ಬೊಮ್ಮನಹಳ್ಳಿ ನಗರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗೆ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ಜಾಕೆಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಹನುಮಂತರಾಜು, ಠಾಣೆಯ ಆರಕ್ಷಕ ನಿರೀಕ್ಷಕ ಮೋಹನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ನಿಸಾರ್ ಅಹಮ್ಮದ್, ಸಿಬ್ಬಂದಿ ಹನುಮಂತರಾಜು, ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಮಾರ್ಗದರ್ಶಕ ಎಂ.ಟಿ.ನವೀನ್ ಕುಮಾರ್, ಉಪಾಧ್ಯಕ್ಷ ಬಿ.ಪಿ.ಕಿರಣ್ ಕುಮಾರ್ ಇದ್ದರು.
ನೆಲಮಂಗಲ : ಸಂಚಾರದಟ್ಟಣೆ ನಿಯಂತ್ರಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರ ಕಾರ್ಯ ಶ್ಲಾನೀಯ ಎಂದು ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಧ್ಯಕ್ಷ ಹನುಮಂತರಾಜು ಸ್ಮರಿಸಿದರು.
ತಾಲೂಕಿನ ಬೊಮ್ಮನಹಳ್ಳಿ ನಗರ ಸಂಚಾರ ಪೊಲೀಸ್ ಠಾಣೆ ಬಳಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ಅಯೋಜಿಸಿದ್ದ ಪೊಲೀಸರಿಗೆ ಜಾಕೆಟ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗಾಳಿ, ಧೂಳು, ಮಳೆ, ಬಿಸಿಲು ಎನ್ನದೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಪೊಲೀಸರಿಗೆ ಅನುಕೂಲವಾಗಲು ಜಾಕೆಟ್ ವಿತರಿಸಲಾಗಿದೆ ಎಂದರು.
ಸಂಚಾರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಮೋಹನ್ ಕುಮಾರ್ ಮಾತನಾಡಿ, ಸಂಚಾರ ಪೊಲೀಸ್ ಸಿಬ್ಬಂದಿಯ ಸುರಕ್ಷತೆಯಲ್ಲಿ ಜಾಕೆಟ್ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಅನುಕೂಲವಾಗುತ್ತದೆ ಎಂದರು.
ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ನಿಸಾರ್ಅಹಮ್ಮದ್, ಸಿಬ್ಬಂದಿ ಹನುಮಂತರಾಜು, ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಮಾರ್ಗದರ್ಶಕ ಎಂ.ಟಿ.ನವೀನ್ ಕುಮಾರ್, ಉಪಾಧ್ಯಕ್ಷ ಬಿ.ಪಿ.ಕಿರಣ್ ಕುಮಾರ್, ಜಂಟಿ ಕಾರ್ಯದರ್ಶಿ ನಟರಾಜು , ಖಜಾಂಚಿ ಪ್ರಸನ್ನ ಕುಮಾರ್, ನಿರ್ದೇಶಕ ಕೃಷ್ಣಪ್ಪ, ಸುರೇಶ್,ಚೌಡಪ್ಪ, ಗೋವಿಂದರಾಜು, ಬಸವರಾಜು, ಬೂದಿಹಾಲ್ ಕಿಟ್ಟಿ, ಲಕ್ಷಣ್ ಮತ್ತಿತರರು ಇದ್ದರು.