ಬಾಗಲಕೋಟೆ ನಗರದಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಎಲೆಕ್ಟಿçಕ್ ಬೈಕ್‌ಗೆ ಮೇಲು ಹೊದಿಕೆ ಅಳವಡಿಸಿರುವುದು. ಬಿಕೆಟಿ-೨೯-೧೧-ಎ: ಸಂಜೆಯಾದರೂ ಕಡಿಮೆಯಾಗದ ಸೆಕೆಯಿಂದ ಸುಸ್ತಾಗುತ್ತಿರುವ ಜನರು, ರಾತ್ರಿಯೂ ಸಹ ತಂಪು ಪಾನೀಯ ಕುಡಿದು ದಾಹ ತಣಿಸಿಕೊಳ್ಳುತ್ತಿರುವುದು. =================== * ರಾಷ್ಟಿçÃಯ ಲಸಿಕಾ ಸಪ್ತಾಹ ೨೦೨೬ ಆಚರಣೆ * ಡಾ.ದಿಲೀಪ ನಾಟೇಕರ ಅಭಿಮತ.... ಲಸಿಕೆಗಳು ಆರೋಗ್ಯ ರಕ್ಷಿಸುವ ಪರಿಣಾಮಕಾರಿ ವಿಧಾನ ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ: ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಲಸಿಕೆಗಳು ನಮ್ಮ ಆರೋಗ್ಯ ರಕ್ಷಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ಪ್ರಾಚಾರ್ಯ ಡಾ.ದಿಲೀಪ್ ನಾಟೇಕರ ಅಭಿಪ್ರಾಯಪಟ್ಟರು. ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಕಾಲೇಜಿನ ಚಿಕ್ಕ ಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಗುರುವಾರ `ರಾಷ್ಟಿçÃಯ ಲಸಿಕಾ ಸಪ್ತಾಹ ೨೦೨೬' ಈ ಕಾರ್ಯಕ್ರಮವನ್ನು `ಪ್ರತಿ ತಲೆಮಾರಿಗೆ ಲಸಿಕೆಗಳು ಫಲಕಾರಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಎಚ್‌ಎಸ್‌ಕೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಸಿಕೆಗಳು ಮಕ್ಕಳು ಹಾಗೂ ದೊಡ್ಡವರನ್ನು ಹಲವಾರು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಲಸಿಕೆಗಳು ನಮ್ಮ ಸಮಾಜವನ್ನು ಸುರಕ್ಷಿತವಾಗಿ ಇಡುತ್ತವೆ. ನಾವು ಲಸಿಕೆ ಪಡೆದರೆ ನಾವು ಮಾತ್ರವಲ್ಲ ನಮ್ಮ ಸುತ್ತಮುತ್ತಲಿನವರನ್ನು ಸಹ ರಕ್ಷಿಸುತ್ತೇವೆ. ನಮ್ಮ ದೇಶದಲ್ಲಿ ಸರ್ಕಾರ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದೆಯಾದರೂ ಕೆಲವರು ಅರಿವಿನ ಕೊರತೆಯಿಂದ ಅಥವಾ ಭಯದಿಂದ ಲಸಿಕೆ ಪಡೆಯುವುದನ್ನು ತಪ್ಪಿಸುತ್ತಾರೆ. ಇದು ಅಪಾಯಕಾರಿ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಕೊಡಿಸಬೇಕು ಎಂದು ತಿಳಿಸಿದರು. ಎಚ್.ಎಸ್.ಕೆ. ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ದಡ್ಡಿ ಮಾತನಾಡಿ, ಲಸಿಕೆಗಳು ಅಪಾಯಕಾರಿ ರೋಗಗಳಿಂದ ರಕ್ಷಿಸುವ ಅತ್ಯಂತ ಮುಖ್ಯ ವಿಧಾನವಾಗಿದೆ. ಆದರೆ, ಲಸಿಕೆ ಕೊಡುವುದಷ್ಟೇ ಸಾಕಾಗುವುದಿಲ್ಲ,  
ರಾಜ್ಯ

ಬಿಸಿಲಿಗೆ ಕಾದು ಕೆಂಡವಾದ ಬಾಗಿಲು`ಕೋಟೆ' !

ಅಶೋಕ ಶೆಟ್ಟರ, ಬಾಗಲಕೋಟೆ:
ಶಿವ ಶಿವ ಎನ್ನುವ ಶಿವರಾತ್ರಿ ಬಿಸಿಲು ಮುಗಿಯಿತು. ಬಾಯಿ ಬಡಿದುಕೊಳ್ಳುವಷ್ಟು ಹೋಳಿ ಬಿಸಿಲಿನ ಅಬ್ಬರವೂ ಆಯಿತು. ಇನ್ನೇನು ಪೂರ್ವ ಮುಂಗಾರು ಅಬ್ಬರಿಸಿ, ಕಾದು ಕಬ್ಬಿಣದಂತಾಗಿರುವ ಭೂಮಿ ತಂಪಾಗಿ ಜನರ ಬೆವರಿನ ಸ್ನಾನ ಕಡಿಮೆ ಆಗುತ್ತದೆ ಎನ್ನುವುದು ಈವರೆಗೂ ಹುಸಿಯಾಗಿ ದಿನೇ ದಿನೇ ಬಿಸಿಲಿನ ತಾಪ ಏರಿಕೆ ಆಗುತ್ತಲೇ ಇದೆ...!!
