ಕೊರತಗೆರೆಯ tiger ಆರ್.ಆರ್.ಕರಾಟೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹುಲಿಗಳ ದಿನಾಚರಣೆಯಲ್ಲಿ ಮಕ್ಕಳು ಹುಲಿ ವೇಷ ಹಾಕಿದ್ದರು. ಶಿಕ್ಷರಾದ ವಿಜಯಲಕ್ಷಿ$್ಮ ವಿಶ್ವನಾಥ್, ಬಾಲಾಜಿ ಇತರರಿದ್ದರು.
ಕೊರಟಗೆರೆ: ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ tiger ಪಾತ್ರವಿದೆ. ಹುಲಿಯ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದ್ದು, ಪ್ರತಿಯೊಬ್ಬರೂ ಜೀವ ಸಂಕುಲದ ಉಳಿವಿಗೆ ಕೈಜೋಡಿಸಿ ಎಂದು ಆರ್.ಆರ್.ಕರಾಟೆ ಶಾಲೆಯ ಶಿಕ್ಷಕಿ ವಿಜಯಲಕ್ಷಿ$್ಮ ವಿಶ್ವನಾಥ್ ಕರೆ ನಿಡಿದರು.
ಆರ್.ಆರ್.ಕರಾಟೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹುಲಿಗಳ ದಿನಾಚರಣೆಯಲ್ಲಿ ಮಾತನಾಡಿ, ಆಹಾರ ಸರಪಳಿಯಲ್ಲಿ ಹುಲಿ ಪ್ರಮುಖ ಸ್ಥಾನ ಹೊಂದಿದ್ದು, ಪರಿಸರ ವ್ಯವಸ್ಥೆಯಲ್ಲಿ ಅದರ ಕೊಡುಗೆ ಬಗ್ಗೆ ಮಕ್ಕಳಿಗೆ ವಿವರಿಸಿದರು.
ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತ, ಹುಲಿಗಳ ಸಂರಕ್ಷಣೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಆದರೆ, ಹುಲಿಗಳ ಚರ್ಮ, ಉಗುರು, ಮೂಳೆ ಸೇರಿದಂತೆ ಇತರ ಅಂಗಾಂಗಗಳಿಗಾಗಿ ನಡೆಯುವ ಬೇಟೆ ಮತ್ತು ಅಕ್ರಮ ಸಾಗಣೆ ಆತಂಕಕಾರಿಯಾಗಿದೆ.ಇಂತಹ ಅಮಾನವೀಯ ಕೃತ್ಯ ತಡೆಗಟ್ಟಲು ಎಲ್ಲರೂ ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹುಲಿ ವೇಷ ತೊಡಿಸಿ, ಪರಿಸರ ಸಮತೋಲನ ಕಾಪಾಡುವಲ್ಲಿ ಹುಲಿಗಳ ಪಾತ್ರದ ಕುರಿತು ಅರಿವು ಮೂಡಿಸಲಾಯಿತು.