ಪ್ಲಾಸ್ಟಿಕ್​ಮುಕ್ತ ನಗರಕ್ಕೆ ಪಪಂ ಹರಸಾಹಸ plastic-free city 
ರಾಜ್ಯ

ಪ್ಲಾಸ್ಟಿಕ್​ಮುಕ್ತ ನಗರಕ್ಕೆ ಪಪಂ ಹರಸಾಹಸ plastic-free city

ಪ್ರಮುಖ ಮುಖ್ಯಾಂಶಗಳು

  • ಬೀದಿಬೀದಿಯಲ್ಲೂ ಗಸ್ತು ಹೆಚ್ಚಳ
  • ಜಾಗೃತಿ ಮೂಡಿಸಿ, ದಂಡಾಸ್ತ್ರ
ವೇಮಗಲ್​: ಕೋಲಾರ ತಾಲೂಕು ವೇಮಗಲ್​&-ಕುರುಗಲ್​ ಪಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್​ಮುಕ್ತ ಪಟ್ಟಣ ಮಾಡಲು ನಿದ್ದೆಗೆಟ್ಟ ಪಪಂ ಅಧಿಕಾರಿಗಳು ಕಸದ ನಿಯಂತ್ರಣಕ್ಕೆ ಹಲವು ಪ್ರಯತ್ನಗಳೊಂದಿಗೆ ಹರಸಾಹಸ ಪಡುತ್ತಿದ್ದಾರೆ.
ಮನೆಗಳ ಬಳಿ ಕಸದ ವಾಹನ ಕಳಿಸುವುದು, ಧ್ವನಿವರ್ಧಕದಲ್ಲಿ ಅರಿವು ಮೂಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿರುವ ಕಡೆ ಸಗಣಿ ಇಂದ ಸಾರಿಸಿ ರಂಗೋಲಿ ಬಿಡಿಸಿ ವಿವಿಧ ಬಣ್ಣಗಳಿಂದ, ವಿವಿಧ ವಸ್ತುಗಳನ್ನು ಬಳಸಿ ವಿವಿಧ ವಿನ್ಯಾಸದಲ್ಲಿ ಸಿಂಗರಿಸುವುಸುವುದು, ಪೂಜೆ ಮಾಡುವುದು, ಇಲ್ಲಿ ಕಸ ಹಾಕಬಾರದು ಎಂಬ ನಾಮಫಲಕ ಹಾಕುವುದು ಸೇರಿ ವಿವಿಧ ಪ್ರಯತ್ನ ನಡೆದಿವೆ. plastic-free city
ಕೆಲವೊಮ್ಮೆ ಸಾರ್ವಜನಿಕರು ಕಸ ಹಾಕುವುದನ್ನು ಕಂಡು ಆ ಕಸವನ್ನು ಅವರಿಂದಲೇ ತೆಗೆಸಿ ಎಚ್ಚರಿಕೆ ನೀಡುವುದು ಸಹ ಮಾಡಿದ್ದಾರೆ. ಈ ಎಲ್ಲವನ್ನೂ ಮಾಡಿದ ಅಧಿಕಾರಿಗಳು ಕೊನೆಯ ಅಸ್ತ್ರವಾಗಿ ದಂಡ ವಿಧಿಸಲು ಮುಂದಾಗಿದ್ದಾರೆ.
ಡಿ.20ರಂದು 13ನೇ ವಾರ್ಡ್​ನ ಕಲ್ವ ಮಂಜಲಿ ರಸ್ತೆಯ ಪಕ್ಕದಲ್ಲಿ ಯಾರ್ಯಾರು ಕಸ ಹಾಕುತ್ತಾರೆ ಎಂದು ಕಾಯುತ್ತಿದ್ದ ಅಧಿಕಾರಿಗಳು ಕಸ ಹಾಕಲು ಬಂದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದ್ದಾರೆ.
"

ಹೋಟೆಲ್​, ಬೇಕರಿ, ಅಂಗಡಿಯ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ಹೇಳಿ ಹೇಳಿ ಸಾಕಾಗಿದೆ. ಹೋಟೆಲ್​ವೊಂದಕ್ಕೆ ಭೇಟಿ ನೀಡಿದಾಗ ಸಾಂಬಾರ್​ನಲ್ಲಿ ಜಿರಳೆ ಸಿಕ್ಕಿದೆ. ಮಾಲೀಕ ಕ್ಷಮೆಯಾಚಿಸಿದ್ದು, ದಂಡ ವಿಧಿಸಿ ಮಾನವೀಯತೆ ದೃಷ್ಟಿಯಿಂದ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಮತ್ತೆ ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಂಡು ಹೋಟೆಲ್​ ಮುಚ್ಚಿಸಲಾಗುವುದು.