ಚಿಂಚೋಳಿ ನ್ಯಾಯಲಯದಲ್ಲಿ ತಾಲೂಕು ವಕೀಲರ ಸಂಘದಿಂದ ನ್ಯಾಯಧೀಶ ದತ್ತುಕುಮಾರ ಜವಳ್ಕರ್​ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಬಾಲು, ಶಶಿಕಾಂತ ಆಡಕಿ, ಜಗನ್ನಾಥ ಅಗ್ನಿಹೋತ್ರಿ ಇತರರಿದ್ದರು. 
ರಾಜ್ಯ

ಚಿಂಚೋಳಿಯಲ್ಲಿನ ಸೇವೆ ಎಂದಿಗೂ ಮರೆಯಲ್ಲ

ಪ್ರಮುಖ ಮುಖ್ಯಾಂಶಗಳು

  • ಸಿವಿಲ್​ ನ್ಯಾಯಾಧೀಶ ದತ್ತುಕುಮಾರ ಜವಳ್ಕರ್​ ಅನಿಸಿಕೆ
  • ಬೀಳ್ಕೊಡುಗೆ ಸಮಾರಂಭ
ಚಿಂಚೋಳಿ: ಇಲ್ಲಿನ ನ್ಯಾಯಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ದತ್ತುಕುಮಾರ ಜವಳ್ಕರ್​ ಹೇಳಿದರು.
ನ್ಯಾಯಲಯದಲ್ಲಿ ತಾಲೂಕು ವಕೀಲರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು. ಬಡವರು, ದೀನ&ದಲಿತರು, ನಿರ್ಗತಿಕರು ಹಾಗೂ ಮಹಿಳೆಯರಿಗೆ ಕಾನೂನಿನಡಿ ಆತ್ಮಸ್ಥೆರ್ಯ ತುಂಬುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಸೇಡಂನ ಪ್ರಧಾನ ನ್ಯಾಯಾಧೀಶ ಬಾಲು, ತಾಲೂಕು ನ್ಯಾಯವಾದಿಗಳ ಸಂದ ಅಧ್ಯ ಶಶಿಕಾಂತ ಆಡಕಿ, ಹಿರಿಯ ನ್ಯಾಯವಾದಿಗಳಾದ ಜಗನ್ನಾಥ ಅಗ್ನಿಹೋತ್ರಿ, ಶ್ರೀಮಂತ ಕಟ್ಟಿಮನಿ, ಪ್ರಮುಖರಾದ ಸೋಮನಾಥ ರೆಡ್ಡಿ ಭಂಗ, ಚಂದ್ರಶೇಖರ, ಹನುಮಂತ ಹಿರೇಮನಿ, ವಿಶ್ವನಾಥ ಬೇನಕಿನ್​, ಸೂರ್ಯಕಾಂತ, ದೇವೇಂದ್ರ ಜಾಬಿನ್​, ಸುನೀಲ್​ ಸೊಲ್ಲಾಪುರ, ಶ್ರೀನಿವಾಸ ಬಂಡಿ, ಚಂದ್ರಶೆಟ್ಟಿ ಜಾಧವ್​, ವಿಜಯಕುಮಾರ ರಾಠೋಡ್​, ರಾಜೇಂದ್ರ ವರ್ಮಾ, ವಸಂತಕುಮಾರ ರಾಠೋಡ್​, ಸವಿತಾ, ಸುರೇಖಾ ಪಾಟೀಲ್​, ಸುದರ್ಶನ, ಸಂಪತಕುಮಾರ ಇತರರಿದ್ದರು.