ಅಯ್ಯಪ್ಪ ಸ್ವಾಮಿ ದೇವಾಲಯ ಉದ್ಘಾಟನೆ ನಿಮಿತ್ತ ಸುರಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಮಾಜಿ ಸಚಿವ ನರಸಿಂಹ ನಾಯಕ ಉದ್ಘಾಟಿಸಿದರು. ಮಂಜುನಾಥ ನಾಯಕ, ರಾಜು ಹನುಮಪ್ಪ ನಾಯಕ(ತಾತಾ), ಶಾಂತಗೌಡ ಚನ್ನಪಟ್ಟಣ, ಸುಜಾತಾ ಜೇವರ್ಗಿ, ಡಾ.ಆರ್.ವಿ.ನಾಯಕ, ಸಣ್ಣ ವೆಂಕಟರೆಡ್ಡಿ, ಜಯರಾಮ ಕಟ್ಟಿಮನಿ, ಗಿರೀಶ್ ಪಾಟೀಲ್ ಇತರರಿದ್ದರು. 
ರಾಜ್ಯ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭಕ್ತಿಯ ಸಂಕಲ್ಪದ ಫಲ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರಾಜುಗೌಡ ಅಭಿಮತ
  • ನೂತನ ದೇವಾಲಯ ಲೋಕಾರ್ಪಣೆ
ಸುರಪುರ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭಕ್ತಿಯ ಸಂಕಲ್ಪ ಮತ್ತು ನಿಷ್ಠೆಯ ಫಲವಾಗಿದೆ ಎಂದು ಮಾಜಿ ಸಚಿವರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಬಳಿಕ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನ ನಿರ್ಮಾಣದ ಸಂಕಲ್ಪ ತೊಟ್ಟ ದಿನದಿಂದ ಉದ್ಘಾಟನೆವರೆಗೂ ಶ್ರೀಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಯಕ ಬೈರಿಮಡ್ಡಿ ಕಠಿಣ ವ್ರತ ಆಚರಿಸಿ ಈ ಕಾರ್ಯ ಪೂರ್ಣಗೊಳಿಸಿರುವುದು ಅವರ ಅಯ್ಯಪ್ಪ ಸ್ವಾಮಿ ಮೇಲಿನ ಭಕ್ತಿ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಕೊಂಡಾಡಿದರು.
ಐತಿಹಾಸಿಕ ಶ್ರೀ ವೇಣುಗೋಪಾಲ ಸ್ವಾಮಿ, ಕೊಡೇಕಲï ಬಸವಣ್ಣನಂತೆ ಈ ದೇವಾಲಯ ಸಹ ನಗರದ ಧಾರ್ಮಿಕ ಹಿರಿಮೆ ಹೆಚ್ಚಿಸಲಿದೆ. ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ಭೂದಾನಿ, ಮಹಾದಾನಿಗಳು, ಟ್ರಸ್ಟ್ ಸದಸ್ಯರು ಮತ್ತು ಭಕ್ತರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಸಾನ್ನಿಧ್ಯ ವಹಿಸಿದ್ದ ಅಗತೀರ್ಥದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಆಶೀರ್ವಚನ ನೀಡಿ, ಅಯ್ಯಪ್ಪ ಸ್ವಾಮಿ ಎಂದರೆ ಕೇರಳ ನೆನಪಾಗುತ್ತದೆ. ಆದರೆ ನಮ್ಮ ಶೂರರ ನಾಡು ಸುರಪುರದಲ್ಲೂ ಇಂತಹ ದಿವ್ಯ ಸನ್ನಿಧಾನ ಪ್ರತಿಷ್ಠಾಪನೆ ಆಗಿರುವುದು ಸಂತಸದ ವಿಷಯ ಎಂದರು.
ಡಾ.ಮೋಹನ್ ಗುರುಸ್ವಾಮಿ ಮಾತನಾಡಿದರು. ದೇವಾಪುರ ಸಂಸ್ಥಾನ ಹಿರೇಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಗೋಲಪಲ್ಲಿ ಶ್ರೀ ವಾಲ್ಮೀಕಿ ಪೀಠದ ವರದಾನೇಶ್ವರ ಮಹಾಸ್ವಾಮೀಜಿ, ಮುದನೂರ ಕಂಠಿ ಮಠದ ಶ್ರೀ ಸಿದ್ದಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಂಜುನಾಥ ಗುರುಸ್ವಾಮಿ, ಪದ್ಮನಾಭ ಗುರುಸ್ವಾಮಿ ಉಡುಪಿ, ಪ್ರಕಾಶ ಗುರುಸ್ವಾಮಿ ಮುದನೂರ ಸಾನ್ನಿಧ್ಯ ವಹಿಸಿದ್ದರು.
ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಯಕ ಬೈರಿಮಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಗೌರವಾಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಪ್ರಮುಖರಾದ ಶಾಂತಗೌಡ ಚನ್ನಪಟ್ಟಣ, ಸುಜಾತಾ ಜೇವರ್ಗಿ, ಡಾ.ಆರ್.ವಿ.ನಾಯಕ, ಸಣ್ಣ ವೆಂಕಟರೆಡ್ಡಿ, ಜಯರಾಮ ಕಟ್ಟಿಮನಿ, ಗಿರೀಶ ಪಾಟೀಲ್, ಬಲಭೀಮ ನಾಯಕ ಬೈರಿಮಡ್ಡಿ, ಬಿ.ಎಂ. ಅಳ್ಳಿಕೋಟಿ, ರಮೇಶ ದೊರೆ, ಭೀಮನಗೌಡ ಹೆಮನೂರ, ವಿಷ್ಣು ಗುತ್ತೇದಾರ್, ಪಾರಪ್ಪ ಗುತ್ತೇದಾರ್ ಇತರರಿದ್ದರು. ಸುನೀತಾ ಮತ್ತು ಲಂಕೇಶ್ ದೇವತ್ಕಲï ನಿರೂಪಣೆ ಮಾಡಿ ವಂದಿಸಿದರು.

ಕಳಸಾರೋಹಣ ಸಂಭ್ರಮ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸಾರೋಹಣ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಪೂಜ್ಯರ ಸಾನ್ನಿಧ್ಯ, ಗಣ್ಯರ ಸಮ್ಮುಖ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಸ್ಥಾನದ ಲೋಕಾರ್ಪಣೆ ಮಾಡಲಾಯಿತು. ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.