ಕಲಬುರಗಿ ಜೇವರ್ಗಿ ಹಳೇ ರಸ್ತೆಯ ಶ್ರೀರಾಮ ಆರ್ಕೆಡ್​ನಲ್ಲಿ ಇತ್ತೀಚೆಗೆ ಬುದ್ಧ ಬಸವ ಅಂಬೇಡ್ಕರ್​ (ಬಿಬಿಎ) ಸೌಹಾರ್ದ ಸಹಕಾರಿ ಸಂಕ್ಕೆ ರಾಜ್ಯ ಸೌಹಾರ್ದ ಸಹಕಾರಿ ಸಂಗಳ ನಿರ್ದೇಶಕಿ ಶೈಲಜಾ ತಪಲಿ ಚಾಲನೆ ನೀಡಿದರು. ಸಂದ ಅಧ್ಯಕ್ಷ ಮಲ್ಲಿಕಾರ್ಜುನ ಮಿಣಜಗಿ, ಉಪಾಧ್ಯಕ್ಷ ಭೀಮರಾಯ ತೆಗನೂರ, ಸೂರ್ಯಕಾಂತ ಎಂ.ಕೆ. ಇತರರಿದ್ದರು.  
ರಾಜ್ಯ

ಹಣಕಾಸು ವ್ಯವಹಾರದಲ್ಲಿ ಸಹಕಾರಿ ಪಾತ್ರ ಪ್ರಮುಖ

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕಿ ಶೈಲಜಾ ತಪಲಿ ಅನಿಸಿಕೆ
  • ಬಿಬಿಎ ಸೌಹಾರ್ದ ಸಹಕಾರ ಸಂಘಕ್ಕೆ ಚಾಲನೆ
ಕಲಬುರಗಿ: ಹಣಕಾಸು ವ್ಯವಹಾರ ಸೇರಿ ಖಾಸಗಿ ಫೈನಾನ್ಸ್​ಗಳ ಅವಲಂಬನೆ ಕಡಿಮೆ ಮಾಡುವಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯ ಸೌಹಾರ್ದ ಸಹಕಾರಿ ಸಂಘಗಳ ನಿರ್ದೇಶಕಿ ಶೈಲಜಾ ತಪಲಿ ಹೇಳಿದರು.
ಹಳೇ ಜೇವರ್ಗಿ ರಸ್ತೆಯ ಶ್ರೀರಾಮ ಆರ್ಕೆಡ್​ನಲ್ಲಿ ಇತ್ತೀಚೆಗೆ ಬುದ್ಧ ಬಸವ ಅಂಬೇಡ್ಕರ್​ (ಬಿಬಿಎ) ಸೌಹಾರ್ದ ಸಹಕಾರಿ ಸಂಘಕ್ಕೆ ಚಾಲನೆ ನೀಡಿದ ಅವರು, ಸೌಹಾರ್ದ ಸಹಕಾರಿ ಸಂಘಗಳು ರೈತರು ಹಾಗೂ ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುತ್ತಿವೆ. ಇದು ಕೇವಲ ವ್ಯವಹಾರವಲ್ಲ, ಸೇವಾ ಕ್ಷೇತ್ರವೂ ಹೌದು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಸಂಘಗಳು ಪೂರಕ ವಾತಾವರಣ ಕಲ್ಪಿಸಿವೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಸೂರ್ಯಕಾಂತ ಎಂ.ಕೆ. ಮಾತನಾಡಿದರು. ಸಂಜೀವಕುಮಾರ ಮಹಾಜನ, ಕಲಬುರಗಿ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್​.ಎಸ್​. ಪಾಟೀಲ್​, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಪತ್ತಿನ ಸಂಘದ ಪ್ರಾಂತೀಯ ವ್ಯವಸ್ಥಾಪಕ ಸಂಜಯ ಕೋಟಕರ್​, ಶೋಭಾವತಿ, ಶ್ರೀಮಂತ ಜಮಾದಾರ್​, ಶಿವಾನಂದ ಕಾಂಬಳೆ, ಸಾಯಿಬಣ್ಣ ಭಜಂತ್ರಿ, ಮಧುಮತಿ ನಾಯಕ್​, ಸಚಿನ್​ ಬಿ.ಎಂ., ಕೈಲಾಶ ಪಾಟೀಲ್​, ಶಿವಶರಣಪ್ಪ ಸಿಂಗೆ, ರಾಕೇಶ್​ ಚೆಂಗಟಿ, ಚಿಕ್ಕಯ್ಯ ಎಸ್​.ಡಿ., ಚೇತನಕುಮಾರ ಇದ್ದರು. ಬಿಬಿಎ ಸೌಹಾರ್ದ ಸಹಕಾರಿ ಸಂದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮಿಣಜಗಿ, ಉಪಾಧ್ಯಕ್ಷ ಭೀಮರಾಯ ತೆಗನೂರ ಪ್ರಮಾಣವಚನ ಸ್ವೀಕರಿಸಿದರು.
"

2000-5000 ರೂ.ವರೆಗೆ ಸದಸ್ಯತ್ವ ಶುಲ್ಕವಿದೆ. ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಆರೋಗ್ಯ ವಿಮೆ ಸೇರಿ ಹಲವು ಸೌಲಭ್ಯ ನೀಡಲಾಗುತ್ತದೆ. ಸಾಲ ಪಡೆದವರು ಅನಾರೋಗ್ಯ ಅಥವಾ ಆಕಸ್ಮಿಕ ಮರಣ ಹೊಂದಿದಲ್ಲಿ ಸಾಲ ಮನ್ನಾ ಮಾಡುವ ವಿಶೇಷ ಯೋಜನೆಯನ್ನೂ ಜಾರಿಗೆ ತರಲಾಗಿದೆ.

— > ಸೂರ್ಯಕಾಂತ ಎಂ.ಕೆ. ಸಿಇಒ, ಬಿಬಿಎ ಸೌಹಾರ್ದ ಸಹಕಾರಿ ಸಂ