ವಾತಾವರಣದಲ್ಲಿ ತಾಪಮಾನ ೪೧ ಡಿಗ್ರಿ ಸೆಲ್ಸಿಯಸ್‌ಗೆ ಬರುತ್ತಿದ್ದಂತೆ ಮಳೆ ಅಬ್ಬರಿಸುತ್ತದೆ ಎನ್ನುವ ಹವಾಮಾನ ತಜ್ಞರು ಅಭಿಮತದಂತೆ ಜಿಲ್ಲೆಯಲ್ಲಿ ಆ ಮಟ್ಟ ಬಂದು ಹೋಗಿದ್ದಾಗಿದೆ. ಆದರೆ, ಅದೇಕೋ ಏನೋ ಕೆಲವಡೆ ಮಳೆಯ ದರ್ಶನವಾಗಿದ್ದರೂ ನಗರದಲ್ಲಿ ಮಾತ್ರ ಈ ವರೆಗೂ ಭೂಮಿ ತಂಪಾಗುವಷ್ಟು ಮಳೆ ಅಬ್ಬರ ಆಗಿಲ್ಲ. ಹೀಗಾಗಿ ಸೂರ್ಯನ ಉಗ್ರರೂಪ ಹೆಚ್ಚುತ್ತಿದ್ದು, ಜನರು ಹೈರಾಣಾಗಿ ಹೋಗಿದ್ದಾರೆ. ಹಗಲು ರಾತ್ರಿ ಸೆಕೆ, ತೀರದ ದಾಹ, ಊಟ ಮಾಡಲು ಬೇಸರ. ಬರೀ ತಂಪು ಪಾನೀಯ ಕುಡಿಯಬೇಕು ಎನ್ನಿಸುತ್ತದೆ. ಜನರು ಮನೆಯಿಂದ ಆಚೆ ಬರಲು ಭಯ ಪಡುವಷ್ಟರ ಮಟ್ಟಿಗೆ ಬಿಸಿಲು ಆರ್ಭಟಿಸುತ್ತಿದೆ.
ಬಿಸಿಲಿನ ಅಬ್ಬರ ಕಡಿಮೆ ಆಗದ್ದರಿಂದ ಜನರಿಗಾಗಿ ವಿವಿಧೆಡೆ ಸಂಘ-ಸAಸ್ಥೆಗಳು ಅರವಟಿಗೆಗಳ ಮೂಲಕ ನೀರಿನ ವ್ಯವಸ್ಥೆ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಆದರೂ ನಡೆದುಕೊಂಡು ಹೋಗುವುದು ಬಿಡಿ, ಬೈಕ್‌ಗಳಲ್ಲೂ ಸಂಚರಿಸಿದರೂ ಕಾದು ಕಬ್ಬಿಣದಂತಾಗಿರುವ ರಸ್ತೆಯ ಕಾವು ಮುಖಕ್ಕೆ ರಾಚುತ್ತದೆ. ಸ್ವಲ್ಪ ಹೊತ್ತಲ್ಲೇ ಸಾಕಪ್ಪ ಸಾಕು ಸಂಚಾರ ಎನ್ನುವಂತಾಗುತ್ತಿದೆ. ಇನ್ನು ಪಾದಚಾರಿಗಳ ಪಾಡು ದೇವರಿಗೆ ಪ್ರೀತಿ.
ಇದೀಗ ಬಿಸಿಲಿನ ರಕ್ಷಣೆಗಾಗಿ ಕೆಲ ಎಲೆಕ್ಟಿçಕ್ ಬೈಕ್ ಸವಾರರು ಸಾವಿರಾರು ರೂ. ಖರ್ಚು ಮಾಡಿ ಬೈಕ್‌ಗೆ ಮೇಲ್ಪರದೆ ಅಳವಡಿಸಿ ನೆತ್ತಿ ಸುಡುವ ಬಿಸಿಲಿನಿಂದ ಬಚಾವಾಗಲು ಉಪಾಯ ಕಂಡು ಕೊಂಡಿದ್ದಾರೆ. ಓಪನ್ -ೆÃಸ್ ಇರುವ ಸುತ್ತಲೂ ಕವರ್ ಇರದೇ ಗಾಳಿ ಓಡಾಡುವ ಮೇಲುಗಡೆ ಹೊದಿಕೆ ಇರುವ ಎಲೆಕ್ಟಿçಕ್ ಬೈಕ್‌ಗಳ ಮೇಲೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕೆಲ ಎಲೆಕ್ಟಿçಕ್ ಬೈಕ್ ಮಾಲೀಕರು ವೈಯಕ್ತಿಕವಾಗಿ ಸ್ಕೂರ‍್ಸ್ ಗಳನ್ನು ಬಳಸುತ್ತಿದ್ದರೆ ಕೆಲವರು ಬಾಡಿಗೆಗಾಗಿ ಮೇಲು ಹೊದಿಕೆಯನ್ನು ಅಳವಡಿಸಿಕೊಂಡು ಮಾರ್ಪಡಿಸಿದ್ದಾರೆ.
