ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್​ ನಡೆ ಮತ ರಣೆ ಕಡೆ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಗ್ರಾಮೀಣ ಬ್ಲಾಕ್​ ಅಧ್ಯ ಲ್ಮಾರೆಡ್ಡಿ, ಯುಡಾ ಅಧ್ಯ ಬಾಬುರಾವ ಕಾಡ್ಲೂರ ಇತರರಿದ್ದರು. 
ರಾಜ್ಯ

ದೇಶದಲ್ಲಿ ಮತದಾನದ ಹಕ್ಕಿಗೆ ಧಕ್ಕೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಆತಂಕ
  • ಯಾದಗಿರಿಯಲ್ಲಿ ಕಾಂಗ್ರೆಸ್​ ನಡೆ ಮತ ರಕ್ಷಣೆ ಕಡೆ
ಯಾದಗಿರಿ: ಮತದಾರ ಪಟ್ಟಿ ಪರಿಷ್ಕರಣೆಯಿಂದ ದೇಶದಲ್ಲಿ ಮತದಾನದ ಹಕ್ಕಿಗೆ ಧಕ್ಕೆಯಾಗುತ್ತಿರುವುದು ಆತಂಕರಾಗಿ ಬೆಳವಣಿಗೆಯಾಗಿದೆ ಎಂದು ಶಾಸಕ ಚನ್ನಾರಡ್ಡಿ ಟೀಲ್​ ತುನ್ನೂರ ಹೇಳಿದರು.
ನಗರದ ಎಸ್​ಎಲ್​ಟಿ ಹೋಟೆಲ್​ನಲ್ಲಿ ಬ್ಲಾಕ್​ ಮತ್ತು ಗ್ರಾಮೀಣ ಕಾಂಗ್ರೆಸ್​ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡ ಕಾಂಗ್ರೆಸ್​ ನಡೆ ಮತ ರಣೆ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ದೇಶದ ಕೆಲ ರಾಜ್ಯಗಳಲ್ಲಿ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುತ್ತಿರುವ ಬಗ್ಗೆ ವರದಿ ಬಂದಿದ್ದು, ಈ ವಿಚಾರವಾಗಿ ನ್ಯಾಯಾಲಯಗಳಲ್ಲಿಯೂ ಪ್ರಶ್ನೆ ಉದ್ಭವಿಸಿವೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ವಿವರವಾಗಿ ಮಾಹಿತಿ ನೀಡಿದ ಅವರು, ವಿರೋಧ ಪಗಳ ಹೇಳಿಕೆಗಳಿಗೆ ಯಾರೂ ಕಿವಿಗೊಡಬಾರದು. ನಾವು ಯಾವುದೇ ಪದ ಪರ ಅಥವಾ ವಿರುದ್ಧ ಮಾತನಾಡುವುದಿಲ್ಲ. ಆದರೆ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು, ದಲಿತರು ಹಾಗೂ ಸಾಮಾನ್ಯ ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆ ಆಗಬಾರದು ಎಂದು ಹೇಳಿದರು.
ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಾಳೆ ಕರ್ನಾಟಕದಲ್ಲಿಯೂ ಮರುಕಳಿಸಬಹುದು ಎಂಬ ಆತಂಕ ಜನರಲ್ಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಪದ ವಿರುದ್ಧವಲ್ಲ. ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ಉಳಿಸುವುದೇ ನಮ್ಮ ಮೂಲ ಉದ್ದೇಶ. ಸಂವಿಧಾನ ನೀಡಿರುವ ಮತದಾನದ ಹಕ್ಕು ಯಾರೂ ಕಸಿದುಕೊಳ್ಳಬಾರದು. ಯಾದಗಿರಿ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಹಕ್ಕು ರಸಲು ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಅವರು ಭರವಸೆ ನೀಡಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಜನರ ಆಶೀರ್ವಾದದಿಂದ ಯೋಜನೆಗಳು ಮುಂದುವರಿಯುತ್ತಿವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಪದ ಕೆಲ ಸದಸ್ಯರೇ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮತ ಹಾಕಿರುವುದು ಕಾಂಗ್ರೆಸ್​ ಪದ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ. ಇದು ರಾಜ್ಯ ಸರ್ಕಾರದ ಜನಪರ ಆಡಳಿತಕ್ಕೆ ದೊರೆತಿರುವ ಬೆಂಬಲವಾಗಿದೆ ಎಂದರು.
ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯ ಮಲ್ಲಿಕಾರ್ಜುನ ಈಟೆ, ಗ್ರಾಮೀಣ ಬ್ಲಾಕ್​ ಅಧ್ಯ ಲ್ಮಾರೆಡ್ಡಿ, ಯುಡಾ ಅಧ್ಯ ಬಾಬುರಾವ ಕಾಡ್ಲೂರ, ಯುವ ಮುಖಂಡ ಸನ್ನಿಗೌಡ ಪಾಟೀಲ್​ ತುನ್ನೂರ, ಗ್ಯಾರಂಟಿ ಸಮಿತಿ ಅಧ್ಯ ಬಸವರಾಜ ಬಾಗ್ಲಿ, ಮೈನೋದ್ದೀನ್​ ಮಿರ್ಚಿ, ಪ್ರಚಾರ ಸಮಿತಿ ಅಧ್ಯ ಮರೆಪ್ಪ ಬಿಳ್ಹಾರ, ಒಬಿಸಿ ಟಕದ ಅಧ್ಯ ಸಾಯಿಬಣ್ಣ ಕೆಂಗುರಿ, ನರಸಪ್ಪ ಬಾಗ್ಲಿ, ಬಾಬುರಾವ ವಡಗೇರಾ, ಲ್ಮಣ ರಾಠೋಡ, ರಾಜಾ ಮೈನೋದ್ದೀನ್​ ದೋರನಹಳ್ಳಿ ಇತರರಿದ್ದರು.