ಯಾದಗಿರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ೮೪ ವರ್ಷಾಚರಣೆಯಲ್ಲಿ ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ ಮಾತನಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲï, ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಇತರರಿದ್ದರು.
- ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ ಹೇಳಿಕೆ
- ಕಾಂಗ್ರೆಸ್ ಕಚೇರಿಯಲ್ಲಿ ಚಳವಳಿ ೮೪ನೇ ವರ್ಷಾಚರಣೆ
ರಾಷ್ಟçಪಿತ ಮಹಾತ್ಮ ಗಾಂಽ ನೇತೃತ್ವದಲ್ಲಿ ೧೯೪೨ರ ಆ.೮ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆದಿದ್ದ ಕ್ವಿಟ್ ಇಂಡಿಯಾ ಚಳವಳಿ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ನಿರ್ಣಾಯಕ ಮತ್ತು ಅಂತಿಮ ದೊಡ್ಡ ಹೋರಾಟವಾಗಿತ್ತು ಎಂದು ಜಿ¯್ಲÁ ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ ಹೇಳಿದರು.
ಜಿ¯್ಲÁ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ೮೪ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಡು ಇಲ್ಲವೇ ಮಡಿ ಎಂಬ ಕರೆಯೊಂದಿಗೆ ಬ್ರಿಟಿಷರು ತಕ್ಷಣವೇ ಭಾರತ ಬಿಟ್ಟು ತೊಲಗಬೇಕೆಂಬ ಗಾಂಽÃಜಿ ಆಗ್ರಹ ಆಂಗ್ಲ ಸರ್ಕಾರವನ್ನೇ ನಡುಗಿಸಿತ್ತು ಎಂದರು.
ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಮಾತನಾಡಿ, ಬ್ರಿಟಿಷರ ದೌರ್ಜನ್ಯ ಅತಿಯಾಗಿತ್ತು, ಭಾರತೀಯರನ್ನು ಕಾಲಕಸವಾಗಿ ಕಾಣುವ ಪ್ರವೃತ್ತಿ ಗಾಂಽÃಜಿ ಅವರನ್ನು ಕೆರಳಿಸಿದಾಗಲೇ ಕ್ವಿಟ್ ಇಂಡಿಯಾ ಚಳವಳಿ ಶುರುವಾಯಿತು. ಸಂಪೂರ್ಣ ಸ್ವಾತಂತ್ರ÷್ಯ ಪಡೆಯುವ ಹಂಬಲ ಹೆಚ್ಚಾಗಿ ದೇಶಾದ್ಯಂತ ಕೋಟ್ಯಂತರ ಜನರನ್ನು ಒಗ್ಗೂಡಿಸಿತು ಎಂದು ಹೇಳಿದರು.
ಚಳವಳಿ ಆರಂಭವಾದ ತಕ್ಷಣ ಗಾಂಽÃಜಿ ಸೇರಿ ಪ್ರಮುಖ ಕಾಂಗ್ರೆಸ್ ನಾಯಕರನ್ನು ಬ್ರಿಟಿಷರು ಬಂಽಸಿದರು. ಇದರಿಂದ ಇಡೀ ದೇಶದಲ್ಲಿ ಹೊಸ ಕ್ರಾಂತಿ ಶುರುವಾಯಿತು. ಈ ಹೋರಾಟದಲ್ಲಿ ಹಿರಿಯರ ಜತೆ ಯುವಕರು ಮತ್ತು ಸಾಮಾನ್ಯ ಜನರು ಬೀದಿಗಿಳಿದರು ಎಂದರು.
ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ವಡಗೇರಾ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಷುಮಿಯಾ ಮಿರ್ಚಿ, ಹೊನ್ನೇಶ ದೊಡ್ಡಮನಿ ಇತರರಿದ್ದರು.