ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಮಾಜ ಸೇವಕಿ ಮಂಗಲಾ ಲಾತೂರೆ ಉದ್ಘಾಟಿಸಿದರು. ಶ್ರೀ ಡಾ. ಚನ್ನವಿರ ಶಿವಾಚಾರ್ಯರು, ಡಾ.ಎಸ್​.ಎಂ.ಮಠಪತಿ, ಐ.ಜಿ.ಮಠಪತಿ, ನಾಗೇಶ ಮಹಾಜನ, ಪ್ರಭಾವತಿ ಲಾತೂರೆ, ನಾಗಣ್ಣ ಲಾತೂರೆ ಇತರರಿದ್ದರು. 
ರಾಜ್ಯ

ರಾಷ್ಟ್ರ ನಾಯಕರ ತ್ಯಾಗ ಮರೆಯುವಂತಿಲ್ಲ

ಬಸವಕಲ್ಯಾಣ: ಭಾರತವೆಂದರೆ ಕೇವಲ ಭೂಪ್ರದೇಶವಲ್ಲ, ಜಗತ್ತಿಗೆ ದಿವ್ಯ ಪ್ರಕಾಶ ನೀಡುತ್ತಿರುವ ಸ್ವರ್ಣ ಭೂಮಿ. ಇಂತಹ ಪವಿತ್ರ ಭೂಮಿ ಭಾರತದಲ್ಲಿಂದು ನಾವು ಸ್ವಾಭಿಮಾನದಿಂದ ಉಸಿರಾಡುತ್ತಿದ್ದೇವೆ ಎಂದರೆ ಅದು ನಮ್ಮ ರಾಷ್ಟ್ರ ನಾಯಕರ ತ್ಯಾಗ ಮತ್ತು ಬಲಿದಾನದಿಂದ ಎಂಬುದು ಯಾವತ್ತೂ ಮರೆಯುವಂತಿಲ್ಲ ಎಂದು ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠ ಸಂಚಾಲಿತ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರ ಭಕ್ತಿ ಎಂಬುದು ಪ್ರತಿ ಭಾರತೀಯನ ನಾಡಿಮಿಡಿತವಾಗಿದ್ದು, ದೀರ್ಘ ಹೋರಾಟದಿಂದ ಪಡೆದ ಸ್ವಾತಂತ್ರ್ಯ ಉಳಿಸಿ ಬೆಳೆಸಿಕೊಂಡು ಹೋಗುವುದು ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದರು.
ಡಾ.ಎಸ್​.ಎಂ ಮಠಪತಿ ಮಾತನಾಡಿದರು. ಐ.ಜಿ. ಮಠಪತಿ, ಮಂಗಳ ಎಸ್​. ಲಾತೂರೆ, ನಾಗೇಶ ಮಹಾಜನ, ಪ್ರಭಾವತಿ ಲಾತೂರೆ, ವಿಜಯಕುಮಾರ ಸಂಗೋಳಗಿ, ಪಂಡಿತರಾವ ದೇಗಾಂವ, ಸತೀಶ ಲಾತೂರೆ, ಕಾಶಪ್ಪ ದೇಗಾಂವ, ಮಲ್ಲಯ್ಯ ಮಠಪತಿ, ನಾಗಮ್ಮ ಎಸ್​.ಮಠಪತಿ ಇತರರಿದ್ದರು. ರಶ್ಮಿ ಪವಾಡಶೆಟ್ಟಿ ಸ್ವಾಗತಿಸಿ ನಿರೂಪಣೆ ಮಾಡಿದರು. ಪರಮೇಶ್ವರ ಹೊಳಕುಂದಿ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ಮಕ್ಕಳು ದೇಶಭಕ್ತಿಯ ಭಾಷಣ, ನಾಟಕ ಮತ್ತು ನೃತ್ಯ ಪ್ರದರ್ಶನ ಮಾಡಿದರು.