ಬಿಸಿಲಿನ ತಾಪಕ್ಕೆ ಬಾಗಲಕೋಟೆ ಮಾರುಕಟ್ಟೆ ರಕ್ಷಣೆ ಪಡೆದಿರುವ ವ್ಯಾಪಾರಸ್ಥರು. 
ರಾಜ್ಯ

ಇನ್ನೂ ಬಾರದ ಮಳೆ ; ತಣಿಯದ ಇಳೆ !

ಅಶೋಕ ಶೆಟ್ಟರ, ಬಾಗಲಕೋಟೆ: ಕಳೆದ ವರ್ಷ ಇಷ್ಟೊತ್ತಿಗಾಗಲೇ ಜಿಲ್ಲಾದ್ಯಂತ ಪೂರ್ಣ ಮುಂಗಾರು ಮಳೆ ಆರ್ಭಟ ನಡೆದು, ಭೂಮಿ ತಂಪಾಗಿ ರೈತರು ಕೃಷಿ ಚಟುವಟಿಕೆಗೆ ಅಣಿಯಾಗಿದ್ದರು. ಆದರೆ, ಪ್ರಸಕ್ತ ವರ್ಷ ಮೇ ಎರಡನೇ ವಾರಕ್ಕೆ ಕಾಲಿಟ್ಟರೂ ಇನ್ನೂ ವರುಣನ ದರ್ಶನ ಭಾಗ್ಯ ಇಲ್ಲದೇ ಇಳೆ ತಣಿಯದಾಗಿದೆ. ದಿನೇ ದಿನೆ ಬಿಸಿಲಿ ಆರ್ಭಟ ಮತ್ತು ಅದರ ಆದ್ರತೆ ಮಾತ್ರ ಹೆಚ್ಚುತ್ತಲೇ ಇದೆ.
ವಾಡಿಕೆಯಂತೆ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ೬ ಎಂಎA, ಏಪ್ರಿಲ್‌ನಲ್ಲಿ ೧೯ ಎಂಎA ಮತ್ತು ಮೇ ತಿಂಗಳು ೫೧ ಎಂಎA ಪೂರ್ವ ಮುಂಗಾರು ಮಳೆ ಆಗಬೇಕಿತ್ತು. ಈ ಸಲ ಮಾರ್ಚ್ನಲ್ಲಿ ೧೮.೨ ಎಂಎA, ಏಪ್ರಿಲ್‌ನಲ್ಲಿ ೩೩ ಎಂಎA ಮಳೆ ಸುರಿದಿದ್ದು, ಮೇ ತಿಂಗಳು ಈ ವರೆಗೂ ಮಳೆ ಆಗಿಲ್ಲ. ಇದರಿಂದ ಮುಂಗಾರು ಕೃಷಿ ಚಟವಟಿಕೆಗೆ ಹಿನ್ನೆಡೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಇದೇ ವೇಳೆ ಜಿಲ್ಲೆಯಲ್ಲಿ ಈ ಬೇಸಿಗೆ ಜನರನ್ನು ಸಂಪೂರ್ಣ ಹೈರಾಣಾಗಿಸಿದೆ. ದಿನೇ ದಿನೇ ಬಿಸಿಲಿನ ಪ್ರಕರತೆ ಹೆಚ್ಚುತ್ತಲೇ ಇದ್ದು, ಬೆವರಿನ ಸ್ನಾನ ನಿಲ್ಲದಾಗಿದೆ. ೨೦೨೦ ರಿಂದ ೨೦೨೫ ರವರೆಗೆ ಮೇ ಎರಡನೇ ವಾರದಲ್ಲಿ ದಾಖಲಾದ ಗರಿಷ್ಠ ತಾಪಮಾನ ೪೦ ರ ಗಡಿ ದಾಟಿರಲಿಲ್ಲ. ಆದರೆ, ಈ ಸಲ ಮೇ ೧ ರಿಂದ ೧೧ರ ವರೆಗೆ ಒಟ್ಟು ಐದು ದಿನಗಳು ೪೦ ಡಿಗ್ರಿ ಸೆಲ್ಸಿಯಸ್ ಗಡಿದಾಟಿಕೊಂಡು ಹೋಗಿದ್ದು, ಮೇ ೪ ರಂದು ೪೧.೮ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸಾಮಾನ್ಯವಾಗಿ ವಾತಾವರಣದಲ್ಲಿ ತಾಪಮಾನ ಗರಿಷ್ಠ ೪೧.೫ ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಮಳೆ ಆಗುವ ವಾಡಿಕೆ ಇತ್ತು. ಆದರೆ, ಈ ವರ್ಷ ಮೇ ೧ ರಿಂದ ಮೇ ೫ ರವರೆಗೆ ಕನಿಷ್ಠ ೪೧.೨ ರಿಂದ ಗರಿಷ್ಠ ೪೧.೮ ಡಿಗ್ರಿ ಸೆಲ್ಸಿಯಸ್ ವರೆಗೂ ಇದ್ದರೂ ಮಳೆ ಮಾತ್ರ ಅಬ್ಬರಿಸಲೇ ಇಲ್ಲ. ಇದು ಪೂರ್ವ ಮುಂಗಾರು ಮಳೆಯಿಂದ ಗರಿಗೆದರುತ್ತಿದ್ದ ಕೃಷಿ ಚಟುವಟಿಕೆಗಳು ಈ ಸಲ ಹಾಸಿಹೊದ್ದು ಮಲಗುವಂತೆ ಮಾಡಿದೆ.
