ರಾಜ್ಯ

ಟಾಸ್ಕ್​ ಫೋರ್ಸ್​ ಸಭೆ ನಡೆಸಿಲ್ಲ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಖೂಬಾ ಆರೋಪ
ಬಸವಕಲ್ಯಾಣ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳಿಯ ಶಾಸಕರು ಟಾಸ್ಕ್​ಫೋರ್ಸ್​ ಸಭೆ ನಡೆಸದೆ ರ್ನಿಲಕ್ಷ ವಹಿಸಿದ್ದಾರೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪಿಸಿದ್ದಾರೆ.
ನಗರದಲ್ಲಿ ಪವಿತ್ರ ಪರುಷ ಕಟ್ಟೆ ಅಭಿವೃದ್ಧಿಗೆ ಸುಮಾರು 30 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಪರುಷ ಕಟ್ಟೆ ಹೇಗಿತ್ತು ಹಾಗೆಯೇ ಇದೆ. ಎಷ್ಟು ಹಣ ಬಂದಿದೆ. ಪರಿಹಾರ ಎಷ್ಟು ನೀಡಲಾಗಿದೆ ಎಂಬುವುದನ್ನು ಲೆಕ್ಕ ಕೊಡಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಚುನಾವಣೆ ಮುಗಿದು ಮೂರು ವರ್ಷ ಕಳೆದಿದೆ. ತ್ರಿಪುರಾಂತ ಕೆರೆ ಅಭಿವೃದ್ಧಿ ಆಗಿಲ್ಲ. ನಗರ ಯೋಜನಾ ಪ್ರಾಧಿಕಾರ ಮೇರ್ಲ್ದೆಗೇರಿಸಿಲ್ಲ. ಇದಕ್ಕೆ ನಾಮನಿರ್ದೇಶನವೂ ನಡೆದಿಲ್ಲ. ನಗರ ಸಭೆಯ ಪೌರಕಾಮಿಕರಿಗೆ 10 ತಿಂಗಳ ಸಂಬಳ ಸಿಕ್ಕಿಲ್ಲ. ಅಭಿವೃದ್ದಿ ಕೆಲಸಗಳು ಅಗುತ್ತಿಲ್ಲ. ಶಾಸಕರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿ ಇತ್ತೀಚೆಗೆ ಶ್ರೀ ಬಸವೇಶ್ವರ ಜಾತ್ರೋತ್ಸವ ವೇಳೆ ನಡೆದ ರಥೋತ್ಸವ ಸಂದರ್ಭದಲ್ಲಿ ನಡೆದ ದುರಂತಕ್ಕೆ ರ್ನಿಲಕ್ಷವೇ ಕಾರಣ. ಈ ಟನೆ ನೋವು ತಂದಿದೆ. ಇದು ನಡೆಯಬಾರದಿತ್ತು. ಜಾತ್ರೆಗೂ ಮುನ್ನ ಶಾಸಕರು ಮತ್ತು ದೇವಸ್ಥಾನ ಸಮಿತಿಯವರು ಸೇರಿ ಪೂರ್ವಭಾವಿ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಇದರಲ್ಲಿ ಎಲ್ಲರದ್ದು ತಪ್ಪಾಗಿದ್ದು, ಒಪ್ಪಿಕೊಳ್ಳಬೇಕು ಎಂದರು.
ಜೆಡಿಎಸ್​ ಪಕ್ಷ ಸಂಟನೆ ಬಲಪಡಿಸುವ ಉದ್ದೇಶದಿಂದ ಬೇಸಿಗೆ ಮುಗಿದ ನಂತರ ಮುಂಬರುವ ದಿನಗಳಲ್ಲಿ ಬಸವಕಲ್ಯಾಣದಲ್ಲಿ ಬೃಹತ್​ ಜೆಡಿಎಸ್​ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು, ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರ ಸ್ವಾಮಿ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.