ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ೫ ಕೋಟಿ ರೂ. ವೆಚ್ಚದ ಕಿರು ಸೇತುವೆಗೆ ಭಾನುವಾರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಬಸ್ಸುಗೌಡ ಬಿಳ್ಹಾರ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮರಿಯಪ್ಪ ವರ್ಚನಳ್ಳಿ, ಮರೆಪ್ಪ ಬಿಳ್ಹಾರ, ಲಚಮರಡ್ಡಿ, ಸೂಗೂರೆಡ್ಡಿ ಪಾಟೀಲ್, ಶರಣಗೌಡ ಮದರಕಲ್, ಗುರುನಾಥರಡ್ಡಿ ಕದರಾಪುರ, ಬಾಬುಗೌಡ ಮಾಚನೂರ, ಸಿದ್ದಲಿಂಗಪ್ಪಗೌಡ ಮಾಡಿಗೇರಿ ಇತರರಿದ್ದರು. 
ರಾಜ್ಯ

ಕಿರು ಸೇತುವೆಯಿಂದ ಅನೇಕರಿಗೆ ಲಾಭ

ಕೋಡಾಲ ಗ್ರಾಮದ ಹೊರ ವಲಯದ ಕೃಷ್ಣಾ ನದಿ ದಂಡೆಯಿಂದ ಗಡ್ಡೆ ಬಸವೇಶ್ವರ ದೇವಸ್ಥಾನ ಸಂಪರ್ಕಿಸುವ ಕಿರು ಸೇತುವೆ ನಿರ್ಮಾಣದಿಂದ ಸಹಸ್ರಾರು ಭಕ್ತರಿಗೆ ಹಾಗೂ ರೈತರಿಗೆ ಹೆಚ್ಚಿನ  ಅನುಕೂಲವಾಗಲಿದೆ ಎಂದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

ಗ್ರಾಮದ ಕೃಷ್ಣಾನದಿ ದಂಡೆಯಲ್ಲಿ ಲೊಕೋಪಯೋಗಿ ಇಲಾಖೆ ೫ ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾ ನದಿಯ ಒಂದು ಭಾಗದಿಂದ ದೇವಸ್ಥಾನ ಸಂಪರ್ಕೀಸುವ ಕಿರು ಸೇತುವೆಗೆ ಭಾನುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಕಾಮಗಾರಿಗೆ ಇಂದು ಅಡಿಗಲ್ಲು ನೆರವೇರಸಲಾಗಿದ ಎಂದರು.
ಚುನಾವಣೆ  ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಜನರು ಸೇತುವೆ ನಿರ್ಮಾಣ ಬೇಡಿಕೆ ಇಟ್ಟಿದ್ದರು. ಕಳೆದ ೩ ವರ್ಷಗಳಿಂದ ನಿರಂತರ ಅಽಕಾರಿಗಳು ಹಾಗೂ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಪರಿಣಾಮ ಈ ಕಾಮಗಾರಿ ಮಂಜೂರಾಗಿದೆ. ಗುತ್ತಿಗೆದಾರರು ಗುಣಮಟ್ಟದಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರ ಪಂಚ ಗ್ಯಾರಂಟಿ ಉಚಿತ ಯೋಜನೆ ಜಾರಿಗೆ ತಂದರೂ ಅದಕ್ಕೆ ಪ್ರತಿ ವರ್ಷ ಸೂಕ್ತ ಅನುದಾನ ಒದಗಿಸುತ್ತಿದೆ. ಅಲ್ಲದೆ ಆಯಾ ಶಾಸಕರ ಮತಕ್ಷೇತ್ರಗಳ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ವಿವಿಧ ಇಲಾಖೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಕೂಡ ನೀಡಿದ್ದಾರೆ. ನಾನು ಆಯಾ ಗ್ರಾಮಗಳ ಜನರ ಬೇಡಿಕೆಯಂತೆ ಅಗತ್ಯ ಕಾಮಗಾರಿ ಕೈಗೊಂಡು ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಶ್ರೀ ಗಡ್ಡಿ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶ್ರೀ ಪಂಚಮ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ದೇವಸ್ಥಾನಕ್ಕೆ ೪೦೦ ವರ್ಷಗಳ ಇತಿಹಾಸವಿದೆ. ಬಸವಣ್ಣ ಉದ್ಭವಮೂರ್ತಿಯಾಗಿದ್ದಾನೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೃಷ್ಣಾನದಿ ನೀರಿನಲ್ಲಿಯೇ ದಾಟಿ ಬರುತ್ತಾರೆ. ಆ ದೇವರ ಶಕ್ತಿಯಿಂದ ಈವರೆಗೆ ಯಾರಿಗೂ ಜಲಚರ ಪ್ರಾಣಿಗಳು ತೊಂದರೆ ನೀಡಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ ಮಾತನಾಡಿದರು. ಪ್ರಾಸ್ತಾವಿಕವಾಗಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಾತನಾಡಿದರು. ಹೊಸಪೇಟದ ಕೆಂಪಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮರಿಯಪ್ಪ ವರ್ಚನಳ್ಳಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಹಾರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ನಿವೃತ್ತ ಎಇಇ ಸೂಗೂರೆಡ್ಡಿ ಪಾಟೀಲ್, ಗುತ್ತಿಗೆದಾರ ಶರಣಗೌಡ ಮದರಕಲ್, ಗುರುನಾಥರಡ್ಡಿ ಕದರಾಪುರ, ಬಾಬುಗೌಡ ಮಾಚನೂರ, ಸಿದ್ಧಲಿಂಗಪ್ಪಗೌಡ ಮಾಡಿಗೇರಿ, ಧರ್ಮಣ್ಣಗೌಡ ದೋತಂಡಿ, ಶಿವನಗೌಡ ಬೆಂಡೆಬೆAಬಳಿ, ಪಿಎಸ್‌ಐ ಮಹಿಬೂಬ ಅಲಿ, ಬಂದಪ್ಪಗೌಡ ಐರೆಡ್ಡಿ, ಶರಣಗೌಡ ಬಲಕಲ್ ಇತರರಿದ್ದರು.