ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿ ಮಾತನಾಡಿದರು. ತಹಸೀಲ್ದಾರ ವಿಜಯಕುಮಾರ ಕಡಕೋಳ, ರಾಜು ಬೆಳವಣಿಕಿ, ಶಿವಲಿಂಗ ಉಳ್ಳಾಗಡ್ಡಿ ಇತರರಿದ್ದರು.
- ಶಾಸಕ ಸಿದ್ದು ಸವದಿ ಖಡಕ್ ಸೂಚನೆ
- ಪ್ರಜಾಸೇವೆ ಆಂದೋಲನ
ತೇರದಾಳ: ನಿಮ್ಮ ಹಂತದಲ್ಲಿನ ಸಮಸ್ಯೆಗಳಿಗಾದರು ಸ್ಪಂದಿಸುವ ಕೆಲಸಮಾಡಿ, ಕಾಟಾಚಾರಕ್ಕೆ ಕಾರ್ಯಕ್ರಮಗಳು ಬೇಡ ಎಂದು ಶಾಸಕ ಸಿದ್ದು ಸವದಿ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಚೆನ್ನಾಗಿದ್ದರೆ ಮಾತ್ರ ಎಲ್ಲರು ಚೆನ್ನಾಗಿ ಇರಲು ಸಾಧ್ಯ. ರೈತರನ್ನು ಅಲೆದಾಡಿಸದೆ ಅವರ ಕೆಲಸಗಳನ್ನು ಮಾಡಿಕೊಡುವ ಕೆಲಸ ಮಾಡಿ. ವಿನಾಕಾರಣ ಕಾಲಹರಣ ಮಾಡುವುದು ತೊಂದರೆ ನೀಡುವುದು ಮಾಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಿಯಾಗಿ ವಿದ್ಯುತ್ ನೀಡದ ಕಾರಣ ನೀರು ಉಣಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ. ಸಿಂಗಲ್ ಪೇಸ್ ಕೂಡ ನೀಡುತ್ತಿಲ್ಲ. ಗ್ರಾಮೀಣ ಜನರು ಬದುಕುವುದಾದರು ಹೇಗೆ. ನಮಗೇಕೆ ಇಷ್ಟೊಂದು ತಾರತಮ್ಯ. ನಮಗೆ ಮೊದಲು ಕರೆಂಟ್ ನೀಡಿ ಎಂದು ಗ್ರಾಮದ ಮುಖಂಡರಾದ ರಾಜು ಉಳ್ಳಾಗಡ್ಡಿ, ಹುಲೆಪ್ಪ ಹುಕ್ಕೇರಿ, ಲಕ್ಕಪ್ಪ ಪಾಟೀಲ, ಜಕ್ಕಪ್ಪ ಜಲಪುರ ಸೇರಿ ಹಲವರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇದಕ್ಕೆ ಶಾಸಕ ಸಿದ್ದು ಸವದಿ ರೈತರು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವೆ. ನೆರೆಯ ಜಿಲ್ಲೆಯಲ್ಲಿಯೇ ವಿದ್ಯುತ್ ಸಮಸ್ಯೆ ಇಲ್ಲ. ನಮ್ಮಲ್ಲಿ ಮಾತ್ರ ಏಕೆ ಇಂತಹ ತಾರತಮ್ಯ ಎಂದು ತರಾಟೆಗೆ ತೆಗೆದುಕೊಂಡು ಕೂಡಲೇ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸುವ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ತಹಸೀಲ್ದಾರ್ ವಿಜಯಕುಮಾರ ಕಡಕೋಳ, ರಾಜು ಬೆಳವಣಿಕಿ, ಶಿವಲಿಂಗ ಉಳ್ಳಾಗಡ್ಡಿ, ಬಸವರಾಜ ಮರಡಿ, ಮಲ್ಲಪ್ಪ ಮದಲಮಟ್ಟಿ, ಅಶೋಕ ಉಳ್ಳಾಗಡ್ಡಿ, ವಿಠ್ಠಲ ಕಾಂಬಳೆ, ಲಕ್ಷ್ಮಣ ಪಾಟೀಲ, ತಾ.ಪಂ. ಇಒ ಬಸವರಾಜ ಐನಾಪುರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ಬಿಇಒ ಎ.ಕೆ.ಬಸಣ್ಣವರ, ಸಿಪಿಐ ಆರ್.ಆರ್. ಪಾಟೀಲ, ಗ್ರಾಪಂ ಆಳಿತಾಧಿಕಾರಿ ಶ್ರೀಧರ ನಂದಿಹಾಳ, ತೇರದಾಳ ಪಿಎಸ್‌ಐ ಎಸ್.ಕೆ. ಸಿಂಗನ್ನವರ, ಮುಖ್ಯಾಧಿಕಾರಿ ರ್ಇಾನ್ ಝಾರೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ನೇಮಣ್ಣ ಸಾವಂತನವರ ಇದ್ದರು.