ಹಿಡಕಲ್ ಗ್ರಾಮದ ಅಡವಿಸಿದ್ಧೇಶ್ವರ ಮಠದ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅದೃಶ್ಯ ಶಿವಾಚಾರ್ಯರು ಮಾತನಾಡಿದರು. ಸುಭಾಷ ಕಮ್ಮಾರ, ಶಾಂತಯ್ಯ ಸ್ವಾಮೀಜಿ, ಮಹಾಂತೇಶ ರಾಹುತ, ದೀಪಾ ಪಾಟೀಲ ಇತರರಿದ್ದರು.
ಇಟಗಿ: ಸಮಾಜಮುಖಿ ಕಾರ್ಯಗಳ ಮೂಲಕ ಜನತೆಯಲ್ಲಿ ಸೇವೆ ಮತ್ತು ದಾನ&ಧರ್ಮದಂತಹ ಗುಣ ಬೆಳೆಸುವಲ್ಲಿ ಮಠಗಳ ಪಾತ್ರ ಅನನ್ಯ ಎಂದು ತೋಲಗಿ ಅದೃಶ್ಯಾನಂದ ಆಶ್ರಮದ ಅದೃಶ್ಯ ಶಿವಾಚಾರ್ಯರು ಹೇಳಿದರು. ಸಮೀಪದ ಹಿಡಕಲ್ ಗ್ರಾಮದ ಅಡವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮರ ದಿವ್ಯ ಸಂದೇಶ ಅರಿತು ಸುಂದರ ಜೀವನ ಸಾಗಿಸಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಮಠದ ಪೀಠಾಧ್ಯ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ, ತುರಮರಿಯ ಶಾಂತಯ್ಯ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಹಾಂತೇಶ ರಾಹುತ, ದೀಪಾ ಪಾಟೀಲ ಹಾಗೂ ಬಸವರಾಜ ಮಾದರ, ರವಿಶಂಕರ ಗುರೂಜಿ ಹಾಗೂ ಗ್ರಾಮಸ್ಥರು ಇದ್ದರು. ಅದೃಶ್ಯ ಗರಗದ ಹಾಗೂ ಸುಭಾಷ ಕಮ್ಮಾರ ವಚನ ಸಂಗೀತ ನಡೆಸಿಕೊಟ್ಟರು. ಆಧ್ಯಾತ್ಮಿಕ ಚಿಂತಕ ಮಂಜು ಅಂಕಲಗಿ ಸ್ವಾಗತಿಸಿ, ನಿರೂಪಿಸಿದರು.