The servant threw the old woman's chain on the pretext of asking for water.
ಮುಳಬಾಗಿಲು: ತಾಲೂಕಿನ ಆವಣಿ ಗ್ರಾಮದಲ್ಲಿ ಗುರುವಾರ ರಾತ್ರಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ಮಾಡಿದ ಖದೀಮ ವೃದ್ಧೆಯ ಕೊರಳಲ್ಲಿದ್ದ ಸರ ಹಾಗು ಓಲೆ ಕಸಿದು ಪರಾರಿಯಾಗಿದ್ದಾನೆ.
ಪಾಪಮ್ಮ(75) ಹಲ್ಲೆಗೊಳಗಾದವರು. ಮನೆ ಬಳಿಗೆ ಬಂದಿದ್ದ ಅನಾಮಿಕನೊಬ್ಬರ ವೃದ್ಧೆ ಬಳಿ ಕುಡಿಯಲು ನೀರು ಕೇಳುವ ನೆಪದಲ್ಲಿ ಒಳಗೆ ಪ್ರವೇಶಿಸಿ ನಂತರ, ವೃದ್ಧೆಯನ್ನು ಕೆಳಕ್ಕೆ ಬೀಳಿಸಿ ಹಲ್ಲೆ ಮಾಡಿ ಓಲೆಗಳು ಹಾಗು ಸರ ಕಿತ್ತು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.