ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಮೂಡಲು ಬಾಗಿಲು ಆಂಜನೇಯನಸ್ವಾಮಿ ದೇವಾಲಯಕ್ಕೆ ಸೋಮವಾರ ಭಜರಂಗದಳ ಮುಖ್ಯಸ್ಥ ಹಾಗೂ ಹಿಂದೂವಾದಿ ಪ್ರಮೋದ್ ಮುತಾಲಿಕ್ ಹಿಂದೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಶ್ರೀರಂಗಪಟ್ಟಣ: ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಹಿಂದು ಧರ್ಮದ ಗೆಲುವೆಂದು ಬಜರಂಗದಳದ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಖಾಸಗಿ ಕಾರ್ಯನಿಮಿತ್ತ ಸೋಮವಾರ ಸಂಜೆ ಹುಣಸೂರಿಗೆ ತೆರಳುತ್ತಿದ್ದ ಅವರು ಮಾರ್ಗಮಧ್ಯೆ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಅವರು ಪಶ್ಚಿಮ ಬಂಗಾಳ ಗೆಲವು ಸೇರಿದಂತೆ ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯಕ್ಕೆ ನೂರಾರು ಹಿಂದೂ ಕಾರ್ಯಕರ್ತರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ರವೀಂದ್ರನಾಥ ಟ್ಯಾಗೋರ್, ಬಂಕಿಮಚಂದ್ರ ಚಟರ್ಜಿ, ಶುಭಾಷ್‌ಚಂದ್ರ ಬೋಸ್‌ರಂತಹ ಮಹನೀಯರು, ಸಂತರು ಜನಿಸಿದ ಪುಣ್ಯದ ನಾಡು, ತಾಯಿ ದುರ್ಗೆ ಅರಾಧಿಸುವ ದೈವಿಕ ನಾಡಿನಲ್ಲಿ ಇಂದು ಧರ್ಮ ಸ್ಥಾಪನೆಯಾಗಿದೆ. ಇಂತಹ ಒಂದು ಸುಸಂದರ್ಭ ಭವಿಷ್ಯದ ಬಲಿಷ್ಠ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಭಾರತೀಯರೇ ಹಾಕಿ ನವ ಇತಿಹಾಸಕ್ಕೆ ಚಾಲನೆ ನೀಡಿದ್ದಾರೆ ಎಂದು ಸಾರ್ವಜನಿಕರಿಗೆ ಸಿಹಿ ಹಂಚಿದರು.
ಮೂಡಲ ಬಾಗಿಲು ಹುನುಮಾನ್ ಸಮಿತಿ ಪ್ರಮುಖ ಚಂದನ್, ಹಿಂದೂ ಕಾರ್ಯಕರ್ತರಾದ ಗಿರೀಶ್, ಶಿವು , ಶರತ್ ಹರ್ಷ, ಸನತ್, ಶಂಕರ್ ಲಕ್ಷ್ಮೀ ನಾರಾಯಣ , ಶ್ರೀನಿವಾಸ್ , ರಾಜು , ಕಿರಂಗೂರು ರವಿ ಇತರರು ಈ ವೇಳೆ ಇದ್ದರು.