ಹುಲಸೂರಿನ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಓಂಕಾರ ವಾಂಜರಖೇಡೆ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ತಹಸೀಲ್ದಾರ್​ ಶಿವಾನಂದ ಮೇತ್ರೆ, ಬಿಇಒ ಸಿದ್ದವಿರಯ್ಯ ರುದನೂರು, ನಾಗರಾಜ ಹಾವಣ್ಣ, ಲತಾ ಹಾರಕೂಡೆ, ಸುಧೀರ ಕಾಡಾದಿ, ಪುಷ್ಪಾ ಪಾಟೀಲ್​, ಶಾಂತಮ್ಮ ಇತರರಿದ್ದರು. 
ರಾಜ್ಯ

ದೇಶದ ರಕ್ಷಣೆಗೆ ಸೈನಿಕ, ಕೃಷಿಕ, ಶಿಕ್ಷಕರ ಪಾತ್ರ ಮಹತ್ವದ್ದು

ಹುಲಸೂರು: ದೇಶ ಮುನ್ನಡೆಯಬೇಕಾದರೆ ಸೈನಿಕ, ಕೃಷಿಕ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಶಿಕ್ಷಕ ಓಂಕಾರ ವಾಂಜರಖೇಡೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ರಾಜ್ಯದಲ್ಲಿ ಸುಮಾರು ದಶಕದ ಹಿಂದೆ ಸರ್ಕಾರದ ಶಾಲೆಗಳು ಇಲ್ಲದೆ ಮಠ ಹಾಗೂ ಗುರುಕುಲಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು. ಆದರೆ ಇದೀಗ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಶಾಲಾ-&ಕಾಲೇಜುಗಳು ಪ್ರಾರಂಭಿಸಿದರು ಸಹ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಶಿಕ್ಷಕರನ್ನು ವಿವಿಧ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳನ್ನು ಪರಿವರ್ತನೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ನಿಷ್ಟೆಯಿಂದ ಕೆಲಸ ಮಾಡಿದರೆ ತಮ್ಮ ವೃತ್ತಿ ಜೀವನ ಸುಖಕರವಾಗುತ್ತದೆ. ನಿವೃತ್ತಿರಾದ ಮೇಲೆ ಸಮಾಜದ ಕಾರ್ಯಪ್ರವೃತ್ತರಾಗಿ ಧರ್ಮ ಜಾಗೃತಿಗೆ ಸಮಯ ನೀಡಬೇಕು. ನೆಮ್ಮದಿ ಜೀವನ ಸಾಗಬೇಕಾದರೆ ಸತ್ಸಂಗದಲ್ಲಿ ಭಾಗವಹಿಸಬೇಕು ಎಂದರು.
ತಹಸೀಲ್ದಾರ್​ ಶಿವಾನಂದ ಮೇತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವಿರಯ್ಯ ರುದನೂರು ಮಾತನಾಡಿದರು.
ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ರಾಜಪ್ಪ ನಂದೊಡೆ, ಚಂದ್ರಕಾಂತ ದೇಟ್ನೆ, ಸೂರ್ಯಕಾಂತ ಪಾಟೀಲ, ಸೂರ್ಯಕಾಂತ ಅಡಕೆ, ಶಿವರಾಜ ಮಾಶೆಟ್ಟೆ, ಫಯಾಜ್​ ಪಟೇಲ್​, ಡಾ.ಧಮೇಂರ್ದ್ರ ಭೋಸ್ಲೆ, ಮಾರುತಿ ಬೇಂದ್ರೆ, ಮಾಧವ ಸೂರ್ಯವಂಶಿ, ಹರಿನಾಥ ಪಾಟೀಲ್​, ಡಿಸಿ ಪಾಟೀಲ, ವಿಜಯಕುಮಾರ ಮೇಹಕರೆ, ಪುಷ್ಪಾ ಪಾಟೀಲ್​, ಶಾಂತಮ್ಮ ಇತರರಿದ್ದರು. ಮಲ್ಲಿನಾಥ ಸ್ವಾಗತಿಸಿ ನಿರೂಪಣೆ ಮಾಡಿದರು.