ಭದ್ರತೆಗೆ ಗೃಹರಕ್ಷಕ ದಳದ ಸೇವೆ ಅಪಾರ Home Guard 
ರಾಜ್ಯ

ಭದ್ರತೆಗೆ ಗೃಹರಕ್ಷಕ ದಳದ ಸೇವೆ ಅಪಾರ Home Guard

ಪ್ರಮುಖ ಮುಖ್ಯಾಂಶಗಳು

  • ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ಹೆಳಿಕೆ
ಮಾಗಡಿ: ಪೊಲೀಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ಒಂದೇ ಎಂದು ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ಹೇಳಿದರು. Home Guard
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಜಿಲ್ಲಾ ಗೃಹ ರಕ್ಷಕ ದಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈನಲ್ಲಿ ಗೃಹ ರಕ್ಷಕದಳ ಪ್ರಾರಂಭವಾಗಿ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸಹಾಯಾರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಗೃಹರಕ್ಷಕ ದಳದವರ ಕರ್ತವ್ಯ ನಿಷ್ಠೆ, ಪ್ರಮಾಣಿಕತೆ, ಸಮಯ ಪ್ರಜ್ಞೆ ಹೆಚ್ಚಿದೆ. ರಾಜ್ಯದಲ್ಲಿ ಗಣೇಶೋತ್ಸವ ವೇಳೆ ಗೃಹರಕ್ಷಕದ ಸಿಬ್ಬಂದಿ ಇಲ್ಲದೆ ಪೊಲೀಸರು ಬಂದೋಬಸ್ತ್ ಕಷ್ಟಸಾಧ್ಯ. ಮೆರವಣಿಗೆಗಳ ಆರಂಭದಿಂದ ಗಲಾಟೆಗೆ ಅವಕಾಶ ಕಲ್ಪಿಸದೆ ಶಾಂತಿಯುತವಾಗಿ ಮುಕ್ತಾಯಗೊಳಿಸಿಸುವ ಗೃಹರಕ್ಷಕ ದಳದ ಕೊಡುಗೆ ಅಪಾರ ಎಂದರು.
ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಿರುವ ಕಾರಣ ಗೃಹ ರಕ್ಷಕ ಸಿಬ್ಬಂದಿ ಸೇವೆ ಅಗತ್ಯವಿದೆ. ಪ್ರವಾಹ, ಬಂದೋಬಸ್ತ್, ಈಗ ಬೆಳಗಾವಿಯಲ್ಲಿನ ಚಳಿಗಾಲದ ಅಧಿವೇಶನದಲ್ಲೂ ಗೃಹ ರಕ್ಷಕದಳದ ಕರ್ತವ್ಯ ಮುಖ್ಯ ಎಂದರು.
ಸರ್ಕಾರವು ಗೃಹ ರಕ್ಷಕ ದಳದ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಜತೆಗೆ ಅವರ ಸೇವೆ ಗುರುತಿಸಿ ಗೃಹ ರಕ್ಷಕರ ಹುದ್ದೆಯನ್ನು ಕಾಯಂಗೊಳಿಸಿ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಿ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲೂ ಗೃಹ ರಕ್ಷಕ ಸಹಕಾರಿ. ನಿರುದ್ಯೋಗ ಯುವಕ, ಯುವತಿಯರು ಗೃಹ ರಕ್ಷಕ ದಳಕ್ಕೆ ಸೇರುವಂತೆ ಪ್ರೇರೇಪಿಸಲು ಕರೆ ನೀಡಿದರು.
ಜಿಲ್ಲಾ ಸಮಾದೇಷ್ಟ ಎಲ್.ನಿರಂಜನ ಮಾತನಾಡಿ, ಪ್ರತಿ ವರ್ಷ ಅಖಿಲ ಭಾರತ ಗೃಹ ರಕ್ಷಕ ದಳ ದಿನ ಆಚರಿಸಲಾಗುತ್ತಿದ್ದು, ಜಿಲ್ಲಾ ಗೃಹರಕ್ಷಕ ದಳದವರು ಜಿಲ್ಲೆಗೆ ಮಾದರಿ. ಗುರುತರ ಆಪಾದನೆಗಳಿಲ್ಲದೆ ಉತ್ತಮವಾಗಿ ಸೇವೆ ಸಲ್ಲಿಸಿಕೊಂಡು ಬರಲಾಗಿದೆ. ತಾಪಂ, ಜಿಪಂ, ಗ್ರಾಪಂಗಳ ಚುನಾವಣೆ ಸಮೀಪಿಸುತ್ತಿದ್ದು, ಪ್ರತಿಯೊಬ್ಬರೂ ಸನ್ನದ್ಧರಾಗಬೇಕು. ಮಧ್ಯಪ್ರದೇಶ, ಆಂಧ್ರ, ತಮಿಳು ನಾಡು, ಮಹರಾಷ್ಟ್ರದಲ್ಲಿ ನಡೆಯುವ ಚುನಾವಣೆಗಳಿಗೆ ಜಿಲ್ಲೆಯಿಂದ ಗೃಹರಕ್ಷಕರು ಹೋಗುತ್ತಾರೆ. ಸಿಬ್ಬಂದಿ ಸಂಖ್ಯೆ 700ರಿಂದ 550ಕ್ಕೆ ಇಳಿದಿದ್ದು, ವಾರದೊಳಗೆ 100 ಮಂದಿ ಗೃಹರಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಗೃಹರಕ್ಷಕ ದಳದಳಲ್ಲಿ ಸೇವೆ ಸಲ್ಲಿಸಿ ಮೃತಮಟ್ಟವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮೌನಾಚರಿಸಿ, ಚಿನ್ನದ ಪದಕ ಪಡೆದ ಪಲ್ಲವಿ ಹಾಗೂ ನಿವೃತ್ತಗೊಂಡವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹನುಮಯ್ಯ, ಮಂಚಯ್ಯ, ಉಮಾದೇವಿ, ಧನಲಕ್ಷ್ಮೀ, ರಂಜಿತ್, ವಿಜಯ್ ಕುಮಾರ್, ನಾಗಣ್ಣ, ರೇಣುಕಯ್ಯ, ಎಲ್. ನಂಜಯ್ಯ, ಮಹದೇವಯ್ಯ ಇತರರು ಇದ್ದರು.