ಸತ್ಯದ ಅರಿವು ವಿಶ್ವಕ್ಕೆ ತಲುಪಿದೆ 
ರಾಜ್ಯ

ಸತ್ಯದ ಅರಿವು ವಿಶ್ವಕ್ಕೆ ತಲುಪಿದೆ

ಮುಳಬಾಗಿಲು: ಹಿಂದೂ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರಲು ಹಲವು ದುಷ್ಟ ಶಕ್ತಿಗಳು ಶತ ಪ್ರಯತ್ನ ಮಾಡಿದ್ದು, ಕೆಲವೇ ದಿನಗಳಲ್ಲಿ ಪೊಲೀಸ್​ ಅಧಿಕಾರಿಗಳ ತನಿಖೆಯಲ್ಲಿ ಇದು ಸುಳ್ಳು ಆರೋಪ ಎಂಬುದು ಸಾಭೀತಾಗಿದೆ. ಈ ಸತ್ಯದ ಅರಿವು ವಿಶ್ವಕ್ಕೆ ತಲುಪಿದೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ.ರಘುಪತಿರೆಡ್ಡಿ ಹೇಳಿದರು. world
ತಾಲೂಕಿನ ಹನುಮನಹಳ್ಳಿ ಗ್ರಾಪಂ ವ್ಯಾಪ್ತಿಯ ನಲ್ಲೂರು ಗ್ರಾಮದ ಅನುಬಂಧ ಜ್ಞಾನ ವಿಕಾಸ ಕೇಂದ್ರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜಕ್ಕೆ ನೀಡುತ್ತಿರುವ ಕಾರ್ಯಕ್ರಮ ಬಡವರ ಅಭಿವೃದ್ಧಿಗೆ, ಶಿಕ್ಷಣಕ್ಕೆ ಸಹಕಾರಿಯಾಗಿವೆ. ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳು ಕ್ಷೇತ್ರವನ್ನು ಹಾಳು ಮಾಡಲು ಏನೆಲ್ಲ ಪ್ರಯತ್ನ ಮಾಡಿದರೂ ಪೂಜ್ಯರು ಮಾಡಿರುವ ಒಳ್ಳೇ ಕೆಲಸದ ಪ್ರತಿಕ ಕ್ಷೇತ್ರವನ್ನು ಅಪವಿತ್ರ ಗೊಳಿಸಲು ಸಾಧ್ಯವಾಗಿಲ್ಲ ಎಂದರು.
ನೈಸರ್ಗಿಕ ಕೃಷಿತಜ್ಞ ತೊಂಡಹಳ್ಳಿ ಅರಿವು ಪ್ರಭಾಕರ್​ ಮಾತನಾಡಿ, ಆರೋಗ್ಯ ಸರಿ ಇದ್ದರೆ ಎಲ್ಲವು ಸಾಧಿಸಬಹುದು. ಮೊದಲು ಪ್ರತಿ ಮನೆಯಲ್ಲೂ ಧಾನ್ಯ ಶೇಖರಣೆ ಮಾಡಲು ಕಣಜ ಇತ್ತು. ಆದರೆ ಈಗ ಆ ವ್ಯವಸ್ಥೆ ಯಾರ ಮನೆಯಲ್ಲೂ ಇಲ್ಲ. ಆದ್ದರಿಂದ ಧರ್ಮಸ್ಥಳ ಯೋಜನೆ ಪೌಷ್ಟಿಕ ಆಹಾರಗಳ ಮೇಳ ಮಾಡಿ ಗುಣಮಟ್ಟದ ಆಹಾರ ಬಳಕೆ ಅರಿವು ಕಾರ್ಯಕ್ರಮ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸಿ.ಹರೀಶ್​ ಕುಮಾರ್​ ಮಾತನಾಡಿ, ಕನಿಷ್ಠ ಕುಟುಂಬಕ್ಕೆ ಆಗುವಷ್ಟು ದವಸ, ಧಾನ್ಯ, ತರಕಾರಿಗಳನ್ನು ನೈಸರ್ಗಿಕ ಬೆಳೆದುಕೊಳ್ಳಿ ಎಂದರು.