ಭಾಲ್ಕಿಯ ಬಿಡಿಎ ಹಾಲ್​ನಲ್ಲಿ ರೋಟರಿ ಕ್ಲಬ್​ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ಮತ್ತು ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಡಾ.ಶೈಲಜಾ ತಳವಾಡೆ, ಡಾ.ಆರ್​.ಎನ್​.ಜಾಧವ್​, ಜೈರಾಜ ಪಾತ್ರೆ ಇತರರಿದ್ದರು.  
ರಾಜ್ಯ

ಪತ್ರಕರ್ತರ ಸೇವೆ ಕೇವಲ ವೃತ್ತಿಗೆ ಸೀಮಿತವಲ್ಲ

ಪ್ರಮುಖ ಮುಖ್ಯಾಂಶಗಳು

  • ಡಾ.ಶೈಲಜಾ ತಳವಾಡೆ ಅಭಿಪ್ರಾಯ
  • ಭಾಲ್ಕಿಯಲ್ಲಿ ವೈದ್ಯ-ಪತ್ರಿಕಾ ದಿನಾಚರಣೆ
ಭಾಲ್ಕಿ: ಪತ್ರಕರ್ತರ ಸೇವೆ ಕೇವಲ ವೃತ್ತಿಗೆ ಸೀಮಿತವಾಗಿಲ್ಲ. ಸಮಾಜದಲ್ಲಿ ಆರೋಗ್ಯ, ಜಾಗೃತಿ, ಹೊಣೆಗಾರಿಕೆ ಮೂಡಿಸುವುದರೊಂದಿಗೆ ದೇಶ ಮುನ್ನಡಿಸುವ ಕೆಲಸ ಆಗಬೇಕಾಗಿದೆ ಎಂದು ರೋಟರಿ ಕ್ಲಬ್​ ತಾಲೂಕು ಅಧ್ಯಕ್ಷ ಡಾ.ಶೈಲಜಾ ತಳವಾಡೆ ಹೇಳಿದರು.
ನಗರದ ಬಿಡಿಎ ಹಾಲ್​ನಲ್ಲಿ ರೋಟರಿ ಕ್ಲಬ್​ ಆಫ್​ ಭಾಲ್ಕಿ ೋರ್ಟ್​, ಬಿಡಿಎ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯ ಮತ್ತು ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಕೆಲವು ಪತ್ರಕರ್ತರು, ವೈದ್ಯರು ಹಣದಾಸೆಗಾಗಿ ತಮ್ಮ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ತರುತ್ತಿರುವುದು ಯೋಗ್ಯವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ಮಕ್ಕಳತಜ್ಞ ಡಾ.ಆರ್​.ಎನ್​.ಜಾಧವ್​ ಮಾತನಾಡಿ, ಕಾಲ ಬದಲಾದಂತೆ ಪ್ರತಿಯೊಬ್ಬರ ವೃತ್ತಿ ಬದಲಾಗುವುದು ಸಹಜ. ಆದರೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವವರಿಗೆ ವಿಶ್ವದಾದ್ಯಂತ ಮನ್ನಣೆ ದೊರೆಯುತ್ತದೆ ಎಂದರು.
ಹಿರಿಯ ಪತ್ರಕರ್ತ ಸದಾನಂದ ಜೋಷಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜೈರಾಜ ಪಾತ್ರೆ ಇತರರಿದ್ದರು. ಡಾ.ಅನೀಲ ಸುಕಾಳೆ ಸ್ವಾಗತಿಸಿದರು. ನ್ಯಾಯವಾದಿ ಉಮಾಕಾಂತ ವಾರದ ನಿರೂಪಣೆ ಮಾಡಿದರು. ರೋಟರಿ ಕಾರ್ಯದರ್ಶಿ ಅಶೋಕ ರಾಜೋಳೆ ವಂದಿಸಿದರು. ಹಿರಿಯ ವೈದ್ಯರಾದ ಡಾ.ಸುಜಯ್ಯ ವೈಜಿನಾಥ ಡೊಣಗಾಪುರೆ, ಡಾ.ವಿದ್ಯಾಸಾಗರ ಕಾಡಾದಿ ದಂಪತಿ ಹಾಗೂ ತಾಲೂಕಿನ ಎಲ್ಲ ವೈದ್ಯರನ್ನು ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಯಿತು.