ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿಗೆ ಕಾಶೀ ಉಭಯ ಜಗದ್ಗುರುಗಳು ‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಮಠಗಳ ಶ್ರೀಗಳು, ಶಾಂತ ವಿ.ಗೌಡ್, ಬಿ.ಎಸ್.ಪರಮಶಿವಯ್ಯ ಮತ್ತಿತರರಿದ್ದರು.  
ರಾಜ್ಯ

ಪಂಚಸೂತ್ರಗಳಲ್ಲಿ ವೀರಶೈವ ದಾರ್ಶನಿಕತೆ ಅಡಗಿದೆ; ಪಂಚಾಚಾರ್ಯಶ್ರೀ ಪ್ರಶಸ್ತಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಪಂಚಸೂತ್ರಗಳಲ್ಲಿ ವೀರಶೈವ ದಾರ್ಶನಿಕತೆ ಅಡಗಿದೆ
  • ಕಾಶೀ ಜಗದ್ಗುರು ಡಾ.ಚಂದ್ರಶೇಖರ ಭಗವತ್ಪಾದರ ಆಶೀರ್ವಚನ
  • ಮಣಿಕಂಠ ಶಿವಾಚಾರ್ಯರಿಗೆ ಪಂಚಾಚಾರ್ಯಶ್ರೀ ಪ್ರಶಸ್ತಿ ಪ್ರದಾನ

ಬೆಂಗಳೂರು:ವೀರಶೈವ ಲಿಂಗಾಯತಸಮುದಾಯದ ಸಿದ್ಧಾಂತದೊಳಗಿರುವದಾರ್ಶನಿಕ ವಿಚಾರಗಳು ಜಗದ್ಗುರುಪಂಚಾಚಾರ್ಯರು ಬೋದಿಸಿರುವಪಂಚಸೂತ್ರಗಳಲ್ಲಿ ಅಡಗಿದೆ ಎಂದುಕಾಶೀ ಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರುಹೇಳಿದ್ದಾರೆ.

ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀ ಜಗದ್ಗುರು ವಿಶ್ವಾರಾಧ್ಯಜನಕಲ್ಯಾಣ ಪ್ರತಿಷ್ಠಾನ ಹಮ್ಮಿಕೊಂಡಿದ್ದಪಂಚಾಚಾರ್ಯಶ್ರೀ ಪ್ರಶಸ್ತಿಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಸನಾತನಧರ್ಮದ ತತ್ವತಳಹದಿಯ ಮೇಲೆಸಂಸ್ಥಾಪಿತಗೊಂಡಿರುವ ವೀರಶೈವಲಿಂಗಾಯತ ಸಿದ್ಧಾಂತವು ಆಧ್ಯಾತ್ಮಿಕಸಾರವಾಗಿರುವ ದಾರ್ಶನಿಕ ಸೂತ್ರಗಳರೂಪದಲ್ಲಿವೆ.ಪಡ್ವಿಡಿ,ವೃಷ್ಟಿ,ಲಂಬನ,ಮುಕ್ತಾಗುಚ್ಛಮತ್ತು ಪಂಚವರ್ಣ ಸೂತ್ರದ ಮೂಲಕಜೀವಾತ್ಮ, ಪರಮಾತ್ಮ,ಜಗತ್ತು,ಬಂಧ ಮತ್ತುಮೋಕ್ಷದ ವಿಚಾರಗಳನ್ನು ಆದಿಜಗದ್ಗುರು ಪಂಚಾಚಾರ್ಯರುತಿಳಿಯಪಡಿಸಿದ್ದಾರೆ.ಅಂತಹ ದಾರ್ಶನಿಕರು,ಆದ್ಯ ಸೂತ್ರಕಾರರಹೆಸರಿನಲ್ಲಿ ಪ್ರತಿವರ್ಷಪಂಚಾಚಾರ್ಯಶ್ರೀ ಪ್ರಶಸ್ತಿಯನ್ನುನೀಡಲಾಗುತ್ತದೆ.ವೀರಶೈವ ಪಂಚಸೂತ್ರಾಣಿಸಂಸ್ಕೃತ ಗ್ರಂಥವನ್ನು ತೆಲಗುಮತ್ತು ಮರಾಠಿಯಲ್ಲಿ ಅನುವಾದಮಾಡಿರುವ ಮಹಾರಾಷ್ಟ್ರದ ದಹಿವಡ್ಕರ್ಮಠದ ಶ್ರೀಗುರುಸಿದ್ಧ ಮಣಿಕಂಠಶಿವಾಚಾರ್ಯ ಸ್ವಾಮಿಗಳಿಗೆಪಂಚಾಚಾರ್ಯಶ್ರೀ ಪ್ರಶಸ್ತಿನೀಡಲಾಗಿದ್ದು,ಅವರಿಗೂ ಪ್ರಶಸ್ತಿಯಪ್ರಾಯೋಜಕರಾದ ಬಿ.ಆರ್.ವಿ.ಗೌಡ್ ಫೌಂಡೇಶನ್‌ನ ಎಲ್ಲ ಸದಸ್ಯರಿಗೂಜಗದ್ಗುರುಗಳು ಶುಭ ಕೋರಿದರು.

ಸಮಾರಂಭದಲ್ಲಿಡಾ.ಸಿ.ಶಿವಕುಮಾರಸ್ವಾಮಿಗಳ‘ವೀರಶೈವ ಪದದರ್ಶನ’ ಗ್ರಂಥಲೋಕಾರ್ಪಣೆ ಮಾಡಲಾಯಿತು.ಜಗದ್ಗುರುಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಭಗವತ್ಪಾದರುಸಾನ್ನಿಧ್ಯ ವಹಿಸಿದ್ದರು.ವಿಭೂತಿಪುರ ಮಠದಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕಪ್ರವಚನ ನೀಡಿದರು.ಯಸಳೂರು,ಕರಿಭಂಟನಾಳಶ್ರೀಗಳು, ಕರ್ನಾಟಕವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯಅಧ್ಯಕ್ಷ ಬಿ.ಎಸ್.ಪರಮಶಿವಯ್ಯ,ಪ್ರತಿಷ್ಠಾನದಶಾಂತ ವಿ.ಗೌಡ್,ಉಮಾದೇವಿಸಿ.ಉಮಾಶಂಕರ್ಮತ್ತಿತರರಿದ್ದರು.

ಭಾನುವಾರದ ಕಾರ್ಯಕ್ರಮ

ಬೆಳಗ್ಗೆ 7 ಗಂಟೆಯಿಂದ ಜದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಸಂಜೆ 6 ಗಂಟೆಗೆ ಶಿವಕಮಲ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.