ಬಂಗಾರಪೇಟೆ ತಾಲೂಕು labour dayವಿನಾಯಕ ಕಟ್ಟಡ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಹೊಸರಾಯಪ್ಪ, ಮಾಜಿ ತಾಪಂ ಸದಸ್ಯರಾದ ಮಾರ್ಕಂಡೇಗೌಡ, ಎಚ್​.ಆರ್​ ಶ್ರೀನಿವಾಸ್​, ಇದ್ದರು. 
ರಾಜ್ಯ

ದೇಶದ ಅಭಿವೃದ್ಧಿಯ ನಿಜವಾದ ಶಿಲ್ಪಿಗಳು labour day

ಬಂಗಾರಪೇಟೆ: ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಅನನ್ಯವಾದದ್ದು, labour day ಸುಂದರ ಕಟ್ಟಡ ಅಥವಾ ಮೂಲಸೌಕರ್ಯಗಳ ನಿಮಾರ್ಣಕ್ಕೆ ಕಾರ್ಮಿಕರ ಶ್ರಮವೇ ಅಡಿಪಾಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ. ಮಹೇಶ್​ ಹೇಳಿದರು.
ನಗರದ ವಿನಾಯಕ ಕಟ್ಟಡ ಕಾರ್ಮಿಕರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರ ಬೆವರಿನ ಹನಿ ಇಲ್ಲದೆ ಯಾವುದೇ ಭವ್ಯ ಕಟ್ಟಡಗಳು ತಲೆ ಎತ್ತಲು ಸಾಧ್ಯವಿಲ್ಲ. ನಾವು ಇಂದು ಕಾಣುತ್ತಿರುವ ಪ್ರಗತಿಯ ಹಿಂದೆ ಒಬ್ಬ ಕಾರ್ಮಿಕನ ಕಠಿಣ ಪರಿಶ್ರಮವಿದೆ. ಆದ್ದರಿಂದ ಕಾರ್ಮಿಕರನ್ನು ಕೇವಲ ಕೂಲಿ ಆಳುಗಳೆಂದು ನೋಡದೆ, ಅವರನ್ನು ದೇಶದ ಅಭಿವೃದ್ಧಿಯ ನಿಜವಾದ ಶಿಲ್ಪಿಗಳೆಂದು ಗೌರವಿಸಬೇಕು ಎಂದರು.
ಕಾರ್ಮಿಕರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಕಾರ್ಮಿಕ ಇಲಾಖೆಯ ಸೌಲಭ್ಯಗಳು, ವಿಮೆ ಮತ್ತು ಮಕ್ಕಳ ಶೈಕ್ಷಣಿಕ ಧನಸಹಾಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಅವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉನ್ನತ ಉದ್ದೇಶದಿಂದ ರಾಜ್ಯ ಸರ್ಕಾರವೂ ಕಾರ್ಮಿಕ ಶಾಲೆ ಪ್ರಾರಂಭಿಸುತ್ತಿದ್ದು, ಈ ಯೋಜನೆಯ ಮೂಲಕ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ, ವಸತಿ ಸೌಲಭ್ಯ ನೀಡುತ್ತಿದೆ ಎಂದರು.
1ನೇ ತರಗತಿಯಿಂದ ದ್ವೀತಿಯ ಪಿಯುಸಿವರೆಗೆ ನಿರಂತರ ಶಿಕ್ಷಣಕ್ಕೆ ಅವಕಾಶವಿದೆ. ಸುಸಜ್ಜಿತ ಹಾಸ್ಟೆಲ್​ ವ್ಯವಸ್ಥೆ, ಪಠ್ಯಪುಸ್ತಕ, ಸಮವಸ್ತ್ರ ಮತ್ತು ಪೌಷ್ಟಿಕ ಆಹಾರ ಸೇರಿಶಿಕ್ಷಣದ ಸಂಪೂರ್ಣ ವೆಚ್ಚಇಲಾಖೆಯೇ ಭರಿಸಲಿದೆ ಎಂದು ತಿಳಿಸಿದರು.