ಮಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತ ಶಿಕ್ಷಕ ಅಡಿವೆಪ್ಪ ಕರಜಗಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಅಭಿನವ ಬಸವಲಿಂಗ ಸ್ವಾಮೀಜಿ, ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ನಿಂಗಪ್ಪ ಪೂಜಾರಿ, ವಿಶ್ವನಾಥ ಕರೂಟಿ, ಚಂದ್ರಕಾಂತ ನಾಟಿಕಾರ ಇತರರಿದ್ದರು.
- ಶ್ರೀ ಡಾ.ಅಭಿನವ ಬಸವಲಿಂಗ ಸ್ವಾಮೀಜಿ ಬಣ್ಣನೆ
- ಮಣ್ಣೂರಿನಲ್ಲಿ ಸೇವಾ ನಿವೃತ್ತಿ ಸಮಾರಂಭ
ಕರಜಗಿ: ಪ್ರಾವಂತ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥತೆಯಿಂದ ಸೇವೆ ಮಾಡುವ ಶಿಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ಎಂದು ನಾಗಣಸೂರ ತುಪ್ಪಿನಮಠದ ಶ್ರೀ ಡಾ.ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.
ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಶಿಕ ಅಡಿವೆಪ್ಪ ಕರಜಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಾನಾರ್ಜನೆ ಮಾಡಿರುವ ಶಿಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಅಡಿವೆಪ್ಪ ಕರಜಗಿ ಅವರು ಶಿಕರಾಗಿ ಸುದೀರ್ ಸೇವೆ ಸಲ್ಲಿಸಿ ಮೌಲ್ಯಯುತ ಶಿಣ ನೀಡುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಸಿದರು.
ಚವದಾದಾಪುರಿ ಹಿರೇಮಠದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮುಖ್ಯಗುರು ನಿಂಗಪ್ಪ ಪೂಜಾರಿ, ಪ್ರಮುಖರಾದ ವಿಶ್ವನಾಥ ಕರೂಟಿ, ಚಂದ್ರಕಾಂತ ನಾಟಿಕಾರ, ಕಾಳಪ್ಪ ಸುತಾರ, ಅಣ್ಣಾರಾವ ಮುಜಗೊಂಡ, ಸಿದ್ರಾಮಪ್ಪ ಹಿರೇಕುರುಬರ, ಶರಣಬಸಪ್ಪ ಅಳ್ಳಗಿ, ಮಲ್ಲಿಕಾರ್ಜುನ ಚಣೇಗಾಂವ್, ಹುಸೇನ್ಬಾಷಾ ಮುಜಾವರ, ಶ್ರೀಶೈಲ ಮ್ಯಾಳೇಶಿ, ಸಂತೋಷ ಚವ್ಹಾಣ್, ಜಗದೇವಪ್ಪ ಸಾತಲಗಾಂವ್, ಸುಭಾಷ ಜೇವರ್ಗಿ, ಭೀಮಣ್ಣ ವಾಯಿ, ಶಿವಶರಣಪ್ಪ ಸಂಗೋಳಗಿ, ಶಿವಪುತ್ರ ನಾವಾಡಿ, ಬಸವರಾಜ ವಾಯಿ, ಅಪ್ಪಾಸಾಬ ಹೊಸೂರಕರ, ಮಲ್ಲಿಕಾರ್ಜುನ ಬಾಗೇವಾಡಿ, ಬಸವರಾಜ ಕರೂಟಿ, ಗುರುರಾಜ ಬಾಕೆ ಇತರರಿದ್ದರು.