ಚಿತ್ತಾಪುರದ ಸಹ್ಯಾದ್ರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮವನ್ನು ದೇವಿಂದ್ರಪ್ಪ ಇಮಡಾಪುರ ಉದ್ಘಾಟಿಸಿದರು. ಬಸವರಾಜ ಶಿಣ್ಣೂರ, ಮರಲಿಂಗ ಯಾದಗಿರ, ಶರಣಪ್ಪ ಹಾಚೆಟ್ಟಿ ಇತರರಿದ್ದರು.
- ಮರಲಿಂಗ ಯಾದಗಿರ ಅಭಿಮತ
- ಚಿತ್ತಾಪುರದಲ್ಲಿ ಕನಕ ದರ್ಶನ ಉಪನ್ಯಾಸ
ಚಿತ್ತಾಪುರ: ಜಾತಿಪದ್ಧತಿ, ಮೌಡ್ಯ ಮತ್ತು ಅಸಮಾನತೆ ವಿರೋಧಿಸಿ ಸಮಾನತೆ ಸಂದೇಶ ಸಾರಿದ ಹಾಗೂ ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಂತ ಕನಕದಾಸರು ಎಂದು ಉಪನ್ಯಾಸಕ ಮರಲಿಂಗ ಯಾದಗಿರ ಹೇಳಿದರು.
ಸಹ್ಯಾದ್ರಿ ಪದವಿಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ನಿಂದ ಗುರುವಾರ ಹಮ್ಮಿಕೊಂಡಿದ್ದ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರಮಜೀವಿಗಳ ಬದುಕಿಗೆ ಮತ್ತು ದೀನ ದಲಿತರ ಸಂಸತಿಗೆ ಮನ್ನಣೆ ನೀಡುವುದರ ಮೂಲಕ ಸಾಮಾಜಿಕ ಸಂದೇಶ ಸಾರಿದ ಶ್ರೇಷ್ಠ ಸಂತ ಕನಕದಾಸರು ಎಂದರು.
ಮುಖ್ಯಗುರು ದೇವಿಂದ್ರಪ್ಪ ಇಮಡಾಪುರ ಉದ್ಘಾಟಿಸಿ ಮಾತನಾಡಿ, ಜಾತಿಯಿಂದ ಯಾರು ದೊಡ್ಡವರಲ್ಲ. ನೀತಿಯಿಂದ ದೊಡ್ಡವರು ಎಂದು ಕನಕದಾಸರು ಹೇಳಿದ್ದಾರೆ. ಅವರ ವೈಚಾರಿಕತೆ ಚಿಂತನೆಗಳು ಯುವಕರು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಚಾರ್ಯ ಶರಣಪ್ಪ ಹಾಚೆಟ್ಟಿ ಅಧ್ಯತೆವಹಿಸಿದ್ದರು. ಕಲಾನಿಕೇತನ ಟ್ರಸ್ಟ್ ಅಧ್ಯ ಬಸವರಾಜ ಶಿಣ್ಣೂರ, ಯುವ ಸಾಹಿತಿ ರಂಗನಾಥ ದೊರೆ ಇತರರಿದ್ದರು. ಚೈತ್ರ ಮತ್ತು ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು. ಸರಸ್ವತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಮದನಕರ್ ನಿರೂಪಣೆ ಮಾಡಿ, ವಂದಿಸಿದರು.