ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಯುಗಾದಿ ಮಹೋತ್ಸವದ ನಿಮಿತ್ಯ ಜಗದ್ಗುರು ಸಾರಂಗಧರ ರಾಷ್ಟ್ರೀಯ ಸೇವಾಪೀಠದಲ್ಲಿ ಆಯೋಜಿಸಿದ್ದ ಶಿವ ದರ್ಶನ ಪ್ರವಚನದಲ್ಲಿ ‌ನಿಡುಮಾನಿಡಿ ಶ್ರೀಗಳು ಮಾತನಾಡಿದರು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಖೇಮಜಿ, ಲಚ್ಚಪ್ಪ ಜಮಾದಾರ ಇತರರಿದ್ದರು. 
ರಾಜ್ಯ

ಶಿವಶಕ್ತಿ ಪೀಠಗಳ ಪ್ರಭಾವ ತಗ್ಗಿಸುವ ಆಳುವ ವ್ಯಕ್ತಿಗಳ ಹುನ್ನಾರ : ಎಚ್ಚೆತ್ತುಕೊಳ್ಳಲು ಭಕ್ತರಿಗೆ ನಿಡುಮಾಡಿ ಶ್ರೀ‌ಗಳ ಕರೆ

ಪ್ರಮುಖ ಮುಖ್ಯಾಂಶಗಳು

  • ತಿರುಮಲದಲ್ಲಿ ಮೊದಲು ವೀರಭದ್ರೇಶ್ವರನಿದ್ದ ಅದನ್ನೀಗ ವೆಂಕಟೇಶ್ವರನ್ನಾಗಿಸಿದ್ದಾರೆ
ಶ್ರೀಶೈಲ (ಕಲಬುರಗಿ) : ಇಂದಿ‌ನ ಆಳುವ ರಾಜಕರಾಣದ ಸಾಂಸ್ಕೃತಿಕ ವರ್ಗದಿಂದ ವ್ಯವಸ್ಥಿತವಾಗಿ ಶಿವಶಕ್ತಿ ಪೀಠಗಳ ಪ್ರಭಾವವನ್ನು ತಗ್ಗಿಸುವ ವ್ಯವಸ್ಥಿತ ಹುನ್ನಾರ ನಡೆದಿದ್ದು ಶಿವ ಭಕ್ತರು ಎಚ್ಚರವಾಗಬೇಕು ಎಂದು ನಿಡುಮಾಮಿಡಿ ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಯುಗಾದಿ ಮಹೋತ್ಸವದ ನಿಮಿತ್ಯ ಜಗದ್ಗುರು ಸಾರಂಗಧರ ರಾಷ್ಟ್ರೀಯ ಸೇವಾಪೀಠದಲ್ಲಿ ಆಯೋಜಿಸಿದ್ದ ಶಿವ ದರ್ಶನ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿ ಶ್ರೀಶೈಲದ ಮುಂದುವರೆದ ಪರ್ವತ ಶ್ರೇಣಿಯಲ್ಲಿರುವ ತಿರುಮಲದಲ್ಲಿ ಮೊದಲು ವೀರಭದ್ರನಿದ್ದ ಆದರೆ ಅವನನ್ನು ತೆಗೆದು ವೆಂಕಟೇಶ್ವರನನ್ನಾಗಿಸಿದ್ದಾರೆ. ಎಂದರು.
ಶ್ರೀಶೈಲಕ್ಕೆ ವಾಹನಗಳು ಹಾದುಹೋಗಲು ಸಾಧ್ಯವಿರುತ್ತಿರಲಿಲ್ಲ, ಆದರೆ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಿಂದ ಕರ್ನಾಟಕದ ಜನರು ಬರಲು ಸಾಧ್ಯವಾಗಿದೆ. ಕ್ಷೇತ್ರದ ಪಕ್ಕದಲ್ಲಿ ದೊಡ್ಡ ಆಣೆಕಟ್ಟಿದ್ದರೂ ನೀರಿನ ಕೊರತೆಯಿದೆ, ಜೊತೆಗೆ ವಿದ್ಯುತ್ ಕೊರತೆಯಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಇದರಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಪರಂಪರೆಯು ದೇವನೊಬ್ಬ ನಾಮ ಹಲವು ತತ್ವದಡಿಯಲ್ಲಿದೆ. ಶಿವಕ್ಷೇತ್ರಗಳ ಬೆಳವಣಿಗೆಗೆ ಆಡಳಿತ ನಡೆಸುವವರು ಏಕಮೇವ ದೈವವಾಗಿ ನೋಡದೆ ಸಮಾನವವಾಗಿ ನೋಡಬೇಕು. ನಮ್ಮ ಧರ್ಮ ಹಾಗೂ ದೈವದ ರಕ್ಷಣೆಗಾಗಿ ಪ್ರಾರಂಭವಾದ ಪಾದಯಾತ್ರೆಯಿಂದು ದೈವದ ಪ್ರತೀಕವಾಗಿ ತಿಂಗಳಿಂದ ನಡೆದು ಬರುತ್ತಿದೆ. ಪಾದಯಾತ್ರೆ ಬರುವ ಭಕ್ತರಿಗೆ ಮಾರ್ಗಮಧ್ಯೆ ಸರಕಾರಗಳು ಮೂಲಸೌಕರ್ಯಗಳನ್ನು ಒದಗಿಸಬೇಕು. ಮಠಗಳಿಗೆ ಸರಕಾರದ ಸಹಾಯ ಹಸ್ತವಾದರೆ ತಿರುಪತಿಗಿಂತ ಮುಂದೆ ಹೋಗುತ್ತದೆ. ಶ್ರೀಶೈಲ ಕ್ಷೇತ್ರದ ಪರಂಪರೆಗೆ ಮತ್ತೊಂದು ಸರಿಸಾಟಿ ಮತ್ತೊಂದಿಲ್ಲ ಎಂದು ಹೇಳಿದರು.
ಜಗದ್ಗುರು ಡಾ.ಸಾರಂಗಧರ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿ ವೀರಶೈವ ಲಿಂಗಾಯತ ಮಠಗಳು ತ್ರಿವಿಧ ದಾಸೋಹದ ಮೂಲಕ ಸಮಾಜದಲ್ಲಿ ಅಕ್ಷರ ಕ್ರಾಂತಿಯನ್ನು ಮಾಡಿ ಅನೇಕ ಬಡ ಮಕ್ಕಳ ಬಾಳನ್ನು ಬೆಳಗಿಸಿವೆ. ಶಿವ ಸಂಸ್ಕೃತಿಯಿಂದ ಪ್ರಾಚೀನ ಪರಂಪರೆಗಳು ವಿಕಸನವಾಗಿವೆ. ಶ್ರೀಶೈಲ ಕ್ಷೇತ್ರವು ಎಲ್ಲ ಧರ್ಮ, ಶರಣರು, ಸಂತರಿಗೆ ಆಶ್ರಯತಾಣವಾಗಿ, ಐಕ್ಯಸ್ಥಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭಿನವ ಬಸವಲಿಂಗ ಮಹಾಸ್ವಾಮಿಗಳು, ಸಿದ್ಧಲಿಂಗ ಮಹಾಸ್ವಾಮಿಗಳು, ಲಚ್ಚಪ್ಪ ಜಮಾದಾರ, ಸುನಂದಮ್ಮ ಮಠಪತಿ, ಕೆ.ಗಂಗಾಧರಯ್ಯ, ಮಲ್ಲಿಕಾರ್ಜುನ ಖೇಮಜಿ, ರಾಜೇಶ್ವರಿ‌ ಇತರರಿದ್ದರು.