ಆನೇಕಲ್ ತಾಲೂಕಿನ ಚೆನ್ನಯ್ಯನಪಾಳ್ಯದ ಹೈಟೆನ್ಷನ್ ಕಂಬ ಏರಿದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಆನೇಕಲ್ : ಪ್ರೇಯಸಿ ದೂರವಾಗಿದ್ದಕ್ಕೆ ಪ್ರೇಮಿಯೊಬ್ಬ ಕುಡಿದ ನಶೆಯಲ್ಲಿ ಆನೇಕಲ್ ತಾಲೂಕಿನ ಚೆನ್ನಯ್ಯನಪಾಳ್ಯದ ಹೈಟೆನ್ಷನ್ ಕಂಬ ಏರಿ ಹೈಡ್ರಾಮಾ ಸೃಷ್ಟಿಸಿದ್ದ.
ಚೆನ್ನಯ್ಯನಪಾಳ್ಯದ ಸೋಮಶೇಖರ್ (22) ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಆತ ದುಶ್ಚಗಳಿಗೆ ದಾಸನಾಗಿದ್ದರಿಂದ ಪ್ರೇಯಸಿ ದೂರವಾಗಿದ್ದಳು. ಇದರಿಂದ ಆವೇಶಕ್ಕೆ ಒಳಗಾಗಿದ್ದ ಸೋಮಶೇಖರ್ ಹೈಟೆನ್ಷನ್ ಕಂಬ ಏರಿ, ಪ್ರೇಯಸಿ ಬರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದ. ಕೊನೆಗೆ ಆ ಹುಡುಗಿಯನ್ನು ಸ್ಥಳಕ್ಕೆ ಕರೆಸಿ ಮನವೊಲಿಸಿ ಸುರಕ್ಷಿತವಾಗಿ ಆತನನ್ನು ಕೆಳಗೆ ಇಳಿಸಿದ ಅಗ್ನಿಶಾಮಕ ಸಿಬ್ಬಂದಿ, ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಇದೇ ವಿಚಾರವಾಗಿ ಕಳೆದ ವಾರದಿಂದ ಗಲಾಟೆ ಆಗುತ್ತಿದ್ದು, ಮಂಗಳವಾರವೂ ಮನೆಯಲ್ಲಿ ಜಗಳ ಮಾಡಿಕೊಂಡು ಬಂದು ನೇರವಾಗಿ ಟವರ್ ಹತ್ತಿದ್ದ ಎನ್ನಲಾಗಿದೆ.