ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಚಾವಡಿ ಕಟ್ಟೆ ಎದುರಿನ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿದ್ದರಿAದ ಚರಂಡಿ ನೀರು ಮುಖ್ಯ ರಸ್ತೆ ಮೇಲೆ ಹರಿಯುತ್ತಿರುವುದು. 
ರಾಜ್ಯ

ಹಾಳು ಕೊಂಪೆಯಾದ ನಾಯ್ಕಲ್ ಗ್ರಾಮ

ಪ್ರಮುಖ ಮುಖ್ಯಾಂಶಗಳು

  • ಇನ್ನೂ ಮುಗಿಯದ ಜೆಜೆಎಂ ಗಾಮಗಾರಿ
  • ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಯಾದಗಿರಿ:

ಮತಕ್ಷೇತ್ರದ ಸಮೀಪದ ನಾಯ್ಕಲ್ ಗ್ರಾಮ ಜಿಪಂ ಕೇಂದ್ರ ಸ್ಥಾನವಾಗಿದ್ದು, ಮೇಲಾಗಿ ಯಾದಗಿರಿ-ಶಹಾಪುರ ಹೆದ್ದಾರಿ ಹಾಗೂ ಯಾದಗಿರಿ ಮತಕ್ಷೇತ್ರದ ಪ್ರಮುಖ ಗ್ರಾಮವಾಗಿದ್ದರೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಇಡೀ ಗ್ರಾಮ ಹಾಳು ಕೊಂಪೆಯAತಾಗಿದೆ.

ಕ್ಷೇತ್ರದ ಜನಪ್ರತಿನಿಽಗಳು ಬದಲಾದರೂ ಇನ್ನೂ ನಾಯ್ಕಲ್ ಗ್ರಾಮದ ಸ್ಥಿತಿ ಮಾತ್ರ ಬದಲಾವಣೆಯಾಗಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರಿಚೀಕೆಯಾಗಿದ್ದು, ಶಾಸಕರು ಮತ್ತು ಅಽಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದೊಳಗೆ ಹೋದರೆ ಸಾಕು ಇಡೀ ಗ್ರಾಮ ಗಬ್ಬೆದ್ದು ನಾರುತ್ತಿದೆ. ಗ್ರಾಮದ ಚಾವಡಿ ಕಟ್ಟೆ ಎದುರಿನ ಮುಖ್ಯರಸ್ತೆಯ ಚರಂಡಿಯಲ್ಲಿ ಹೂಳು ತುಂಬಿದ್ದರಿAದ ಚರಂಡಿ ನೀರು ಕಳೆದ ಒಂದು ತಿಂಗಳಿAದ ಸಿಸಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ನಿತ್ಯ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಂಚರಿಸುವAತಾಗಿದೆ.
ಚಾವಡಿ ಕಟ್ಟೆ ಸುತ್ತಮುತ್ತಲಿನ ನಿವಾಸಿಗಳು ಚರಂಡಿಗಳ ನೀರಿನಲ್ಲಿಯೆ ಓಡಾಡುವುದು ಅನಿವಾರ್ಯವಾಗಿದೆ. ಇನ್ನೂ ಗ್ರಾಪಂ ಕಚೇರಿಯ ಪಕ್ಕದಲ್ಲಿರುವ ವಡ್ಡರ್ ಓಣಿಯಂತೂ ಪರಿಸ್ಥಿತಿ ಹೇಳಕೂಡದು ಅಷ್ಟೊಂದು ಗಬ್ಬೆದ್ದು ನಾರುತ್ತಿದೆ. ವಡ್ಡರ್ ಓಣಿಯಲ್ಲಿ ಚರಂಡಿಗಳಲ್ಲಿ ಹೂಳು ತುಂಬಿದ್ದರಿAದ ಹಂದಿಗಳ ಕಾಟ ಹೆಚ್ಚಾಗಿದ್ದು, ಇದರ ಮಧ್ಯೆಯೇ ನಿವಾಸಿಗಳು ಓಡಾಡುವಂತಾಗಿದೆ.
ಇನ್ನೂ ಆಶ್ರಯ ಕಾಲನಿ, ಬಸ್ ನಿಲ್ದಾಣ ಮುಂಭಾಗದ ಚರಂಡಿ, ಸರ್ಕಾರಿ ಉರ್ದು ಶಾಲೆ ಮುಂಭಾಗ, ಉಪ ಆರೋಗ್ಯ ಕೇಂದ್ರ ಬಳಿ, ಕೋಲಿ ಸಮಾಜದ ಓಣಿ, ಹಳೇ ಬಜÁರ್ ರಸ್ತೆ ಕೆಸರು ಮತ್ತು ತಗ್ಗು-ಗುಂಡಿಗಳಿAದ ಕೂಡಿದೆ. ಹಿರೇ ಅಗಸಿ ಬಳಿ, ಈಳಿಗೇರ್ ಓಣಿ, ಚಾವಡಿ ಕಟ್ಟೆಯಿಂದ ಚನ್ನಪ್ಪಗೌಡ ಗೊಸಾಮಿ ಬಾವಿ ರಸ್ತೆ ಹೀಗೆ ಗ್ರಾಮದ ಎಲ್ಲಡೆ ಸ್ವಚ್ಛತೆ ಎಂಬುದು ಸಂಪೂರ್ಣ ಮರೆತಂತಿದೆ.
ಇದರಿಂದಾಗಿ ರಾತ್ರಿಯಾದರೆ ಸೋಳ್ಳೆಗಳ ಹಾವಳಿ, ಸಾಂಕ್ರಾಮಿಕ ರೋಗ-ರುಜಿನಿಗಳ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಇನ್ನೂ ಗ್ರಾಮದಲ್ಲಿ ಕುಡಿವ ನೀರಂತೂ ಹಣ ಕೋಟ್ಟು ಪಡೆಯಬೇಕು. ಫೀಲ್ಟರ್ ನೀರಿಗೆ ಪ್ರತಿದಿನ ೨೦ ರೂ.ನಿಂದ ೫೦ ರೂ.ವರೆಗೆ ಕುಟುಂಬಕ್ಕೆ ತಕ್ಕಂತೆ ನೀರಿನ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಮಕವಾಸ್ತೆ ಎಂಬAತೆ ಸುಮಾರು ಅಂದಾಜು ೨ ಕೋಟಿ ರೂ. ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಆರಂಭಗೊAಡು ೨ ವರ್ಷ ಕಳೆದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈಗಲಾದರೂ ಮತಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಽಕಾರಿಗಳು ನಾಯ್ಕಲ್ ಗ್ರಾಮದ ಕಡೆ ಗಮನ ಹರಿಸಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರೇ ಕಾದು ನೋಡಬೇಕಾಗಿದೆ.