ಹುಲಸೂರು ತಾಲೂಕಿನ ಗೋರ್ಟಾ(ಬಿ)ದ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆಯಲ್ಲಿ ಗುರುವಾರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಉದ್ಘಾಟನಾ ಸಮಾರಂಭದಲ್ಲಿ ಗೋರಕನಾಥ ಶಿಣ ಸಂಸ್ಥೆ ಅಧ್ಯ ಮಡಿವಾಳಪ್ಪ ಪಾಟೀಲ್, ಸಾಹಿತಿ ಡಾ.ಬಸವರಾಜ ಬಲ್ಲೂರ, ಗುರುನಾಥ ಅಕ್ಕಣ್ಣ, ಗ್ರಾಪಂ ಅಧ್ಯೆ ಸೀತಾ ಕೈಕಡಿ, ಪಂಚಾರಿ ಹಿರೇಮಠ, ಪುಷ್ಪಾ ಬಳತೆ, ಪ್ರಭುಶೆಟ್ಟಿ ಬುಳ್ಳಾ ಇತರರಿದ್ದರು.
- ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಅಭಿಮತ
- ಗೋಟಾ(ಬಿ)ದಲ್ಲಿ ಗುರುವಂದನೆ ಸಮಾರಂಭ
ಹುಲಸೂರು: ಅಜ್ಞಾನದ ಅಂಧಕಾರ ತೊಳೆದು ಜ್ಞಾನದ ಬೆಳಕನ್ನು ತೋರುವವನೇ ನಿಜವಾದ ಗುರು ಎಂದು ಬೀದರ್ನ ಕರ್ನಾಟಕ ಕಾಲೇಜು ಪ್ರಾಂಶುಪಾಲ, ಸಾಹಿತಿ ಡಾ.ಬಸವರಾಜ ಬಲ್ಲೂರ ಹೇಳಿದರು.
ಗೋರ್ಟಾ(ಬಿ) ಗ್ರಾಮದ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆಯಲ್ಲಿ ಗುರುವಾರ 1979-80ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು ಮಕ್ಕಳಲ್ಲಿ ಒಳ್ಳೆ ಗುಣ, ಹೊಸತನ ಸೃಷ್ಟಿಸುತ್ತಾನೆ. ಅರ ಕಲಿಸಿದ ಗುರುಗಳನ್ನು ಗೌರವಿರಬೇಕು. ನಾಲ್ಕು ದಶಕದ ಹಿಂದೆ ಕಲಿತ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನ ಸಮಾರಂಭ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರುನಾಥ ಅಕ್ಕಣ್ಣ ಮಾತನಾಡಿ,ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕರ ಗುಣ ಎಂದು ಮರೆಯುವುದಿಲ್ಲ ಎಂದರು.
ನಿವೃತ ಮುಖ್ಯ ಗುರು ಪಂಚಾರಿ ಹಿರೇಮಠ, ಸುಭಾಷ ಪತಂಗೆ, ಶಾಂತಮ್ಮ ಯರನಳ್ಳೆ, ಮಲ್ಲಿಕಾರ್ಜುನ ರಾಜೋಳೆ ಮಾತನಾಡಿದರು. ಶಿಣ ಸಂಸ್ಥೆ ಅಧ್ಯ ಮಡಿವಾಳಪ್ಪ ಪಾಟೀಲ್, ಗ್ರಾಪಂಅಧ್ಯೆ ಸೀತಾ ಕೈಕಡಿ, ಭರತ ಪತಂಗೆ, ರಾಜುಕುಮಾರ ಮೈನಾಳೆ, ಸೋಮಶಂಕರ ಮೈನಾಳೆ, ಸೂರ್ಯಕಾಂತ ಪಾಟೀಲ್, ರಮೇಶ ರಾಜೋಳೆ, ವಕೀಲ ರಾಜಕುಮಾರ ರುದ್ರಮುನಿ ಮಾಠ, ಮೀರಾ ಮಾಲಿ ಪಾಟೀಲ ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಬಸವಣ್ಣಪ್ಪ ಮಮ್ಮ ಸ್ವಾಗತಿಸಿದರು. ಪ್ರಭುಶೆಟ್ಟಿ ಬುಳ್ಳಾ ನಿರೂಪಣೆ ಮಾಡಿದರು. ನಿವೃತ್ತಿ ಶಿಕರಾದ ಪಂಚಾರಿ ಹಿರೇಮಠ, ಬಾಬುರಾವ ರಾಜೋಳೆ, ನಿರಂಜಯ್ಯ ರುದ್ರಮುನಿ ಮಾಠ, ವಿಶ್ವನಾಥ ಪಾಟೀಲ್, ಸುಭಾಷ ಪತಂಗೆ, ವಿಶ್ವನಾಥಯ್ಯ ಮಠಪತಿ, ಬಾಬುರಾವ ಗೌರೇ ಇವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.