ಟಪ್ರಭಾದಲ್ಲಿ ದುರದುಂಡೀಶ್ವರ ಮಠ ಟ್ರಸ್ಟ್​ ಅರಬಾವಿಮಠ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಪ್ರೌಢಶಾಲೆಗಳ ನೂತನ ಕಟ್ಟಡವನ್ನು ಸಚಿವ ಸತೀಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು. ಗುರುಬಸವಲಿಂಗ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಅಪ್ಪಯ್ಯಪ್ಪ ಬಡಕುಂದ್ರಿ ಇತರರಿದ್ದರು. 
ರಾಜ್ಯ

ತ್ರಿವಿಧ ದಾಸೋಹ ಖ್ಯಾತಿಯ ದುರದುಂಡೀಶ್ವರ ಮಠ

ಘಟಪ್ರಭಾ: ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಜಗದ್ಗುರು ದುರದುಂಡೀಶ್ವರ ಮಠ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಣ ನೀಡಬೇಕೆಂಬ ಉದ್ದೇಶದಿಂದಲೇ 50 ವರ್ಷಗಳ ಹಿಂದೆಯೇ ಶಿಣ ಸಂಸ್ಥೆ ಪ್ರಾರಂಭಿಸಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಪ್ರಶಂಸಿಸಿದರು.
ಪಟ್ಟಣದಲ್ಲಿ ಶನಿವಾರ ಜಗದ್ಗುರು ದುರದುಂಡೀಶ್ವರ ಮಠ ಟ್ರಸ್ಟ್​, ಅರಬಾವಿಮಠ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಪ್ರೌಢಶಾಲೆಗಳ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಣದ ಜತೆಗೆ ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಹುಟ್ಟಿದ ಊರು ಮತ್ತು ಕಲಿತ ಶಾಲೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಬೆಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, 1968ರಲ್ಲಿ ಪ್ರಾರಂಭವಾದ ಈ ಶಿಣ ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಶುಲ್ಕ ವಿಧಿಸದೇ ಗುಣಮಟ್ಟದ ಶಿಣ ನೀಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಮಟ್ಟದ ಶಿಣದತ್ತ ಗಮನಹರಿಸಬೇಕು ಎಂದು ಹೇಳಿದರು.
ಅರಬಾವಿಮಠದ ಜಗದ್ಗುರು ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ& ನಾಗನೂರ ರುದ್ರಾಮಠದ ಅಲ್ಲಮಪ್ರಭು ಸ್ವಾಮೀಜಿ, ಜೆ.ಜಿ. ಸಹಕಾರ ಆಸ್ಪತ್ರೆ ಚೇರ್ಮನ್​ ಅಪ್ಪಯ್ಯಪ್ಪ ಬಡಕುಂದ್ರಿ, ಹಿರಿಯರಾದ ಸಿದ್ದವ್ವ ಶೆಟ್ಟಪ್ಪ ಕಾಡದವರ, ಗೋಕಾಕ ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ಚಿಕ್ಕೋಡಿ ಡಿಡಿಪಿಯು ಪಿ.ಐ.ಭಂಡಾರಿ, ಪಿಐ ಎಚ್​.ಡಿ.ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್​.ಪಾಟೀಲ ಉಪಸ್ಥಿತರಿದ್ದರು ಶಿಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಮುಖ್ಯಶಿಕ್ಷಕರು, ಭೋಧಕ&ಭೋಧಕೇತರ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.