ಪತ್ರಿಕಾ ದಿನಾಚರಣೆ ನಿಮಿತ್ತ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಪತ್ರಕರ್ತರ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಐಎನ್ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಢಗಳೆ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕರಿಣಿ ಸದಸ್ಯ ಗುರುನಾಥ ಗಡ್ಡೆ, ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಮುಖರಾದ ಸಂಜುಕುಮಾರ ಸಂಗನೂರೆ, ಅಶೋಕ ಸಂಗನೂರೆ, ಕಲ್ಯಾಣರಾವ ಮದರಗಾಂವಕರ್, ಮಲ್ಲಿಕಾರ್ಜುನ ಬಂಡೆ ಇತರರಿದ್ದರು.
ಬಸವಕಲ್ಯಾಣ: ಸಮಾಜದ ಹಿತ ಬಯಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು, ಸಮಾಜದಲ್ಲಿಯ ತಪ್ಪುಗಳನ್ನು ಎತ್ತಿ ತೋರಿಸುವ ಜತೆಗೆ ಒಳ್ಳೆಯದನ್ನು ಬೆಂಬಲಿಸುವ, ಪ್ರೋತ್ಸಾಹಿಸುವ ಕಾರ್ಯ ಪತ್ರಕರ್ತರು ಮಾಡುತ್ತಾರೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗುರುನಾಥ ಗಡ್ಡೆ ಹೇಳಿದರು.
ಪತ್ರಿಕಾ ದಿನಾಚರಣೆ ನಿಮಿತ್ತ ನಗರದ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಘಟಕದ (ಇಎನ್ಟಿಯುಸಿ) ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತರ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕಾ ದಿನಾಚರಣೆ ನಿಮಿತ್ತ ಪತ್ರಕರ್ತರ ಸೇವೆ ಗುರುತಿಸಿ ಸನ್ಮಾನಿಸಿ, ಗೌರವಿಸುವ ಅಶೋಕ ಡಗಳೆ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಎನ್ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಢಗಳೆ ಮಾತನಾಡಿ, ಸಮಾಜದಲ್ಲಿಯ ದೋಷಗಳನ್ನು ಎತ್ತಿ ತೋರುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರನ್ನು ಸನ್ಮಾನಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಮಾತನಾಡಿದರು. ಡಾ.ಬಾಬು ಜಗಜೀವನ್ರಾಮ್ ಗ್ರಾಮೀಣ ಹಾಗೂ ನಗರದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಜುಕುಮಾರ ಸಂಗನೂರೆ, ಇಎನ್ಟಿಯುಸಿ ತಾಲೂಕು ಅಧ್ಯಕ್ಷ ಅಶೋಕ ಸಂಗನೂರೆ, ಪ್ರಮುಖರಾದ ಲಕ್ಷ$್ಮಣ ಸಸ್ತಾಪುರೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಯುವರಾಜ ಸೂರ್ಯವಂಶಿ, ಪತ್ರಕರ್ತ ಮಲ್ಲಿಕಾರ್ಜುನ ಬಂಡೆ ಇತರರಿದ್ದರು. ಪತ್ರಕರ್ತ ಕಲ್ಯಾಣರಾವ ಮದರಗಾಂವಕರ್ ನಿರೂಪಣೆ ಮಾಡಿದರು.
ಸನ್ಮಾನ: ಪತ್ರಕರ್ತರಾದ ಮಾಣಿಕ ಭುರೆ, ಕಲ್ಯಾಣರಾವ ಮದರಗಾಂವಕರ್, ಡಿಕೆ ಪ್ರಲ್ಹಾದ, ನಯಿಮೋದ್ದಿನ್ ಜಾಬುಕಸವಾರ, ಮಲ್ಲಿಕಾರ್ಜುನ ಬಂಡೆ, ಖಾಜಾ ಸರ್ತಾಜೋದ್ದಿನ್, ನಾಗಪ್ಪ ನಿಣ್ಣೆ, ಧನರಾಜ ರಾಜೋಳೆ, ಆದಿತ್ಯ ಗಾಜರೆ, ಮಾಧವಿ ಲಾಖೆ, ಜುಬೇರ ನವಾಜಭಾಯಿ, ಖುತಬೋದ್ದಿನ್, ವೀರಶೆಟ್ಟಿ ಬೇಲೂರ, ಸುಧಾಕರ ಸೂರ್ಯವಂಶಿ, ಮೊಹ್ಮದಮಿಯಾ, ಸಮೀರಶೇಖ್, ಅಸ್ಲಮ್, ಶಪಿಯೋದ್ದಿನ್, ಸತೀಶ ಹೊಸಮನಿ, ಸವುದ ಅನ್ವರ ಸೇರಿ ಯು ಟ್ಯೂಬ್ ವರದಿಗಾರರನ್ನು ಸನ್ಮಾನಿಸಲಾಯಿತು.