ರಾಜ್ಯ

ಜ್ಞಾನ ಪ್ರಸಾರದ ಸೇವೆ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ಪುಸ್ತಕ ಪ್ರಾಧಿಕಾರದ ಸದಸ್ಯ ನಿರಗುಡಿ ಹೇಳಿಕೆ
  • ಕಡೇಚೂರ ಕೃತಿ ವಿತರಣೆ ಅಭಿಯಾನಕ್ಕೆ ಚಾಲನೆ
ಕಲಬುರಗಿ: ಸ್ವಾತಂತ್ರ ಹೋರಾಟಗಾರ, ಸಾಹಿತಿ ಮಹಾದೇವಪ್ಪ ಕಡೇಚೂರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಹಿರಿಯರ ಚಿಂತನೆ ಹಾಗೂ ಸಂಸ್ಕಾರ ಪ್ರಸಾರ ಮಾಡುವ ಕಾರ್ಯ ಶ್ಲಾಘನೀಯ ಎಂದು ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್​.ನಿರಗುಡಿ ಹೇಳಿದರು.
ಸೇಡಂ ರಸ್ತೆಯಲ್ಲಿರುವ ಆರ್ಯ ಈಡಿಗ ಸಮಾಜದ ಕಾಮರಾಜ ನಾಡಾರ್​ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಬಾಲಮ್ಮ ಮಹಾದೇವಪ್ಪ ಕಡೇಚೂರ್​ ಟ್ರಸ್ಟ್​ನಿಂದ ಮಹಾದೇವಪ್ಪ ಕಡೇಚೂರ ಕೃತಿಗಳ ವಿತರಣೆ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ ಹೋರಾಟಗಾರ, ಸಮಾಜ ಸೇವಕರಾಗಿ ದುಡಿದ ಕಡೇಚೂರ ಅವರು ಉತ್ತಮ ಸಾಹಿತಿಗಳಾಗಿದ್ದು, ಅವರ ಕೃತಿಗಳು ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯ ಮತ್ತು ನೀತಿ ತತ್ವಗಳನ್ನು ಬೋಧಿಸುತ್ತವೆ ಎಂದರು.
ಟ್ರಸ್ಟಿನ ಸದಸ್ಯ ಡಾ.ಸದಾನಂದ ಪೆರ್ಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾಮರಾಜ್​ ನಾಡಾರ್​ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಯ್ಯ ಗುತ್ತೇದಾರ್​, ಮುಖ್ಯಗುರು ರೇಣುಕಾ ಅಶೋಕ ಸಂಕಲಾಪುರ, ಕಾಮಧೇನು ಮಹಿಳಾ ಸಂಘದ ಕಾರ್ಯದರ್ಶಿ ಜ್ಯೋತಿ ಗುತ್ತೇದಾರ್​, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಶ ಗುತ್ತೇದಾರ್​, ಪ್ರಮುಖರಾದ ಮಹೇಶ ಕಡೇಚೂರ, ದಿನೇಶ ಕಡೆಚೂರ, ಅಶೋಕ ಸಂಕಲಾಪುರ, ಮಲ್ಲಿಕಾರ್ಜುನ ಕುಕ್ಕುಂದಿ, ಡಾ.ವಿಜಯಕುಮಾರ ಪರೂತೆ, ರೇವಣಸಿದ್ದಪ್ಪ ದುಕಾನ, ಶಿವಕುಮಾರ ಇತರರಿದ್ದರು. ರೇವಣಸಿದ್ದಪ್ಪ ಆರ್ಯ ನಿರೂಪಣೆ ಮಾಡಿದರು. ಬಸವರಾಜ ಪಾಟೀಲ್​ ವಂದಿಸಿದರು.
"

ಪುಸ್ತಕ ಪ್ರಾಧಿಕಾರವು ಪಿಯು ಮತ್ತು ಡಿಗ್ರಿ ಕಾಲೇಜುಗಳಿಗೆ 25 ಸಾವಿರ ರೂ. ಮೌಲ್ಯದ ಗ್ರಂಥಗಳನ್ನು ಸದ್ಯ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ಈ ಯೋಜನೆ ವಿಸ್ತರಿಸಲು ಚಿಂತನೆ ಮಾಡಲಾಗುವುದು. ಈಗಾಗಲೇ ಈ ಭಾಗದ 30 ಪಿಯು ಮತ್ತು ಡಿಗ್ರಿ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡಲಾಗಿದೆ.

— > ಬಿ.ಎಚ್​.ನಿರಗುಡಿ, ಸದಸ್ಯ, ಕರ್ನಾಟಕ ಪುಸ್ತಕ ಪ್ರಾಧಿಕಾರ