ಗೊಳಸಂಗಿಯಲ್ಲಿ ಸರ್ಕಾರಿ ಕಗಂಮ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಐ.ಚಲ್ಮಿ ಅವರ ಸೇವಾನಿವೃತ್ತಿ ಮತ್ತು ಸಾಧಕರ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಚಾಲನೆ ನೀಡಿದರು. ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶ್ರೀಗಳು, ಸಾಹಿತಿ ಅಶೋಕ ಹಂಚಲಿ, ಈರಣ್ಣ ಚಲ್ಮಿ ಮತ್ತಿತರರು ಇದ್ದರು.
- ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನುಗ್ಗಲಿ ಹೇಳಿಕೆ
- ಸಾಧಕರಿಗೆ ಪುರಸ್ಕಾರ
ಗೊಳಸಂಗಿ : ಮಕ್ಕಳಿಗೆ ಅಕ್ಷರ ಹೇಳಿಕೊಡುವುದಷ್ಟೇ ಶಿಕ್ಷಕರ ವೃತ್ತಿಯಲ್ಲ. ನಾಗಾಲೋಟದ ದಾರಿಯಲ್ಲಿ ಅವನತಿಯತ್ತ ಸಾಗುತ್ತಿರುವ ನಾಗರಿಕ ಸಮಾಜದ ಸ್ವಾಸ್ಥೃ ಕಾಪಾಡುವುದು ಶಿಕ್ಷಕರ ಕರ್ತವ್ಯ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.
ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ಬಿ.ಐ.ಚಲ್ಮಿ ಇವರ ಸೇವಾ ನಿವತ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಜನ ಸಾಧಕರ ಗೌರವಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸದ್ಭಾವ, ಸದ್ಗುಣ, ಸಚ್ಛಾರಿತ್ರೃ ಮತ್ತು ನಿಸ್ವಾರ್ಥದಿಂದ ಮಾಡಿದ ಸೇವೆಗೆ ಭಗವಂತನ ಅನುಗ್ರಹ ಸದಾಕಾಲವೂ ಇರುತ್ತದೆ ಎಂದರು.
ಶಿಕ್ಷಕ ಸಾಹಿತಿ ಅಶೋಕ ಹಂಚಲಿ, ಪತ್ರಕರ್ತ ಡಿ.ಬಿ.ಕುಪ್ಪಸ್ತ, ಶಿಕ್ಷಕಿ ಎಸ್.ಎಲ್. ಕುಂದರಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ದಳವಾಯಿ, ಬಸಯ್ಯಸ್ವಾಮಿ ಪಾರ್ವತಿಮಠ, ಪ್ರಮುಖರಾದ ಬಂದೇನವಾಜ ಡೋಲಚಿ, ಹರೀಬಾ ಜಾಧವ, ಸಿದ್ದಪ್ಪ ಕಾಳಗಿ, ಶಂಕರಗೌಡ ಪಾಟೀಲ, ಬಸವರಾಜ ನಡುವಿನಮನಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.
ನಿವೃತ್ತ ಶಿಕ್ಷಕ ಬಿ.ಐ.ಚಲ್ಮಿ ಅವರಿಗೆ ಗೊಳಸಂಗಿಯ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಎಚ್.ಡಿ.ನದಾಫ್ ಸ್ವಾಗತಿಸಿದರು.
ಬಿ.ಬಿ.ಚಿಂಚೋಳಿ ನಿರೂಪಿಸಿದರು. ಎಂ.ಬಿ. ಬಳಮಕರ ವಂದಿಸಿದರು.