ಇನ್ನು ಬಿಸಿಲಿನ ತಾಪದಿಂದಾಗಿ ಜನರು ಮನೆಯಿಂದ ಆಚೆ ಬರಲು ಭಯ ಪಡುತ್ತಿದ್ದಾರೆ. ರಸ್ತೆಗಳಂತೂ ಕಾದು ಕಬ್ಬಿಣದಂತಾಗಿವೆ. ಜಲಮೂಲಗಳು ಬತ್ತಿ ಬರಿದಾಗುತ್ತಿವೆ. ಹಗಲು ರಾತ್ರಿ ಸೆಕೆ ಜನರನ್ನು ಇನ್ನಿಲ್ಲದಂತೆ ಸುಸ್ತು ಹೊಡೆಸುತ್ತಿದೆ. ಬಿಸಿ ಗಾಳಿ ಜನರ ಚೈತನ್ಯವನ್ನು ಕುಗ್ಗುವಂತೆ ಮಾಡುತ್ತಿದೆ. ಮಧ್ಯಾಹ್ನ ಊಟವೂ ಸೇರದಂತಾಗುತ್ತಿದೆ. ಬರೀ ತಂಪು ಪಾನೀಯ ಕುಡಿಯಬೇಕು ಅನ್ನಿಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮೋಡಗಳು ಆವರಿಸುತ್ತಿಲ್ಲ.
ಪ್ರತಿ ವರ್ಷ ವಾತಾವರಣದಲ್ಲಿ ಯಾವಾಗ ಗರಿಷ್ಠ ತಾಪಮಾನ ೪೧.೫ ಡಿಗ್ರಿ ಸೆಲ್ಸಿಯಸ್ ದಾಟುತ್ತಿತ್ತು ಆಗ ಮಳೆಯಾಗುವ ವಾಡಿಕೆ ಇದೆ ಮತ್ತು ಮಳೆ ಆಗಿರುವ ದಿನಗಳು ಇವೆ. ಆದರೆ, ಪ್ರಸಕ್ತ ವರ್ಷ ಕಳೆದ ೨೦ ದಿನಗಳಿಂದ ಗರಿಷ್ಠ ತಾಪಮಾನ ೪೦ ರಿಂದ ೪೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೂ ಮಳೆ ಆಗಿರುವುದಿಲ್ಲ. ಕಾರಣ ಭೂಮಿಯ ಮೇಲ್ಮೆÊದಿಂದ ಎರಡು ಕಿ.ಮೀ. ಎತ್ತರದಲ್ಲಿ ವಿರುದ್ಧ ದಿಕ್ಕಿನಲ್ಲಿ ತೀವ್ರತೆಯ ಗಾಳಿ ಬೀಸುತ್ತಿರುವುದರಿಂದ(ಆ್ಯAಟಿ ಸರ್ಕ್ಯೂಲೇಷನ್) ಮೋಡಗಳ ರಚನೆ ಆಗುತ್ತಿಲ್ಲ. ಹೀಗಾಗಿ ಮೇ ತಿಂಗಳಲ್ಲಿ ಈ ವರೆಗೂ ಮಳೆಯ ಕೊರತೆ ಉದ್ಭವಿಸಿದೆ ಹವಾಮಾನ ಶಾಸöಜ್ಞ ಡಾ.ಪ್ರವೀಣ ಗುಳೇದ ತಿಳಿಸಿದ್ದಾರೆ.