ರಸ್ತೆ ಬದಿ ನಿಲ್ಲಲು ನೆರಳಿನ ಕೊರತೆ
ನೆರಳಿಗೆ ಮೊರೆ ಹೋಗಬೇಕೆಂದರೆ ಪ್ರಮುಖ ರಸ್ತೆಗಳಲ್ಲಿ ಗಿಡ-ಮರಗಳು ಅಪರೂಪ. ರಸ್ತೆ ಅಗಲೀಕರಣಕ್ಕಾಗಿ ಅನೇಕ ಗಿಡ-ಮರಗಳನ್ನು ಕಡಿದು ಹಾಕಲಾಗಿದೆ. ಹೀಗಾಗಿ ರಣರಣ ಬಿಸಿಲಿಗೆ ಜನರು ಬಳಲಿ ಬೆಂಡಾಗುತ್ತಿದ್ದಾರೆ.
ತಂಪು ಪಾನೀಯಕ್ಕೆ ಮೊರೆ :
ಬಿಸಿಲಿನ ಬೇಗೆ ಹೆಚ್ಚಿದೆ. ಇದರಿಂದ ಹೊರಬರಲು ಜನರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆಯೂ ದುಭಾರಿ ಆಗಿವೆ. ೧೫ ರೂ. ಒಂದು ಗ್ಲಾಸ್ ಜ್ಯೂಸ್ ಕೊಡುತ್ತಿದ್ದವರು ಇದೀಗ ಅದನ್ನು ೨೦ ರೂ.ಗೆ ಏರಿಕೆ ಮಾಡಿದ್ದಾರೆ. ಹಾಗೆಯೇ ಸ್ಪೇಷಲ್ ಜ್ಯೂಸ್ ೩೦ ರಿಂದ ೪೦ ರೂ. ಹೆಚ್ಚಳವಾಗಿದೆ. ಎಳನೀರು ಸಹ ೫೦ ರೂ. ತಲುಪಿಯಾಗಿದೆ. ಹಣ್ಣುಗಳ ಬೆಲೆ ಗಗನಮುಖಿ ಆಗಿದೆ. ಬಿಸಿಲಿನ ದಾಹ ತಣಿಸಿಕೊಳ್ಳಲು ಜೇಬಿಗೂ ಕತ್ತರಿ ಬೀಳುತ್ತಿದೆ. ಅದೇ ಹೋಟೆಲ್, ಬೀದಿ ಬದಿ ಗೂಡಂಗಡಿಗಳಿಗೆ ವಹಿವಾಟು ಕುಸಿದಿದೆ. ಬಿಸಿಲಿಗೆ ಜನರು ಊಟ, ತಿಂಡಿಗೆ ಬರುವುದು ಕಡಿಮೆ ಆಗಿದೆ. ಬಂದರೂ ಅಲ್ಲೂ ಸಹ ಹೆಚ್ಚಾಗಿ ಮೊಸರು ಅವಲಕ್ಕಿ, ಮೊಸರು ವಡಾ, ಮಜ್ಜಿಗೆ ಕೇಳುತ್ತಾರೆ. ಪಾನೀಯ ಕುಡಿದರೂ ಸ್ವಲ್ಪ ಹೊತ್ತು ಆರಾಮ ಅನ್ನಿಸಿದರೂ ಮತ್ತೆ ಅದೇ ದಾಹ, ಸಂಕಟ ಸಂಕಟ ಆಗುತ್ತದೆ ಎಂದು ಜನರು ಹೇಳುತ್ತಾರೆ. ಗ್ರಾಮೀಣ ಪ್ರದೇಶದಿಂದ ವಿವಿಧ ಕಾರ್ಯಗಳಿಗೆ ಬರುತ್ತಿದ್ದ ಜನರ ಸಂಖ್ಯೆಯೂ ಕಡಿಮೆ ಆಗಿದೆ. ಬಿಸಿಲಿಗೆ ಜನರು ಬೆಚ್ಚಿಬಿದ್ದಿದ್ದಾರೆ. ವ್ಯಾಪಾರ ಬಹಳ ಕುಸಿತ ಕಂಡಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಹೇಳುತ್ತಾರೆ.