ಚಿತ್ತಾಪುರ ತಾಲೂಕಿನ ಭೀಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಜಗಣ್ಣಗೌಡ ರಾಮತೀರ್ಥ, ಶರಣಗೌಡ ಮಾದ್ವಾರ, ವೀರಭದ್ರಪ್ಪ ಗುರುಮಿಠಕಲ್, ವೀರೇಂದ್ರ ಕೊಲ್ಲೂರ, ಅಪ್ಪಯ್ಯ ಹಿರೇಮಠ, ಲಿಂಗಣ್ಣ ಗೋಡೆಕರ್, ಸಂಗಮೇಶ ರೋಣದ ಇತರರಿದ್ದರು.
- ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಶ್ಲಾಘನೆ
- ಭೀಮನಹಳ್ಳಿಯಲ್ಲಿ ಸಾಹಿತ್ಯ ಸಂಭ್ರಮ
ಚಿತ್ತಾಪುರ: ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಯಿದ್ದು, ಅದನ್ನು ಪ್ರೋತ್ಸಾಹಿಸಿ ಹೊರತರುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಶ್ಲಾಘಸಿದರು.
ಭೀಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಮತ್ತು ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಯಶಸ್ವಿಯಾಗಿ ನಾಲ್ಕು ತಾಲೂಕು ಸಮ್ಮೇಳನಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭೀಮನಹಳ್ಳಿ ವಲಯದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್ ಮಾತನಾಡಿ, ಕನ್ನಡ ಅದ್ಭುತ ಭಾಷೆಯಾಗಿದ್ದು, ಸಾಹಿತ್ಯ ಮನುಷ್ಯನನ್ನು ಪರಿಶುದ್ಧ ಮಾಡುತ್ತದೆ. ತಾಲೂಕಿನಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸತರ ಉಪನ್ಯಾಸ, ಜಾನಪದ ಕಲೆ ಸೇರಿ ವಿವಿಧ ಸಾಹಿತ್ಯ ಚಟುವಟಿಕೆ ನಿರಂತರ ಆಯೋಜಿಸುವ ಮೂಲಕ ಭಾಷೆಯನ್ನು ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನ್ಯಾಯವಾದಿ ಶಂಕರ ವಿಜಾಪುರಕರ್, ಹಿರಿಯ ಸಾಹಿತಿಗಳಾದ ಲಿಂಗಣ್ಣ ಮಲ್ಕನ್, ಪಂಚಾಕ್ಷರಿ ಪೂಜಾರಿ, ಆಲ್ ಇಂಡಿಯಾ ಬಂಜಾರ ಸಮಾಜ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾಯಕ ಯಾಗಾಪುರ, ಶಿವಶಂಕರ ಮಾತನಾಡಿದರು.
ಕಸಾಪ ವಲಯ ಅಧ್ಯಕ್ಷ ಲಿಂಗಪ್ಪ ಗೋಡೆಕರ್ ಅಧ್ಯಕ್ಷತೆವಹಿಸಿದ್ದರು.
ತಾಪಂ ಮಾಜಿ ಉಪಾಧ್ಯಕ್ಷ ಶರಣಗೌಡ ಮಾದ್ವಾರ, ಕಸಾಪ ತಾಲೂಕು ಗೌರವ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಗೌರವ ಕಾರ್ಯದರ್ಶಿ ಸಂಗಮೇಶ ರೋಣದ, ಮುಖ್ಯಗುರು ಅಪ್ಪಯ್ಯ ಹಿರೇಮಠ, ಪ್ರಮುಖರಾದ ರವಿ ಕಾಸಲ, ಸುಭಾಷಗೌಡ ಪಸಾರ, ಬಸಣ್ಣಗೌಡ ತತ್ತರೆಡ್ಡಿ, ಬಸವರಾಜ ಪೂಜಾರಿ, ವಿರೂಪಾಕ್ಷರೆಡ್ಡಿ ಕೊಳ್ಳಿ, ನಾಗಪ್ಪ ಜಡ್ಲ, ಬಸವರಾಜ ಕೊಳ್ಳಿ, ವೆಂಕಪ್ಪ, ಸಿರಲಿಂಗಪ್ಪ ನಾಟಿಕಾರ, ಬಸವರಾಜ ನಾಲವಾರ, ಮಹಾದೇವಮ್ಮ ಹೊಸಮನಿ, ತಿಮ್ಮರಾಯ ಕಾಮಣ್ಣ, ಮಲ್ಲಿಕಾರ್ಜುನ ನಾಶಿ, ಗುರುಲಿಂಗ ಮೋಟನಳ್ಳಿ, ಬಸವರಾಜ ಗೊಳೆದ, ರಾವೇಂದ್ರ ಹಳ್ಳಿಪೇಟೆ, ರಾಜುಕುಮಾರ, ಗೀತಾ, ಖಾಸೀಂ ಅಲಿ, ದೇವಿಂದ್ರಪ್ಪ, ಸುನೀತಾ ಇತರರಿದ್ದರು.
ಕವನ& ದೇವಕಿ (ಪ್ರ), ಭಾಗ್ಯಶ್ರೀ (ದ್ವಿ). ಮೊಹರಂ ಪದ& ಮನೋಜ್ (ಪ್ರ). ಹಾಡುಗಾರಿಕೆ- ಕಾವೇರಿ (ಪ್ರ), ನಾಜಿಯಾ (ದ್ವಿ) ಉತ್ತಮ ಪ್ರದರ್ಶನ ನೀಡಿ ಗಮನಸೆಳೆದರು. ಕಸಾಪ ಹಿರಿಯ ಸದಸ್ಯರು, ಕಲಾವಿದರನ್ನು ಸನ್ಮಾನಿಸಲಾಯಿತು. ಸುಹಾನಾ ನಿರೂಪಣೆ ಮಾಡಿದರು. ರೂಪಾ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು.
"
ಕಥೆ, ಕವಿತೆ, ಹಾಡು, ನಾಟಕ ಹಾಗೂ ಮಹಾತ್ಮರ ಜೀವನ ಚರಿತ್ರೆಗಳು ಮಕ್ಕಳಲ್ಲಿ ಕಲ್ಪನಾ ಶಕ್ತಿ, ಸೃಜನಶೀಲತೆ, ಉತ್ತಮ ಮೌಲ್ಯ ಬೆಳೆಸುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಸ್ವಲ್ಪ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯಗಳ ಬಳಕೆ ಮಾಡಿಕೊಂಡು, ಸ್ವಲ್ಪ ಸಮಯ ಪುಸ್ತಕ ಓದಿಗೆ ಸಮಯ ಮೀಸಲಿಡಬೇಕು.
— > ಜಗಣ್ಣಗೌಡ ರಾಮತೀರ್ಥ, ಮಾಜಿ ಅಧ್ಯಕ್ಷ, ತಾಪಂ, ಚಿತ್ತಾಪುರ