ಹುಮನಾಬಾದ್​ ತಾಲೂಕಿನ ಮಾಣಿಕನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರನ್ನು ಪಂಡಿತ ದೀನದಯಾಳ ಸಹಕಾರ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಮಂಠಾಳಕರ್​ ಸನ್ಮಾನಿಸಿದರು. ಸಂಜೀವಕುಮಾರ ಜುನ್ನಾ, ಗುಂಡು ಅತಿವಾಳ, ಡಿಸಿ ಬಿರಾದಾರ, ಸೂರ್ಯಕಾಂತ ಮಠಪತಿ ಇತರರಿದ್ದರು. 
ರಾಜ್ಯ

ಸಮಾಜದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು

ಪ್ರಮುಖ ಮುಖ್ಯಾಂಶಗಳು

  • ಸಂಜೀವಕುಮಾರ ಜುನ್ನಾ ಅಭಿಮತ
  • ಮಾಣಿಕನಗರದಲ್ಲಿ ಪತ್ರಿಕಾ ದಿನಾಚರಣೆ
ಹುಮನಾಬಾದ್​: ಸಮಾಜದಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನಿಷೆ್ಠೆ, ಸತ್ಯ ಮತ್ತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿ ಜನಸಾಮಾನ್ಯರಿಗೆ ದಾರಿ ತೋರಿಸುವ ಶಕ್ತಿಯಾಗಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಜುನ್ನಾ ಹೇಳಿದರು.
ತಾಲೂಕಿನ ಮಾಣಿಕನಗರದ ಅಂಧ ಮಕ್ಕಳ ಶಾಲೆಯಲ್ಲಿ ಪಂಡಿತ ದೀನದಯಾಳ ಸಹಕಾರ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಮಂಠಾಳಕರ್​ ಜನ್ಮದಿನದ ಪ್ರಯುಕ್ತ ಗೆಳೆಯರ ಬಳಗ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾನಂದ ಮಂಠಾಳಕರ್​ ಅವರು ಕಳೆದ ಎರಡು ದಶಕಗಳಿಂದ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಪತ್ರಕರ್ತರನ್ನು ಗೌರವಿಸುತ್ತಿರುವುದು ಮಾದರಿಯ ಕಾರ್ಯವಾಗಿದೆ. ಪತ್ರಕರ್ತರ ಮೇಲಿನ ಅವರ ಪ್ರೋತ್ಸಾಹ ಮತ್ತು ಗೌರವ ನಿರಂತರವಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಪತ್ರಕರ್ತ ಸಂಜಯ್​ ದತ್ತಕಾಳೆ ಮಾತನಾಡಿದರು. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗುಂಡು ಅತಿವಾಳ, ಪತ್ರಕರ್ತರಾದ ಶೈಲೇಂದ್ರ ಕಾವಡಿ, ದುಯೋರ್ಧನ ಹೂಗಾರ, ವೆಂಕಟೇಶ ಜಾಧವ್​, ಪ್ರಶಾಂತ ಹೊಸಮನಿ, ರಿಜ್ವಾನ್​, ಸಜೀಸ್​ ತಾಳಮಡಗಿ, ವಿಜಯಕುಮಾರ ಬೊಳಗೈ, ಕೃಷ್ಣ ಪಂಚಾಳ, ನವೀನ್​ ಗಂಜಿ, ವಿದ್ಯಾಸಾಗರ ಬೆಳಕೇರಾ, ಮುಸ್ತಾಫಾ, ರಾಜು ಹಡಪದ, ಅಬ್ದುಲ್​ ಖದೀರ್​ ಲಸ್ಕರಿ, ಮಲ್ಲು ರಡ್ಡಿ, ಶಿವಶರಣ ಕಠಳ್ಳಿ, ಗೆಳೆಯರ ಬಳಗದ ಡಿ.ಸಿ. ಬಿರಾದಾರ್​, ಸೂರ್ಯಕಾಂತ ಮಠಪತಿ, ಗಿರೀಶ ಪಾಟೀಲ,ಕರಬಸಪ್ಪ ಬಿರಾದಾರ, ರಾಜೇಶ ಮಂಠಾಳಕರ್​, ಸಂಗಪ್ಪ ಪಂಚಾಳ, ರಾಜು ಸಲಗರ್​ ವಿಜಯಕುಮಾರ ಹೊಸಮನಿ, ಸಚಿನ ಮಠಪತಿ, ಬಾಬು ಜಾನವೀರ, ರೇವಣಸಿದ್ದ ಮುಸ್ತಾಪುರ, ಶಿವನಂದ ಚೀಲಶೆಟ್ಟಿ ಇತರರಿದ್ದರು. ಹುಮನಾಬಾದ್​ ಹಾಗೂ ಚಿಟಗುಪ್ಪ ತಾಲೂಕಿನ ಪತ್ರಕರ್ತರನ್ನು ಶಿವಾನಂದ ಮಂಠಾಳಕರ್​ ಸನ್ಮಾನಿಸಿದರು.
=======