ಬೆಂಗಳೂರು: ಅನೇಕ ದಿನಗಳಿಂದ ತೀವ್ರ ಕುತೂಹಲ ಹಾಗೂ ಕಗ್ಗಂಟಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಸಿದ್ಧಪಡಿಸಲಾದ ಅಂತಿಮ ಪಟ್ಟಿಯನ್ನು ರಾಜ್ಯಪಾಲರ ಅಧಿಕೃತ ಅಂಕಿತಕ್ಕಾಗಿ ಲೋಕಭವನಕ್ಕೆ (ರಾಜಭವನ) ಕಳುಹಿಸಿಕೊಡಲಾಗಿದ್ದು, ಅಧಿಕೃತ ಘೋಷಣೆ ಹೊರಬೀಳಬೇಕಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ದೆಹಲಿ ಮಟ್ಟದಲ್ಲಿ ನಡೆದ ಸರಣಿ ಸಮಾಲೋಚನೆಗಳು ಹಾಗೂ ಆಂತರಿಕ ಚರ್ಚೆಗಳ ನಂತರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ ತಕ್ಷಣವೇ ಅಧಿಕೃತ ಪಟ್ಟಿ ಪ್ರಕಟಕವಾಗಲಿದೆ.
ರಾಜಭವನಕ್ಕೆ ಕಳುಹಿಸಲಾಗಿದೆ ಎನ್ನಲಾದ ಖಾತೆಗಳ ಪಟ್ಟಿ ವಿವರ
ಎನ್. ಚಲುವರಾಯಸ್ವಾಮಿ: ಕೃಷಿ ಇಲಾಖೆ
ರಿಜ್ವಾನ್ ಅರ್ಷದ್: ಆಹಾರ ಮತ್ತು ನಾಗರಿಕ ಪೂರೈಕೆ
ಕೆ. ಹೆಚ್. ಮುನಿಯಪ್ಪ: ಸಮಾಜ ಕಲ್ಯಾಣ ಇಲಾಖೆ
ಸಂತೋಷ್ ಲಾಡ್: ಕಾರ್ಮಿಕ ಇಲಾಖೆ
ಕೆ. ಎಸ್. ಬಸವಂತಪ್ಪ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಬಸವರಾಜ್ ರಾಯರೆಡ್ಡಿ: ಉನ್ನತ ಶಿಕ್ಷಣ ಇಲಾಖೆ
ಜಮೀರ್ ಅಹಮದ್ ಖಾನ್: ವಸತಿ ಇಲಾಖೆ
ಲಕ್ಷ್ಮಣ ಸವದಿ: ಸಹಕಾರ ಇಲಾಖೆ
ಅಜಯ್ ಸಿಂಗ್: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
ಎಸ್. ಎಸ್. ಮಲ್ಲಿಕಾರ್ಜುನ: ಗಣಿ ಮತ್ತು ಭೂವಿಜ್ಞಾನ
ಹೆಚ್. ಸಿ. ಬಾಲಕೃಷ್ಣ: ಸಣ್ಣ ನೀರಾವರಿ ಇಲಾಖೆ
ಸಿ. ಎಂ. ಪುಟ್ಟರಂಗಶೆಟ್ಟಿ: ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