ಜನ ಜಾಗೃತಿ ವೇದಿಕೆ ಸದಸ್ಯ ಅಭಿಮನ್ಯುಕುಮಾರ್ ಕಾರ್ಯಕ್ರಮ ಉದ್ಘಾಟನೆ ಜಯಕುಮಾರ್, ಅಚ್ಯುತ ಮುಂತಾದವರಿದ್ದಾರೆ. ಎಸ್‌ಎಸ್2ಪಾಲ್ಗೊಂಡ ವಿದ್ಯಾರ್ಥಿಗಳು 
ರಾಜ್ಯ

ದುಶ್ಚಟಮುಕ್ತ ಸ್ವಾಸ್ಥೃ ಸಂಕಲ್ಪದ ಉದ್ದೇಶ

ಶನಿವಾರಸಂತೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡಗು ಜಿಲ್ಲಾ ಜನ ಜಾಗೃತಿ ವೇದಿಕೆ ವತಿಯಿಂದ ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಅಭಿಮನ್ಯು ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಒಂದಾಗಿದೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಈ ಮೂಲಕವಾಗಿ ವಿದ್ಯಾರ್ಥಿಗಳು. ಯವ ಜನಾಂಗ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು
ಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ, ಸ್ವಾಸ್ಥೃ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು. ಆದರೆ ಇಂದು ಹೆಚ್ಚಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಮುಂತಾದ ದಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತವಾಗಿದೆ ಈ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಜೀವನಕ್ಕೆ ಮಾರಾಕವಾಗುವ ಬಗ್ಗೆ ಅರಿವು ಮೂಡಿಸುವುದ್ದರಿಂದ ದುಶ್ಟಟಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಮುಖ್ಯಶಿಕ್ಷಕಿ ಸುಚಿತ್ರಾ, ಗೋಲ್ಡನ್ ಶಾಲಾ ಮುಖ್ಯಶಿಕ್ಷಕ ಷಣ್ಮುಖಯ್ಯ, ಪ.ಪೂ. ಕಾಲೇಜು ಪ್ರಾಂಶುಪಾಲ ಮಹಮ್ಮದ್ ಜಾಹಿರ್, ಪೋಲೀಸ್ ಸಿಬ್ಬಂದಿ ಕೇಶವಮೂರ್ತಿ, ಜನ ಜಾಗೃತಿ ವೇದಿಕೆ ಸದಸ್ಯೆ ಪೂರ್ಣಿಮಾ, ತಾಲೂಕು ಆಂತರಿಕ ಲೆಕ್ಕ ಪರಿಶೋಧಕಿ ರೂಪಾ, ವಲಯ ಮೇಲ್ವಿಚಾರಕ ಅಚ್ಯುತ, ಸೇವಾ ಪ್ರತಿನಿಧಿ ಎಸ್.ಆರ್.ಶೋಭಾ ಹಾಜರಿದ್ದರು.