ಲೋಕಾಪುರದ ಹಿರೇಮಠದ ಮುಂಭಾಗದಲ್ಲಿ ವೀರ ಸಾವರ್ಕರ್ ಗಜಾನನ ಯುವಕ ಮಂಡಳದ ವತಿಯಿಂದ ಹೋರಾಟಗಾರ ಸಾವರ್ಕರ್ ಜಯಂತಿ ಆಚರಿಸಲಾಯಿತು. ಸುನೀಲ ವಸದ, ಭೀಮಶಿ ಅವರಾದಿ, ರಕ್ಷಿತ ಕಡೆಬಾಗಿಲ ಇತರರಿದ್ದರು. 
ರಾಜ್ಯ

ಸ್ವಾತಂತ್ರ್ಯ ವೀರನ ಚಿಂತನೆಗಳು ಅನುಕರಣೀಯ

ಪ್ರಮುಖ ಮುಖ್ಯಾಂಶಗಳು

  • ಯುವ ಮುಖಂಡ ಭೀಮಶಿ ಅವರಾದಿ ಹೇಳಿಕೆ
  • ಪತಿತ ಪಾವನ ಮಂದಿರ ನಿರ್ಮಾಪಕ
ಲೋಕಾಪುರ: ಸಾವರ್ಕರ್ ಅವರ ರಾಷ್ಟ್ರಭಕ್ತಿ ಹಾಗೂ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಯುವ ಮುಖಂಡ ಭೀಮಶಿ ಅವರಾದಿ ಹೇಳಿದರು.
ಪಟ್ಟಣದಲ್ಲಿ ಹಿರೇಮಠದ ಮುಂಭಾಗದಲ್ಲಿ ವೀರ ಸಾವರ್ಕರ್ ಗಜಾನನ ಯುವಕ ಮಂಡಳದ ವತಿಯಿಂದ ಗುರುವಾರ ವಿನಾಯಕ ದಾಮೋದರ ಸಾವರ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದಲ್ಲಿದ್ದ ಅಸ್ಪಶತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾವರ್ಕರ್ ಅವರು ಪತಿತ ಪಾವನ ಮಂದಿರ ನಿರ್ಮಿಸಿ ಸಾಮಾಜಿಕ ಸುಧಾರಣೆಗೆ ಕೈಜೋಡಿಸಿದ್ದರು ಎಂದರು.
ಶಿಕ್ಷಕ ಸುನೀಲ ವಸ್ತ್ರದ ಮಾತನಾಡಿ, ಯುವಜನರಲ್ಲಿ ದೇಶಭಕ್ತಿ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದ್ದು, ಭಗತ್ ಸಿಂಗ್ ಹಾಗೂ ಸುಭಾಷಚಂದ್ರ ಬೋಸ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಮಗ್ರ ತಿಳಿವು ನೀಡಬೇಕಿದೆ ಎಂದು ಹೇಳಿದರು.
ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಪೂಜೆ ಸಲ್ಲಿಸಿದರು. ರಕ್ಷಿತ ಕಡೆಬಾಗಿಲ, ಪ್ರಮೋದ ತೆಗ್ಗಿ, ಗೌರೀಶ ಹೂಗಾರ, ಭರತ ನರಗುಂದ, ಮಹೇಶ ರಾಮದುರ್ಗ, ಅರ್ಜುನ ಮಾನೆ, ವಿಜಯ ಮಾಳಿ, ಪ್ರಪುಲ್ ಉದಪುಡಿ, ನವೀನ ಚೌಧರಿ, ವೀರೇಶ ಹಿರೇಮಠ, ಅಕ್ಷಯ ನರಗುಂದ, ಬಸಯ್ಯ ಹಿರೇಮಠ, ಬಾಲಜಿ ಎನ್. ಹನಮಂತ ಬುದ್ನಿ, ಭೀಮರಾವ ರೆಡ್ಡಿ, ಸೊರಜ ಕಡೆಬಾಗಿಲ, ಚೇತನ ಗಂಗಣ್ಣವರ ಸೇರಿ ಇತರರಿದ್ದರು.