ಬೆಂಗಳೂರು: ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 54 ನಿಗಮ ಮಂಡಳಿ ಅಧ್ಯಕ್ಷರಿಗೆ(corporation board chairmen) ತಕ್ಷಣಕ್ಕೆ ಜಾರಿಗೆ ಬರುವಂತೆ ಅನ್ವಯಿಸಿ ರಾಜ್ಯ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಶನಿವಾರ(ಫೆ. 07) ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯಪಾಲರ ಆದೇಶಾನುಸಾರ ಅಧಿಸೂಚನೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಭಾಣದರಂಗಯ್ಯ.ಎನ್.ಆರ್, ಆಯಾ ಇಲಾಖೆಗೆ ಸಂಬಂಧಿಸಿದಂತೆ ಅಧಿನಿಯಮ ಮತ್ತು ನಿಯಮಗಳ ರೀತ್ಯ ತಕ್ಷಣದಿಂದ ಅಧ್ಯಕ್ಷರುಗಳು ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿ, ರಾಜ್ಯ ಸ್ಥಾನಮಾನಗಳನ್ನು ಒದಗಿಸುವಂತೆ ಆಡಳಿತ ಇಲಾಖೆಗಳಿಗೆ ಆದೇಶ ನೀಡಿದ್ದಾರೆ.
54 ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ಇಂತಿದೆ
- ಮಮತಾ ಗಟ್ಟಿ- ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು
- ಎನ್.ರಂಗಸ್ವಾಮಿ-ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು
- ವಡ್ನಾಳ್ ಜಗದೀಶ್-ಅಧ್ಯಕ್ಷರು, ಕರ್ನಾಟಕ ಜೀವ ವೈವಿದ್ಯ ಮಂಡಳಿ
- ಮಹೇಶ್ ಎಂ.ಎನ್- ಅಧ್ಯಕ್ಷರು, ಕರ್ನಾಟಕ ತಜ್ಞರ ಮೌಲ್ಯಮಾಪನ ಸಮಿತಿ (SEAC)
- ಗುರುಪ್ರಸಾದ್ ಬಿ-ಅಧ್ಯಕ್ಷರು, ರಾಜ್ಯ ಪರಿಸರ ಪರಿಣಾಮ ಮೌಲ್ಯ ಮಾಪನಾ ಪ್ರಾಧಿಕಾರ (SEIAA)
- ಬಿ.ಕೆ. ಅಲ್ತಾಫ್ ಖಾನ್-ಅಧ್ಯಕ್ಷರು, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (KMDC)
- ಜುಲ್ಫಿಕರ್ ಅಹಮದ್ ಖಾನ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಹಜ್ ಸಮಿತಿ
- ಮುಹಮದ್ ಅಲಿ ಅಲ್ ಹುಸೇನಿ-ಅಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಸ್ ಮಂಡಳಿ
- ಡಾ.ಎಸ್.ಜಫೇಟ್-ಅಧ್ಯಕ್ಷರು, ಕರ್ನಾಟಕ್ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ
- ವಿ.ಎಸ್. ಆರಾಧ್ಯ-ಅಧ್ಯಕ್ಷರು, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(BMTC)
- ಅರುಣ್ ಕುಮಾರ್ ಪಾಟೀಲ್-ಅಧ್ಯಕ್ಷರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಈಶಾನ್ಯ)
- ಲಕ್ಷ್ಮೀಶ.ಕೆ.ಎಂ- ಅಧ್ಯಕ್ಷರು, ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ (BESCOM)
- ಲಲಿತ್ ರಾಘವ್-ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ )
- ಎಸ್ ಮನೋಹರ್- ಅಧ್ಯಕ್ಷರು, ದಿ ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
- ಕೀರ್ತಿ ಗಣೇಶ್-ಅಧ್ಯಕ್ಷರು, ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
- ಜಿ. ಹೆಚ್. ಮರಿಯೋಜಿರಾವ್-ಅಧ್ಯಕ್ಷರು, ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ
- ಎಂ.ಎಸ್.ಆತ್ಮಾನಂದ-ಅಧ್ಯಕ್ಷರು, ಒಕ್ಕಲಿಗರ ಸಮುದಾಯಗಳ ಅಭಿವೃದ್ಧಿ ನಿಗಮ
- ಸುಜ್ಞಾನಮೂರ್ತಿ ಪಿ- ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
- ಭರಮಣ್ಯ ಉಪ್ಪಾರ-ಅಧ್ಯಕ್ಷರು, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
- ಶ್ರೀ ಎಂ.ಎಸ್.ಮುತ್ತುರಾಜ್-ಅಧ್ಯಕ್ಷರು, ಸಮಿತಾ ಸಮಾಜ ಅಭಿವೃದ್ಧಿ ನಿಗಮ
- ನಂಜಪ್ಪ.ಸಿ-ಅಧ್ಯಕ್ಷರು, ಮಡಿವಾಳ ಮಾಚಿದೇವ ಅಭಿವೃದ್ಧಿನಿಗಮ
- ಮಹೇಶ್ .ಎಂ-ಅಧ್ಯಕ್ಷರು, ಕಾಡುಗೊಲ್ಲ ಅಭಿವೃದ್ಧಿ ನಿಗಮ
- ಎಸ್.ಗಂಗಾಧರ್-ಅಧ್ಯಕ್ಷರು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
- ನೀಲಕಂಠರಾವ್ ಎಸ್. ಮೂಲಗೆ-ಅಧ್ಯಕ್ಷರು, ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ
