ಕೊರಟಗೆರೆಯ ಚಾಣಕ್ಯ Introduction Program ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಹಾಗೂ ಪರಿಚಯ ಕಾರ್ಯಕ್ರಮವನ್ನು ತುರುವೇಕೆರೆ ರಾಷ್ಟ್ರೀಯ ಸಂರಕ್ಷಣಾ ಪರಿಷತ್ನ ನಿರ್ದೇಶಕ ಟಿ.ರಾಮಚಂದ್ರ ಉದ್ಘಾಟಿಸಿದರು. ಚಾಣಕ್ಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ನರಸಿಂಹಲು ಬಾಬು ಇದ್ದರು.
ಕೊರಟಗೆರೆ: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ್ದಾರೆ. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದ್ದು, ಅದರ ಮಹತ್ವವನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಎಂದು ತುರುವೇಕೆರೆ ರಾಷ್ಟ್ರೀಯ ಸಂರಕ್ಷಣಾ ಪರಿಷತ್ನ ನಿರ್ದೇಶಕ ಟಿ.ರಾಮಚಂದ್ರ ಹೇಳಿದರು.
ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಸಂರಕ್ಷಣಾ ಪರಿಷತ್ನಿಂದ ಆಯೋಜಿಸಿದ್ದ ಸ್ವಾತಂತ್ರ$್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಮತ್ತು ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ವಿರುದ್ಧ ಜನಾಂದೋಲನ ರೂಪಿಸಿದರು. ಸುಭಾಷ್ ಚಂದ್ರ ಬೋಸ್ ಅವರು ಆಜಾದ್ ಹಿಂದ್ ಫೌಜ್ ಕಟ್ಟಿಕೊಂಡು ಸಶಸ್ತ್ರ ಹೋರಾಟಕ್ಕೆ ಮುನ್ನಡೆ ನೀಡಿದರು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು ಎಂದರು. Introduction Program
ಸ್ವಾತಂತ್ರ$್ಯ ಹೋರಾಟಗಾರರ ಜೀವನ, ಹೋರಾಟ ಮತ್ತು ದೇಶಪ್ರೇಮದ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನಮ್ಮ ನಾಡು ಮತ್ತು ದೇಶದ ಇತಿಹಾಸ ಅರಿತುಕೊಳ್ಳುವುದರಿಂದ ದೇಶದ ಬಗ್ಗೆ ಹೆಮ್ಮೆ ಹಾಗೂ ಜವಾಬ್ದಾರಿಯ ಭಾವನೆ ಮೂಡುತ್ತದೆ. ಸ್ವಾತಂತ್ರ$್ಯವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೇಶದ ಅಭಿವೃದ್ಧಿ ಮತ್ತು ಏಕತೆಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಭಾವಚಿತ್ರ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಸ್ವಾತಂತ್ರ$್ಯ ಹೋರಾಟಗಾರರ ಜೀವನ ಮತ್ತು ಕೊಡುಗೆಗಳ ಪರಿಚಯ ಮಾಡಿಕೊಡಲಾಯಿತು. ಪದಾಧಿಕಾರಿಗಳಾದ ಸಿ.ಎಸ್. ಹನುಮಂತರಾಜು, ಆರ್.ಪಿ.ರವಿಶಂಕರ್, ಮುಖ್ಯ ಶಿಕ್ಷಕಿ ಭಾಗ್ಯ ಇದ್ದರು.