ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸರಸ್ವತಿ ಪಾಟೀಲ್, ಗಿರಿಜಾ ಕಿಲ್ಲೇದ್, ಡಾ.ವಿಜಯಲಕ್ಷ್ಮೀ ಗುರಿಕಾರ, ಶಕುಂತಲಾ ಪಾಟೀಲ್, ಲಕ್ಷ್ಮೀ ಪಾಟೀಲ್, ಚಂದ್ರಶೇಖರ ಗೊರೇಬಾಳ, ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ಬಸವರಾಜ ಬಾದರ್ಲಿ ಇತರರಿದ್ದರು.
- ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ಸಿಂಧನೂರು: ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿದವನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಅಪ್ರಾಪ್ತ ಬಾಲಕಿಯರ ಮೇಲೆ ದುಷ್ಕರ್ಮಿಯೊಬ್ಬ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ 8 ಮತ್ತು 9 ವಯಸ್ಸಿನ ಇಬ್ಬರು ಸಹೋದರಿಯರಿಗೆ ಹೆದರಿಸಿ ಅತ್ಯಾಚಾರ ಎಸಗಿರುವುದು ಅಮಾನವೀಯ ಕೃತ್ಯ. ದುಷ್ಕರ್ಮಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು.
ಸಂತ್ರಸ್ತ ಕುಟುಂಬವು ತಗಡಿನ ಶೆಡ್ ಹಾಕಿಕೊಂಡು ಮಳೆ, ಚಳಿ ಹಾಗೂ ಬಿಸಿಲೆನ್ನದೇ ಹಲವು ವರ್ಷಗಳಿಂದ ವಾಸಿಸುತ್ತಿದೆ. ಪಾಲಕರು ಕೂಲಿ ಕೆಲಸಕ್ಕೆ ಹೋದ ವೇಳೆ ತಗಡಿನ ಶೆಡ್‌ಗೆ ನುಗ್ಗಿದ್ದ ದುಷ್ಕರ್ಮಿ ಅತ್ಯಾಚಾರ ಮಾಡಿದ್ದಾನೆ. ಕೂಡಲೇ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಭದ್ರತೆ ಒದಗಿಸಬೇಕು. ಬಾಧಿತ ಮಕ್ಕಳನ್ನು ಉಚಿತ ವಸತಿ ಶಾಲೆಗೆ ಸೇರಿಸಬೇಕು. ಉನ್ನತ ಶಿಕ್ಷಣದವರೆಗೆ ಸರ್ಕಾರವೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಸರಸ್ವತಿ ಪಾಟೀಲ್, ಗಿರಿಜಾ ಕಿಲ್ಲೇದ್, ಡಾ.ವಿಜಯಲಕ್ಷ್ಮೀ ಗುರಿಕಾರ, ಶಕುಂತಲಾ ಪಾಟೀಲ್, ಲಕ್ಷ್ಮೀ ಪಾಟೀಲ್, ಚಂದ್ರಶೇಖರ ಗೊರೇಬಾಳ, ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ಬಸವರಾಜ ಬಾದರ್ಲಿ, ಬಸವಲಿಂಗಪ್ಪ ಬಾದರ್ಲಿ, ನಾಗರಾಜ ಪೂಜಾರ್, ಬಸವಂತರಾಯಗೌಡ ಕಲ್ಲೂರು, ವೆಂಕನಗೌಡ ಗದ್ರಟಗಿ, ಅಶೋಕ ನಂಜಲದಿನ್ನಿ, ಡಾ.ಬಸವರಾಜ ನಾಯಕ, ಮಂಜುನಾಥ ಗಾಂಧಿನಗರ ಇದ್ದರು.