/ಭಾಲ್ಕಿ ತಾಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1993&94ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿವಕುಮಾರ ಫುಲಾರಿ, ಶಿವಕುಮಾರ ಸಾಲಿ, ಗಣೇಶ ಪಾಟೀಲ್​, ಸೋಮನಾಥ ಎಸ್​.ಎಲ್​. ಪಾಟೀಲ್​ ಇತರರಿದ್ದರು. 
ರಾಜ್ಯ

ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು

ಪ್ರಮುಖ ಮುಖ್ಯಾಂಶಗಳು

  • ಶಿವಕುಮಾರ ಫುಲಾರಿ ಅನಿಸಿ
  • ಜ್ಯಾಂತಿ ಸರ್ಕಾರಿ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ
ಭಾಲ್ಕಿ: ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು ಮತ್ತು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆದು ಅವರನ್ನು ಸಾಧಕರನ್ನಾಗಿ ಮಾಡುವಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾನೆ ಎಂದು ೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ ಹೇಳಿದರು.
ತಾಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1993&94ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು , ಹಳೆಯ ವಿದ್ಯಾರ್ಥಿಗಳು ಶಾಲಾ ದಿನಗಳನ್ನು ಮತ್ತು ಗುರುಗಳ ಮೇಲಿಟ್ಟ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ತೋರಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಬೀದರ್​ ಸರಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಉಪನ್ಯಾಸಕ ಶಿವಕುಮಾರ ಸಾಲಿ, ಜಿಲ್ಲಾ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಗಣೇಶ ಪಾಟೀಲ್​ ಮಾತನಾಡಿದರು. ಸೋಮನಾಥ ಎಸ್​.ಎಲ್​. ಪಾಟೀಲ್​ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಂಜಿಎಸ್​ಎಸ್​ಕೆ ನಿರ್ದೇಶಕ ಸಂತೋಷ ಪಾಟೀಲ್​, ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಹಣಮಶೆಟ್ಟಿ, ಸುರೇಶ ಕಪಲಾಪುರೆ, ಸಂಗಮೇಶ ಬಿರಾದಾರ್​, ಹಳೆಯ ವಿದ್ಯಾರ್ಥಿಗಳಾದ ವೀರಶೆಟ್ಟಿ ನೀಡವಾದೆ, ರಮೇಶ ಪಾಟೀಲ್​, ಸುರೇಶ ಹಣಮಶೆಟ್ಟಿ, ಸಂತೋಷ ಸುಲಾರ, ಸುರೇಶ ಬೀದರ್​, ಸಂತೋಷ, ಸೂರ್ಯಕಾಂತ, ನೀಲೋಚನಾ, ಕವಿತಾ, ಮಂಗಲಾ, ಸವಿತಾ, ಮಂಜುಳಾ, ಸವಿತಾ ಇತರರಿದ್ದರು.
ಸನ್ಮಾನ: ನಿವೃತ್ತ ಶಿಕ್ಷಕರಾದ ಮಲಶೆಟ್ಟಿ ಗಾದಗೆ, ಗುಡಸಾಂತಪ್ಪ ಪಾಟೀಲ್​, ಬಸಯ್ಯ ಸ್ವಾಮಿ, ಶಿವಕುಮಾರ, ಶಾಮರಾವ, ಪ್ರಭು ಹೋಡಮನಿ ಮತ್ತು ಧುಳಪ್ಪ ಪಂಚಾಳ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ, ಗೌರವ ಸಲ್ಲಿಸಿದರು. ಅನ್ನಪೂರ್ಣ ತಳವಾಡೆ ಸ್ವಾಗತ ಗೀತೆ ಹಾಡಿದರು.