The state government's move is condemnable. 
ರಾಜ್ಯ

ರಾಜ್ಯ ಸರ್ಕಾರದ ನಡೆ ಖಂಡನೀಯ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ವಿವಿಧ ಕೃಷಿ ಬೆಳೆಗಳನ್ನು ಪ್ರದರ್ಶನಕ್ಕಿಟ್ಟು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನದ ಎದುರು ಬುಧವಾರ ಅರ್ನಿದಿಷ್ಟಾವಧಿ ಧರಣಿ ನಡೆಯುತ್ತದೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ13 ಹಳ್ಳಿಗಳ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧಿನ ಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕಳೆದ ಮಾ.16ರಿಂದ ಹೋರಾಟವನ್ನು ನಡೆಸಲಾಗುತ್ತಿದ್ದು, ಬುಧವಾರ ಮುಂದುವರೆಯಿತು.
ಜಿಲ್ಲೆಯಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧಿನ ಪಡಿಸಿಕೊಳ್ಳಲಾಗುತ್ತಿದೆ. ಇದನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ತನ್ನ ನಿಲುವು ಬದಲಿಸಿಲ್ಲ ಎಂದು ಭೈರೇಗೌಡ ಕಿಡಿಕಾರಿದರು.
ದಲಿತ ಮುಖಂಡರಾದ ವೆಂಕಟೇಶಪ್ಪ, ಕೆ.ಸಿ.ರಾಜಾಕಾಂತ್​, ಸಿ.ಜಿ.ಗಂಗಪ್ಪ, ಮಾನವ ಹಕ್ಕುಗಳ ಕಮಿಟಿ ರಾಜ್ಯಾಧ್ಯಕ್ಷ ಬೈರೇಗೌಡ, ಮೂರ್ತಿ, ಕನ್ನಡಪರ ಹೋರಾಟಗಾರ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಶಿವ ರಾಮೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್​.ಪಿ.ರಾಮನಾಥ್​, ಮುಖಂಡರಾದ ಕೃಷ್ಣಪ್ಪ, ನಂಜುಂಡಪ್ಪ, ನಾಗೇಂದ್ರ, ವೆಂಕಟೇಶಪ್ಪ, ದೇವರಾಜ್​ ಮತ್ತಿತರರು ಭಾಗವಹಿಸಿದ್ದರು.