲಿಸಿ ಮಾತನಾಡಿ, ಈಗಾಗಲೇ ನಾಲಾ ಕಾಮಗಾರಿ ನಡೆಯುತ್ತಿದ್ದು, ಇನ್ನು 70 ಮೀ. ಉದ್ದ ಎರಡು ಸೇತುವೆಗಳ ನಿಮಾರ್ಣ ಆಗಬೇಕಿದೆ. ಈ ತಿಂಗಳ ಅಂತ್ಯಕ್ಕೆ ಅವುಗಳು ಪೂರ್ಣಗೊಳ್ಳಲಿದ್ದು, ನಂತರ ಚಿಕ್ಕ&ಪುಟ್ಟ ಕೆಲಸ ಬಾಕಿ ಉಳಿಯಲಿದೆ. ಇನ್ನು ಈ ನೀರು ಹರಿಯುವ ವೇಳೆಗೆ ಕಂದಿಕೆರೆ ಭಾಗಕ್ಕೂ ಅಗತ್ಯವಿರುವಂತಹ ಕೆಲಸವನ್ನು ಮಾಡುವ ಮೂಲಕ ಚಿಕ್ಕನಾಯಕನಹಳ್ಳಿ, ನಾಗತಿಕೆರೆ, ಕಂದಿಕೆರೆ ಮೂಲಕ ಬೋರನಕಣಿವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೇಮಾವತಿ ನಾಲಾ ವಲಯದ ಇಂಜಿನಿಯರ್​ ಪ್ರಭಾಕರ್​ ಮಾತನಾಡಿ, ಚಿಕ್ಕನಾಯಕನಹಳ್ಳಿ ಹೇಮಾವತಿ ಬ್ರಾಂಚ್​ ಕೆನಾಲ್​ ಕಾಮಗಾರಿಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್​ನಿಂದ ರೈತರಿಗೆ ಪರಿಹಾರದ ಹಣ ನೀಡುವ ಮೂಲಕ ಕಾಮಗಾರಿ ಮಾಡಲಾಗುತ್ತಿದೆ. ದಬ್ಬೇಘಟ್ಟ ಸೇರಿದಂತೆ ಇತರ ಭಾಗದಲ್ಲಿದ್ದ ಭೂಸ್ವಾದಿನ ಪ್ರಕ್ರಿಯೆ ಬಗೆಹರಿಸಿ ಶಾಸಕರ ಮುಂದಾಳತ್ವದಲ್ಲಿ ರೈತರಿಗೆ ಪರಿಹಾರದ ಹಣ ನೀಡಲಾಗುತ್ತಿದೆ. ಇನ್ನು ಸೇತುವೆಗಳನ್ನು ನಿರ್ಮಿಸುವ ಜಾಗದಲ್ಲಿ ಸ್ವಲ್ಪ ಮಟ್ಟಿಗೆ ಬಿಗಿಯಾದ ಬಂಡೆ ರೀತಿಯ ಮಣ್ಣು ಸಿಕ್ಕಿದ್ದರಿಂದ ಕಾಮಗಾರಿ ತಡವಾಗುತ್ತಿದೆ. ಜುಲೈ&ಆಗಸ್ಟ್​ನಲ್ಲಿ ಹೇಮಾವತಿ ನೀರು ಹರಿಸುವ ವೇಳೆಗೆ ಎಲ್ಲ ಕೆಲಸ ಮುಗಿಸುವುದಾಗಿ ತಿಳಿಸಿದರು.