- ಬಿ.ಎಸ್. ಕವಲಗಿ-ಅಧ್ಯಕ್ಷರು, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ, ವಿಜಯಪುರ
- ಹೆಚ್.ಬಿ. ಮಂಜಪ್ಪ-ಅಧ್ಯಕ್ಷರು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ
- ఆరా.ఎం. ಮಂಜುನಾಥಗೌಡ-ಅಧ್ಯಕ್ಷರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ
- ಮುತ್ತಪ್ಪ-ಅಧ್ಯಕ್ಷರು, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ನಿಯಮಿತ, ಮೈಸೂರು
- ಎಂ. ಶ್ರೀನಿವಾಸ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
- ಆಯೂಬ್ ಖಾನ್-ಅಧ್ಯಕ್ಷರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು
- ಸೈಯದ್ ಮೊಹಮೂದ್ ಚಿಸ್ಮಿ-ಅಧ್ಯಕ್ಷರು, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕಲಬುರ್ಗಿ(ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ)
- ಅಂಜನಪ್ಪ-ಅಧ್ಯಕ್ಷರು, ಕರ್ನಾಟಕ ರಾಜ್ಯ ಬೀಜ ನಿಗಮ
- ಗಂಗಾಧರ್-ಅಧ್ಯಕ್ಷರು, ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ, ದಿ ಮೈಸೂರು ಷುಗರ್ ಕಂಪನಿ
- ಜಿ.ಎಸ್. ಪಾಟೀಲ್-ಅಧ್ಯಕ್ಷರು, ಮೈಸೂರು ಸ್ಟೇಟ್ ಮಿನರಲ್ ಕಾರ್ಪೋರೇಷನ್ ಲಿಮಿಟೆಡ್, ಬೆಂಗಳೂರು
- ಸತೀಶ್ ಕೃಷ್ಣಸೈಲ್-ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್
- ಬಿ. ನಾಗೇಂದ್ರ ಕುಮಾರ್-ಅಧ್ಯಕ್ಷರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮನಿಯಮಿತ, ಹುಬ್ಬಳ್ಳಿ
- ಜೆ.ಎಂ. ಗಣೇಶ-ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಮಕಾರರ ಮಹಾ ಮಂಡಳಿ ನಿಯಮಿತ (ಕಾವೇರಿ ಹ್ಯಾಂಡಲೂಮ್ಸ್)
- ಚೇತನ್ ಕೆ-ಅಧ್ಯಕ್ಷರು, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ (ವಿದ್ಯುತ್ ಮಗ್ಗಗಳ ಅಭಿವೃದ್ಧಿನಿಗಮ) ಬೆಳಗಾವಿ (KSTIDC)
- ಕೆ. ವಿ. ರಾಮ್‌ಪ್ರಸಾದ್-ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
- ಜಯಸಿಂಹ-ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
- ಆರ್ ಸಂಪತ್ ರಾಜ್-ಅಧ್ಯಕ್ಷರು, ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ
- ಎನ್ ಜಯದೇವನಾಯ್ಕ-ಅಧ್ಯಕ್ಷರು, ಕರ್ನಾಟಕ ತಾಂಡಾ/ಬಂಜಾರ ಅಭಿವೃದ್ಧಿ ನಿಗಮ
- ಜಿ.ಎಸ್. ಮಂಜುನಾಥ್-ಅಧ್ಯಕ್ಷರು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
- ಮುರಳಿ ಅಶೋಕ್ ಸಾಲಪ್ಪ-ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
- ಪಲ್ಲವಿ.ಜಿ-ಅಧ್ಯಕ್ಷರು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
- ಮುಂಡರಗಿ ನಾಗರಾಜು-ಅಧ್ಯಕ್ಷರು, ಡಾ: ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್)
- ದೇವೇಂದ್ರಪ್ಪ ಮರ್ತೂರು-ಅಧ್ಯಕ್ಷರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
- ಮಾಲಾ ನಾರಾಯಣರಾವ್-ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು
- ಪದ್ಮಾವತಿ-ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿಗಮ
- ಕಾಂತಾ ನಾಯ್ಕ್-ಅಧ್ಯಕ್ಷರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ
- ಪಿ. ರಘು-ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಬೆಂಗಳೂರು
- ಬಿ.ಹಚ್.ಹರೀಶ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಬೆಂಗಳೂರು (ಕೆಎಫ್‌ಕೆ) (ರಾಜ್ಯ ಮಟ್ಟದ ಸಾವಯವ ಕೃಷಿ ಉತ್ಪನ್ನ ಮಟ್ಟದ ಆಧಿಕಾರಯುಕ್ತ ಸಮಿತಿ)
- ಮಧುಸೂಧನ್ ಆರ್. ನಾಯ್ಕ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು
- ಡಾ: ಬಿ.ಡಿ. ಭೂಕಾಂತ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